ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಹೀರ್ ಖಾನ್ ಗೆ ವೇಗದ ಓಟಗಾರ ಬ್ಲೇಕ್ ಚಾಲೆಂಜ್

By Mahesh
|
Google Oneindia Kannada News

ಲಂಡನ್, ಆ.7: ಯೋಹಾನ್ ಬ್ಲೇಕ್ ವಿಶ್ವದ ಅತ್ಯಂತ ವೇಗದ ಓಟಗಾರರಲ್ಲಿ ಒಬ್ಬ. ಲಂಡನ್ ಒಲಿಂಪಿಕ್ಸ್ 2012ರಲ್ಲಿ ಉಸೇನ್ ಬೋಲ್ಟ್ ಸರಿ ಸಮಕ್ಕೂ ಓಡಿ ಎರಡನೇ ವೇಗದ ಓಟಗಾರ ಎನಿಸಿಕೊಂಡವ. ಇಂಥ ಬ್ಲೇಕ್ ಮುಂಬರುವ ಐಪಿಎಲ್ ನಲ್ಲಿ ಭಾರತದ ವೇಗಿ ಜಹೀರ್ ಖಾನ್ ಸರಿ ಸಮಕ್ಕೆ ಬೌಲಿಂಗ್ ಮಾಡಬಲ್ಲೇ ಎಂದು ಸವಾಲು ಹಾಕಿದ್ದಾನೆ. ಎಲ್ಲಿಯ ಒಲಿಂಪಿಕ್ಸ್ ಎಲ್ಲಿಯ ಕ್ರಿಕೆಟ್ ಎಂದು ಜನ ಅಚ್ಚರಿ ಪಡುವ ಮೊದಲೇ ಬ್ಲೇಕ್ ಪೂರ್ವಾಪರ ತಿಳಿದುಕೊಂಡರೆ ಸಲೀಸು.

ಲಂಡನ್ ಒಲಿಂಪಿಕ್ಸ್ 2012ನಲ್ಲಿ 100 ಮೀ ಅಂತಿಮ ಸ್ಪರ್ಧೆಯಲ್ಲಿ ಸಮೀಪದ ಸ್ಪರ್ಧಿ ಕಮ್ ಗೆಳೆಯ ಉಸೇನ್ ಬೋಲ್ಟ್ ಸಮಕ್ಕೆ ಓಡಲಾಗದೆ 9.75 ಸೆ.ಗಳಲ್ಲಿ ಗುರಿಮುಟ್ಟಿದ ಬ್ಲೇಕ್ ಬೆಳ್ಳಿ ಪದಕ ಗಳಿಸಿದರು. 22 ವರ್ಷದ ಜಮೈಕಾದ ಹೆಮ್ಮೆಯ ಯುವಕ ಬ್ಲೇಕ್ ಅವರು ಮುಂದೆ ಬೋಲ್ಟ್ ಅವರ ಉತ್ತರಾಧಿಕಾರಿಯಾಗುತ್ತಾರೆ ಎಂದು ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2016 ರ ರಿಯೋ ಒಲಿಂಪಿಕ್ಸ್ ಗೇಮ್ಸ್ ನಲ್ಲಿ 100 ಮೀ ಚಿನ್ನ ಗಳಿಸುವುದು ಬ್ಲೇಕ್ ಮುಂದಿನ ಗುರಿ ಎಂದು ತಿಳಿದಿದ್ದರೆ ಅದು ನಮ್ಮ ತಪ್ಪು.

