ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.7 ವಿಜೇಂದರ್ ಔಟ್, ವಿಕಾಸ್ ಮೇಲೆ ಭರವಸೆ

By Mahesh
|
Google Oneindia Kannada News

Vijender Singh
ಲಂಡನ್, ಆ.7: ಒಲಿಂಪಿಕ್ಸ್ 2012ರಲ್ಲಿ ಬಾಕ್ಸಿಂಗ್ ಪಟುಗಳಿಗೆ ಲಕ್ ಇಲ್ಲದ್ದಂತಾಗಿದೆ. ಜೈ ಭಗವಾನ್, ವಿಕಾಸ್ ಕೃಷ್ಣನ್ ಹಾಗೂ ಮನೋಜ್ ಕುಮಾರ್ ನಂತರ ವಿಜೇಂದರ್ ಸಿಂಗ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಮತ್ತೊಮ್ಮೆ ರೆಫ್ರಿ ಮೇಲೆ ಭಾರತ ಕಿಡಿ ಕಾರಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಮೇರಿ ಕೋಮ್ ಮಾತ್ರ ಪದಕ ಗೆಲ್ಲುವ ನಿರೀಕ್ಷೆ ಜೀವಂತವಾಗಿರಿಸಿದ್ದಾರೆ.

ಉಳಿದಂತೆ ಭಾರತ ತಂಡ ಕರ್ನಾಟಕ ವಿಕಾಸ್ ಗೌಡ ಅವರ ಡಿಸ್ಕಸ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ. ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಫೈನಲ್ ಗೇರಿದ 7ನೇ ಭಾರತೀಯ ಎಂಬ ಕೀರ್ತಿಗೆ ಮೈಸೂರಿನ ವಿಕಾಸ್ ಪಾತ್ರರಾಗಿದ್ದಾರೆ.

ಸೋಮವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ವಿಕಾಸ್ 65.20 ಮೀ ದೂರ ಡಿಸ್ಕಸ್ ಎಸೆಯುವ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿದರು, ಮಂಗಳವಾರ ತಡರಾತ್ರಿ ಫೈನಲ್ ಸುತ್ತಿನ ಪಂದ್ಯಗಳು ನಡೆಯಲಿದೆ.

ಒಲಿಂಪಿಕ್ಸ್ ನಲ್ಲಿ ಈ ವರೆಗೂ ಅಂತಿಮ ಸುತ್ತು ಪ್ರವೇಶಿದ ಭಾರತೀಯರು: ಮಿಲ್ಖಾ ಸಿಂಗ್ (400 ಮೀ, 1960), ಗುರುಬಚ್ಚನ್ ಸಿಂಗ್ ರಾಂಧ್ವಾ (110 ಮೀ ಹರ್ಡಲ್ಸ್, 1964), ಶ್ರೀರಾಮ್ ಸಿಂಗ್ (800 ಮೀ), ಪಿಟಿ ಉಷಾ (400 ಮೀ ಹರ್ಡಲ್ಸ್ 1984), ಅಂಜು ಬಾಬ್ಬಿ ಜಾರ್ಜ್ (ಲಾಂಗ್ ಜಂಪ್ 2004) ಮತ್ತು ಕೃಷ್ಣ ಪೂನಿಯಾ(ಡಿಸ್ಕಸ್ 2012)

ಶೂಟಿಂಗ್: ಕಂಚಿನ ಪದಕವೀರ ಗಗನ್ ನಾರಂಗ್ ಅವರು ಪುರುಷರ 50 ಮೀ ರೈಫಲ್ 3 ಪೊಶಿಷನ್ ನಲ್ಲಿ 25 ಸ್ಥಾನ ಗಳಿಸಿ ನಿರಾಶೆ ಮೂಡಿಸಿದರು. ಮತ್ತೊಬ್ಬ ಸ್ಪರ್ಧಿ ಸಂಜೀವ್ ರಜಪೂತ್ ಫೈನಲ್ ನಲ್ಲಿ ಕಳಪೆ ಪ್ರದರ್ಶನ ನೀಡಿ 26ನೇ ಸ್ಥಾನಕ್ಕಿಳಿದರು.

ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಮಾನವ ಜಿತ್ ಸಿಂಗ್ ಅರ್ಹತಾ ಸುತ್ತಿನಲ್ಲಿ 16ನೇ ಸ್ಥಾನ ಗಳಿಸಿ ಫೈನಲ್ ಸುತ್ತು ಪ್ರವೇಶಿಸುವಲ್ಲಿ ವಿಫಲರಾದರು.

ಬಾಕ್ಸಿಂಗ್: ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಪದಕ ಗಳಿಸುವುದು ಖಚಿತವಾಗಿದೆ. ಭಾನುವಾರ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಕಣಕ್ಕಿಳಿದಿದ್ದ ಮೇರಿ, ಸೋಮವಾರ ಸಂಜೆ ಅದ್ಭುತ ಆಟ ಪ್ರದರ್ಶಿಸಿ ಕ್ವಾಟರ್ ಫೈನಲ್ ನಲ್ಲಿ ಭರ್ಜರಿ ಜಯ ದಾಖಲಿಸಿ, ಸೆಮಿಫೈನಲ್ ಪ್ರವೇಶಿಸಿದರು.

[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]

ಆ.7 2012, ಮಂಗಳವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಅಥ್ಲೆಟಿಕ್ಸ್ : ರಾತ್ರಿ 12.15
ಪುರುಷರ ಡಿಸ್ಕಸ್ ಥ್ರೋ ಫೈನಲ್: ವಿಕಾಸ್ ಗೌಡ

ಮಧ್ಯಾಹ್ನ: 3.30: ಪುರುಷರ ಟ್ರಿಪಲ್ ಜಂಪ್
ಅರ್ಹತಾ ಸುತ್ತು: ರಂಜಿತ್ ಮಹೇಶ್ವರಿ

ಹಾಕಿ: ಭಾರತ vs ಬೆಲ್ಜಿಯಂ

English summary
Five-time world champion MC Mary Kom (51kg) assured a medal in London Olympics 2012. After Vijender out of contest now India ope on Athletics perticularly Vikas Gowda in Discuss throw. Ranjith Maheshwari is also in action toay Triple Jump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X