ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್ ಕಾಡುತ್ತಿರುವ 'ಕಾಂಗರೂ ಕಾಂಡೋಮ್ಸ್'

By Mahesh
|
Google Oneindia Kannada News

ಲಂಡನ್, ಆ.8: 17 ದಿನಗಳ ಕ್ರೀಡಾ ಹಬ್ಬದ ಸಂದರ್ಭದಲ್ಲಿ ಪ್ರತಿ ಕ್ರೀಡಾಪಟುವಿಗೆ ದಿನವೊಂದಕ್ಕೆ 15 ಕಾಂಡೋಮ್ ನೀಡಲಾಗಿದೆ. ಸುಮಾರು 150,000 ಕಾಂಡೋಮ್ ಗಳನ್ನು ಡ್ಯೂರೆಕ್ಸ್ ಕಂಪನಿ ಉಚಿತವಾಗಿ ಹಂಚಿದೆ. ಆದರೆ, ಈಗ ಹೊಸ ಸಮಸ್ಯೆ ಶುರುವಾಗಿದೆ. 'ಕಾಂಗರೂ ಕಾಂಡೋಮ್' ಗಳ ರಾಶಿ ಒಲಿಂಪಿಕ್ಸ್ ಆಯೋಜಕರಿಗೆ ದೊಡ್ಡ ತಲೆನೋವು ತಂದಿದೆ.

ಆಸ್ಟ್ರೇಲಿಯಾದ ಮಹಿಳಾ ಸೈಕಲಿಸ್ಟ್ ಕರೋಲಿನ್ ಬುಚನನ್ ಅವರು ಕ್ರೀಡಾಗ್ರಾಮದಲ್ಲಿ "Kangaroos condoms, for the gland downunder" ಎಂಬ ಪ್ಲಕಾರ್ಡ್ ಅಡಿ ಬಿದ್ದಿದ್ದ ಕಾಂಡೋಮ್ ಡಬ್ಬದ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ವಿಷಯ ಮೊಟ್ಟ ಮೊದಲಿಗೆ ಬಹಿರಂಗಗೊಳಿಸಿದರು.

ಮಿಲಿಟರಿ ಸುರಕ್ಷತೆಯ ನಡುವೆ ಕಾಂಗರೂ ಕಾಂಡೋಮ್ ಒಲಿಂಪಿಕ್ಸ್ ಗ್ರಾಮದಲ್ಲಿ ಸುಳಿದಾಡುತ್ತಿರುವುದಾದರೂ ಹೇಗೆ? ಡ್ಯೂರೆಕ್ಸ್ ಕಂಪನಿಯ ಎದುರಾಳಿ ಸಂಸ್ಥೆ ಅನ್ಸೆಲ್ ಲಿಮಿಟೆಡ್ ನ ಕಾಂಡೋಮ್ ಗಳನ್ನು ಹೊತ್ತ ಸಣ್ಣ ಪೆಟ್ಟಿಗೆಗಳು ಅಲ್ಲಲ್ಲಿ ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾ ಮೂಲದ ಆನ್ಸೆಲ್ ಹಾಗೂ ಬ್ರಿಟಿಷ್ ಕಂಪನಿ ಪಾಸಂಟೆ ಸೇರಿಕೊಂಡು ಡ್ಯೂರೆಕ್ಸ್ ಕಂಪನಿ ವಿರುದ್ಧ ಕಾರ್ಯಾಚರಣೆ ನಡೆಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಬಹುಶಃ ಕ್ರೀಡಾ ಗ್ರಾಮದ ಅಧಿಕಾರಿಗಳು ತಮ್ಮ ಸ್ವಂತ ಉಪಯೋಗಕ್ಕೆ ಈ ಕಾಂಡೋಮ್ ಗಳ ಬಾಕ್ಸ್ ತಂದಿರಬಹುದು ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಡ್ಯೂರೆಕ್ಸ್ ನಮ್ಮ ಪ್ರಾಯೋಜಕರಾಗಿರುವಾಗ ವಿರುದ್ಧ ಸಂಸ್ಥೆಗೆ ಪ್ರಚಾರ ಕೊಡುವುದು ಸರಿ ಇಲ್ಲ ಎಂದು ಒಲಿಂಪಿಕ್ಸ್ ಆಯೋಜಕರು ಹೇಳಿದ್ದಾರೆ.

ಪ್ರಾಯೋಕತೆ ಪಡೆಯಲು ಅನರ್ಹವಾದ ಸಂಸ್ಥೆಗಳಿಗೆ ಪುಕ್ಕಟೆ ಪ್ರಚಾರ ಸಿಗುವುದು ಹಾಗೂ ಇತರೆ ಸಂಸ್ಥೆ ಕಾಂಡೋಮ್ ಬಳಸಿ ಅಥ್ಲೀಟ್ ಗಳಿಗೆ ಅನನುಕೂಲವಾದರೆ ಆಯೋಜಕರೇ ಹೊಣೆ ಹೊರಬೇಕಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ಆಯೋಜಕರನ್ನು ಟೀಕಿಸಿದೆ.