ಬ್ಲೇಕ್ ಗುರಿ ಬೇರೆಯೇ ಇದೆ. ಅದನ್ನು ಅವರು ಓಟದ ನಂತರ ಮಾಧ್ಯಮ ಮಿತ್ರರೊಡನೆ ಕಾಲ ಕಳೆಯುವಾಗ ಹಂಚಿಕೊಂಡಿದ್ದಾರೆ. ಡಿಎನ್ ಎ ಪತ್ರಿಕೆಯ ಪ್ರತಿನಿಧಿಗಳ ಬ್ಯಾಡ್ಜ್ ನೋಡುತ್ತಾ ನೀವು ಭಾರತದಿಂದ ಬಂದಿದ್ದೀರಾ? ಎಂದು ಪ್ರಶ್ನಿಸಿ, ಉತ್ತರ ಹೇಳುವ ಮೊದಲೇ 'ನಿಮಗೆ ಗೊತ್ತಾ? ನಾನು ಮುಂದಿನ ವರ್ಷ ಭಾರತಕ್ಕೆ ಬರುತ್ತಿದ್ದೇನೆ. ಐಪಿಎಲ್ ಅಡುತ್ತಿದ್ದೇನೆ?" ಎನ್ನುವ ಮೂಲಕ ಅಚ್ಚರಿ ಮೂಡಿಸಿಬಿಟ್ಟರು.

ಕ್ರಿಕೆಟ್ ಹಾಗೂ ಬ್ಲೇಕ್: ಹೌದು, ಬೇರೆ ಎಲ್ಲಾ ಜಮೈಕಾ ಯುವ ಜನಾಂಗದಂತೆ ಬ್ಲೇಕ್ ಕೂಡಾ ಅಥ್ಲೆಟಿಕ್ಸ್ ಬಿಟ್ಟರೆ ಕ್ರಿಕೆಟ್ ಹಾಗೂ ಸಂಗೀತ ಎಂದರೆ ಪಂಚಪ್ರಾಣ. ಕ್ರಿಕೆಟ್ ಆಕರ್ಷಣೆಯಿಂದ ಉಸೇನ್ ಬೋಲ್ಟ್ ಕೂಡಾ ಹೊರತಾಗಿಲ್ಲ, ಜಮೈಕಾದ ಕಿಂಗ್ ಸ್ಟನ್ ಕ್ರಿಕೆಟ್ ಕ್ಲಬ್ ನಲ್ಲಿ ಕೆಲ ವರ್ಷ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಬ್ಲೇಕ್, ಬಲಗೈ ವೇಗದ ಬೌಲರ್ ಆಗಿದ್ದರು. ಈಗ ಅದೇ ಹುಮ್ಮಸ್ಸಿನಲ್ಲಿ ಜಹೀರ್ ಖಾನ್ ನಷ್ಟು ವೇಗವಾಗಿ ಚೆಂಡನ್ನು ಎಸೆಯಬಲ್ಲ ಎಂದು ಚಾಲೆಂಜ್ ಹಾಕಿದ್ದಾರೆ. ಬೋಲ್ಟ್ ಹಾಗೂ ಬ್ಲೇಕ್ ಇಬ್ಬರು ಅಥ್ಲೆಟಿಕ್ಸ್ ಅಲ್ಲದೆ ಕ್ರಿಕೆಟ್ ನಲ್ಲೂ ಸಹಪಾಠಿಗಳಾಗಿದ್ದರು ಎಂಬುದು ವಿಶೇಷ.

"ನನಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಜಹೀರ್ ಖಾನ್ ಅವರಷ್ಟು ವೇಗವಾಗಿ ಬೌಲ್ ಮಾಡಬಲ್ಲೆ ಎಂದಿರುವ ಬ್ಲೇಕ್, ನನಗೆ ಟೀಂ ಇಂಡಿಯಾದ ಪ್ರಮುಖ ಆಟಗಾರರು ಗೊತ್ತು. ಕಳೆದ ಬಾರಿ ಕೆರಿಬಿಯನ್ ಪ್ರವಾಸ ಮಾಡಿದ್ದಾಗ ಹತ್ತಿರದಿಂದ ನೋಡಿದ್ದೇನೆ ಎಂದಿದ್ದಾರೆ. ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ವಿರೇಂದರ್ ಸೆಹ್ವಾಗ್, ರಾಹುಲ್ ದ್ರಾವಿಡ್ ಆಟ ಬ್ಲೇಕ್ ಗೆ ಇಷ್ಟ.

