ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲೇಜಲ್ಲಿ ತಿಲಕ, ಬಳೆ ವಸ್ತ್ರಸಂಹಿತೆಗೆ ಒತ್ತಾಯಿಸಿಲ್ಲ

By Mahesh
|
Google Oneindia Kannada News

Vivekananda Vidyavardaka Sangha Notice row
ಪುತ್ತೂರು, ಆ.9: ಮುಂದಿನ ಶೈಕ್ಷಣಿಕ ವರ್ಷದಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದವರು ನಡೆಸುವ ಶಾಲಾ-ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಹಿಂದೂ ಸಂಪ್ರದಾಯಬದ್ಧ ವಸ್ತ್ರ ಸಂಹಿತೆ ಜಾರಿ ಆದೇಶ ಹೊರಡಿಸಲು ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿದೆ.

ಈ ಸುತ್ತೋಲೆ ಪ್ರಕಾರ ವಿದ್ಯಾರ್ಥಿನಿಯರು ಹಣೆಗೆ ತಿಲಕ ಹಾಗೂ ಕೈಗಳಿಗೆ ಬಳೆ ತೊಡುವುದು ಕಡ್ಡಾಯಗೊಳಿಸಲಾಗಿದೆ. ಆದರೆ, ಈ ಸುತ್ತೋಲೆ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದ್ಯಾವರ್ಧಕ ಸಂಘದ ವಕ್ತಾರರು 'ನಾವು ಈ ರೀತಿ ಸುತ್ತೋಲೆ ಕಳಿಸಿಲ್ಲ. ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿಲ್ಲ' ಎಂದು ಗುರುವಾರ(ಆ.9) ಹೇಳಿದ್ದಾರೆ.

ಪುತ್ತೂರು ವಿದ್ಯಾವರ್ಧಕ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 41ಕ್ಕೂ ಅಧಿಕ ಶಾಲಾ-ಕಾಲೇಜುಗಳು ನಡೆಯುತ್ತಿವೆ. ಈ ಕಾಲೇಜುಗಳಿಗೆ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಹೋಗುತ್ತಾರೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆ ಉದ್ಬವಾಗಿಲ್ಲ. ಎಲ್ಲರೂ ಸೌಹಾರ್ದದಿಂದ ವ್ಯಾಸಂಗ ನಡೆಸಿಕೊಂಡು ಬರುತ್ತಿದ್ದಾರೆ.

ವಿದ್ಯಾರ್ಥಿಗಳು ಹಣೆಗೆ ತಿಲಕ ಹಾಗೂ ವಿದ್ಯಾರ್ಥಿನಿಯರು ತಿಲಕ, ಬಳೆ, ಗೆಜ್ಜೆ ಧರಿಸಿ ಕಾಲೇಜಿಗೆ ಬರಬೇಕು. ಕಾಲೇಜಿನಲ್ಲಿ ಪ್ರವಾಸ ಹಾಗೂ ಪ್ರಾಜೆಕ್ಟ್ ವರ್ಕ್ ಮೇಲೆ ತೆರಳುವ ವಿದ್ಯಾರ್ಥಿಗಳು ಪ್ರತಿ ಬಾರಿಯೂ ಪ್ರಾಂಶುಪಾಲರ ಅನುಮತಿ ಪಡೆಯತಕ್ಕದ್ದು.

ಮೂರನೇಯದಾಗಿ ವಾರದ ಎಲ್ಲಾ ದಿನಗಳಲ್ಲಿಯೂ ಸಮವಸ್ತ್ರ ಕಡ್ಡಾಯ. ನಾಲ್ಕನೇಯದಾಗಿ ಕಾಲೇಜಿನ ಮುಖ್ಯ ದ್ವಾರದಿಂದ ಸಮವಸ್ತ್ರವನ್ನು ಧರಿಸಿಯೇ ಕಾಲೇಜು ಆವರಣ ಪ್ರವೇಶಿಸಿಬೇಕು ಎಂಬ ನಾಲ್ಕು ನಿಯಮಗಳನ್ನು ಪಾಲಿಸುವಂತೆ ವಿದ್ಯಾವರ್ಧಕ ಸಂಘದಿಂದ ನಡೆಸುವ ಎಲ್ಲಾ ಕಾಲೇಜು ಆಡಳಿತ ಮಂಡಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿತ್ತು.