ಸುಮ್ಮನೆ ಕೀಟಲೆಗೆ ಯಾರೋ ಕಾಂಡೋಮ್ ಇರುವ ಡಬ್ಬ ಅಲ್ಲಿ ಹಾಕಿರಬಹುದು. ಒಲಿಂಪಿಕ್ಸ್ ಪ್ರಾಯೋಜಕತ್ವ ಮಾಡುತ್ತಿಲ್ಲ ಹಾಗೂ ಈ ರೀತಿ ಹಿಂಬಾಗಿಲಿನಿಂದ ಪ್ರವೇಶ ಪಡೆದು ಪುಕ್ಕಟ್ಟೆ ಪ್ರಚಾರ ಪಡೆಯುವ ಅವಶ್ಯಕತೆ ನಮಗಿಲ್ಲ ಎಂದು ಅನ್ಸೆಲ್ ಸಂಸ್ಥೆ ವಕ್ತಾರರು ಹೇಳಿಕೊಂಡಿದ್ದಾರೆ.

ಕಾಂಡೋಮ್ ಕತೆ: 1992ರ ಬಾರ್ಸಿಲೋನ ಒಲಿಂಪಿಕ್ಸ್ ನಿಂದ ಆರಂಭವಾದ ಉಚಿತ ಕಾಂಡೋಮ್ ಹಂಚಿಕೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(IOC) ಅನುಮೋದನೆಯೂ ಇದೆ. ಏಡ್ಸ್ ತಡೆಗಟ್ಟಲು ಹಾಗೂ ಸುರಕ್ಷಿತ ಲೈಂಗಿಕತೆ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಕ್ರಮ ಅನಿವಾರ್ಯ ಹಾಗೂ ಅವಶ್ಯಕ ಎಂದು ಆಯೋಜಕರು ಸಮರ್ಥಿಸಿಕೊಂಡಿದ್ದಾರೆ.

ಲಂಡನ್ ಒಲಿಂಪಿಕ್ಸ್ ನ ಆಯೋಜಕರಾದ LOCOG, 10,800 ಅಥ್ಲೀಟ್ ಗಳಿಗೆ 150,000 ಕಾಂಡೋಮ್ ಹಂಚಿದ್ದಾರೆ. Reckitt Benckiser ಗ್ರಾಹಕ ಸಂಸ್ಥೆ ಡ್ಯೂರೆಕ್ಸ್ ಕಾಂಡೋಮ್ ಸರಬರಾಜಿನಲ್ಲಿ ವ್ಯತ್ಯಯ ಬರದಂತೆ ನೋಡಿಕೊಂಡಿದೆ.

ಸಿಯೋಲ್ ನಲ್ಲಿ 8,500 ಕಾಂಡೋಮ್ ಮಾತ್ರ ಪೂರೈಸಲಾಗಿತ್ತು. 1992ರ ಬಾರ್ಸಿಲೋನ ಒಲಿಂಪಿಕ್ಸ್ ನಲ್ಲಿ ಈ ಸಂಖ್ಯೆ 50,000 ಮುಟ್ಟಿತ್ತು. 2000ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ 70,000 ಕಾಂಡೋಮ್ ನೀಡಲಾಗಿತ್ತು.

ಸುರಕ್ಷಿತ ಮಿಲನ ನಮ್ಮ ಗುರಿ: ವೇಶ್ಯಾವಾಟಿಕೆ ಮೇಲೆ ನಿಗಾ ಇಟ್ಟಿರುವ ಬ್ರಿಟಿಷ್ ಪೊಲೀಸರು ಹಾಗೂ ಬಿಟಿಷ್ ಆರೋಗ್ಯ ಕೇಂದ್ರಗಳು ಎಲ್ಲೆಡೆ ಸುರಕ್ಷಿತ ಮಿಲನದ ಬಗ್ಗೆ ಮಾಹಿತಿ, ಸಲಹೆ ನೀಡುತ್ತಿದ್ದಾರೆ. ಲೈಂಗಿಕ ರೋಗಗಳ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಲಾಗಿದೆ.

ಎಲ್ಲೆಡೆ just in case ಕಿಟ್ ಗಳನ್ನು ವಿತರಿಸಲಾಗುವುದು. ಮಹಿಳಾ ಅಥ್ಲೀಟ್ ಗಳಿಗೆ ಅಗತ್ಯವಾದ ಐಪಿಲ್ ಗಳನ್ನು ನೀಡಲಾಗುವುದು ಎಂದು British Pregnancy Advisory Service ಹೇಳಿದೆ. ಇದಲ್ಲದೆ ಸ್ಪರ್ಧಾಳುಗಳಿಗೆ ಉಚಿತ ಮಸಾಜಿಂಗ್, ENT, ದಂತ ಚಿಕಿತ್ಸೆ ದೊರೆಯಲಿದೆ.

English summary
London Olympic organisers worry continuous as a bucket of Australian-tagged condoms(Kangaroo condoms?) found its way into the athletes' village without official consent. LOCOG, have provided 150,000 free condoms in dispensers for the 10,800 athletes at the Games supplied by Durex
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X