ಅದರಲ್ಲೂ ಬ್ರಿಯಾನ್ ಲಾರಾ ಹಾಗೂ ಸಚಿನ್ ತೆಂಡೂಲ್ಕರ್ ಎಂದರೆ ಸಕತ್ ಹುಚ್ಚು. ಈಗ ಸದ್ಯಕ್ಕೆ ವಿರಾಟ್ ಕೊಹ್ಲಿ ಮೇಲೆ ಬ್ಲೇಕ್ ಹುಚ್ಚು ತಿರುಗಿದೆ. 'ಅಬ್ಬಾ! ಕೊಹ್ಲಿ ಏನು ಸಕತ್ ಆಗಿ ಬೌಂಡರಿ ಹೊಡೆಯುತ್ತಾನೆ ' ಎಂದು ಬ್ಲೇಕ್ ಉದ್ಗರಿಸುತ್ತಾನೆ.

ಕಳೆದ ಬಾರಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ನನ್ನ ಕೋಚ್ ವಿಶ್ರಾಂತಿ ಬೇಕು ಎಂದುಬಿಟ್ಟರು. ಆದರೆ, ಮುಂದಿನ ಬಾರಿ ನಾನು ಭಾರತಕ್ಕೆ ಬಂದರೆ ಅಥ್ಲೀಟ್ ಆಗಿ ಬರುವುದಿಲ್ಲ. ಕ್ರಿಕೆಟರ್ ಆಗಿ ಬರುತ್ತೇನೆ. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆಡುವುದು ನನ್ನ ಗುರಿ. ಅದಕ್ಕಾಗಿ ಪ್ರಯತ್ನ ಪಡುತ್ತಿದ್ದೇನೆ ಎಂದು ಹೇಳಿದ್ದಾನೆ,

ವೆಸ್ಟ್ ಇಂಡೀಸ್ ಸೂಪರ್ ಸ್ಟಾರ್ ಗೆಳೆಯ ಕ್ರಿಸ್ ಗೇಲ್ ನನಗೆ ಕ್ರಿಕೆಟ್ ಅನ್ನು ವೃತ್ತಿಯಾಗಿ ಸ್ವೀಕರಿಸುವಂತೆ ಅನೇಕ ಬಾರಿ ಹೇಳಿದ್ದಾನೆ. ಆತನ ಆಟ ನನಗೆ ಸ್ಪೂರ್ತಿ ಕೊಡುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕ್ರಿಸ್ ಗೇಲ್ ಜೊತೆ ಆಡುವ ಬಯಕೆ ಇದೆ. ಜಹೀರ್ ಖಾನ್ ಸರಿ ಸಮಕ್ಕೂ ವೇಗದ ಬೌಲಿಂಗ್ ಮಾಡುವ ಕನಸಿದೆ ಎಂದು 22 ರ ಹರೆಯ ದೈತ್ಯ ವೇಗದ ಓಟಗಾರ ಬ್ಲೇಕ್ ಹೇಳಿರುವುದು ಇನ್ನೂ ವಿಜಯ್ ಮಲ್ಯ ಸಾಹೇಬ್ರ ಕಿವಿಗೆ ಯಾಕೋ ಬಿದ್ದ ಹಾಗಿಲ್ಲ. ಯಾವುದಕ್ಕೂ ಮುಂದಿನ ಐಪಿಎಲ್ ವರೆಗೂ ಕಾದು ನೋಡೋಣ...ಗೇಲ್ ರನ್ನು ಕರೆ ತಂದಂತೆ ಬ್ಲೇಕ್ ರನ್ನು ಬೆಂಗಳೂರಿಗೆ ಮಲ್ಯ ಕರೆಸಿಕೊಂಡರೂ ಕವಡೆ ಕಾಸು ಕೂಡ ಗಿಟ್ಟುವುದಿಲ್ಲ ಎಂಬ ಸತ್ಯ ಬ್ಲೇಕ್ ಗೆ ಪಾಪ ತಿಳಿದಿಲ್ಲ.

English summary
The Second fastest man on the planet Yohan Blake is not a lesser showman than his friend competitor Usain Bolt. Like every Jamaican Blake loves Cricket, Music beside athletics. 22 year old Blake now aim to play in IPL and along with his friend Chris Gayle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X