ಈ ಸುತ್ತೋಲೆ ಕೆಲ ಶಾಲಾ ಕಾಲೇಜು ತಲುಪಿದ ನಂತರ ವಿವಾದ ಕಿಡಿ ಹತ್ತಿಕೊಂಡಿತು. ಅನ್ಯಧರ್ಮೀಯ ವಿದ್ಯಾರ್ಥಿ/ನಿಯರಿಗೆ ಈ ನಿಯಮ ಜಾರಿಯಾಗುತ್ತದೆಯೇ? ಇಸ್ಲಾಂ ಧರ್ಮೀಯರಿಗೆ ಬುರ್ಖಾ, ಶಿರವಸ್ತ್ರ ನಿಷೇಧ ಹೇರುವುದನ್ನು ಸಮರ್ಥಿಸಿಕೊಳ್ಳಲಾಗಿತ್ತು.

ಸಂಘದ ಸಮರ್ಥನೆ: ವಸ್ತ್ರಸಂಹಿತೆ ನಿಯಮ ಹೊಸದೇನಲ್ಲ. 1965ರಿಂದ ಇದೆ. ಆದರೆ, ಈ ನಿಯಮ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದಕ್ಕೆ ಅಥವಾ ಬೇಧ ಭಾವ ಉಂಟುಮಾಡಲು ಜಾರಿಗೆ ತರುತ್ತಿಲ್ಲ.

ಈ ಸುತ್ತೋಲೆ ಬಗ್ಗೆ ಯಾವೊಬ್ಬ ಪೋಷಕರು, ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿಲ್ಲ. ನಮ್ಮ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ತಿಲಕ ಮತ್ತು ಬಳೆ ಧರಿಸಿಕೊಂಡೇ ಕಾಲೇಜಿಗೆ ಹಾಜರಾಗಬೇಕು ಎಂಬ ಕಡ್ಡಾಯ
ನಿಯಮ ಜಾರಿಗೊಳಿಸಿಲ್ಲ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಕೀಲ ಇ. ಶಿವಪ್ರಸಾದ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಹಾಗೂ ಬಂಟ್ವಾಳ ತಾಲೂಕಿನ 41 ವಿದ್ಯಾಸಂಸ್ಥೆಗಳು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರಲಿದೆ. ಸುಮಾರು 15,200 ವಿದ್ಯಾರ್ಥಿಗಳಿಗೆ ಈ ನಿಯಮ ಜಾರಿಗೊಳ್ಳಲಿದ್ದು, ಈ ಪೈಕಿ 100-110 ಜನ ಮಾತ್ರ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದಾರೆ.

ವಿದ್ಯಾರ್ಥಿನಿಯರು ಕಾಲೇಜಿನ ನಿಯಮವನ್ನು ಸಮರ್ಥಿಸಿಕೊಂಡಿದ್ದು, ಬಳೆ ಹಾಗೂ ತಿಲಕ ಇಡುವುದರ ಹಿಂದೆ ವೈಜ್ಞಾನಿಕ ಹಿನ್ನೆಲೆಯಿದೆ. ಹಿಂದೂ ಧರ್ಮ, ಸಂಸ್ಕೃತಿ ಪ್ರತೀಕವಾದ ವಸ್ತುಗಳನ್ನು ಧರಿಸುವುದರಲ್ಲಿ ತಪ್ಪೇನಿದೆ. ನಮ್ಮ ಸಹಪಾಠಿಗಳು ಬುರ್ಖಾ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಕಾಲೇಜಿನ ಆವರಣದಲ್ಲಿ ಮಾತ್ರ ಬುರ್ಖಾಗೆ ನಿಷೇಧ ಹೇರಲಾಗಿದೆ. ಪರಸ್ಪರ ಧರ್ಮವನ್ನು ಗೌರವಿಸಲಾಗುತ್ತಿದೆ ಎಂದಿದ್ದಾರೆ.

English summary
Vivekananda Vidyavardaka Sangha (VVS) institution board has declined sending notice to over 41 institutions to make uniforms compulsory with tilak and bangleses el for Hindu students and faculty. Earlier Same Instituion in Dakshina Kannada district has issued guidelines to ban hijab in college
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X