ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಕಾಂಗ್ನಿಜೆಂಟ್

By Mahesh
|
Google Oneindia Kannada News

Congnizant posts 21 pc net growth
ಚೆನ್ನೈ, ಆ.7: ಪ್ರಸಕ್ತ ತ್ರೈಮಾಸಿಕದಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಕಾಂಗ್ನಿಜೆಂಟ್ ಸಂಸ್ಥೆ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಅನ್ನು ಮೀರಿ ಮುನ್ನಡೆದಿದೆ. ಡಾಲರ್ ಆದಾಯದಲ್ಲಿ ಟಿಸಿಎಸ್ 2.73 ಬಿಲಿಯನ್ ಡಾಲರ್ ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ,ಕಾಂಗ್ನಿಜೆಂಟ್ 1.79 ಬಿಲಿಯನ್ ಡಾಲರ್ ಆದಾಯ ಗಳಿಸಿ ಎರಡನೇ ಸ್ಥಾನಕ್ಕೇರಿದೆ. ಇನ್ಫೋಸಿಸ್ ಸಂಸ್ಥೆ 1.75 ಬಿಲಿಯನ್ ಡಾಲರ್ ಆದಾಯದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

ವಿಶೇಷವೆಂದರೆ ವಾರ್ಷಿಕ ಪ್ರಗತಿ (Y-o-Y) ನಲ್ಲಿ ಟಿಸಿಎಸ್ 13.1% ಪ್ರಗತಿ ಹಾಗೂ ಇನ್ಫೋಸಿಸ್ 4.8% ರಷ್ಟು ಪ್ರಗತಿ ಸಾಧಿಸಿದ್ದರೆ ಸಿಟಿಎಸ್ ಸಂಸ್ಥೆ 20% ರಷ್ಟು ಪ್ರಗತಿಯೊಂದಿಗೆ ಉತ್ತಮ ಅಂತರ ಕಾಯ್ದುಕೊಂಡಿದೆ.

ಸುಮಾರು ಎರಡು ದಶಕಗಳ ಕಾಲ ಎರಡನೇ ಸ್ಥಾನದಲ್ಲಿದ್ದ ಇನ್ಫೋಸಿಸ್ ಸಂಸ್ಥೆಗೆ ತೀವ್ರ ಮುಖಭಂಗ ಅನುಭವಿಸಿದೆ. ನ್ಯಾಸ್ಡಕ್ ನಲ್ಲೂ ಕಾಣಿಸಿಕೊಂಡಿರುವ ಕಾಂಗ್ನಿಜೆಂಟ್ ಸಂಸ್ಥೆಯ ಶೇ 75ಕ್ಕೂ ಅಧಿಕ ಉದ್ಯೋಗಿಗಳು ಭಾರತದ ಅಭಿವೃದ್ಧಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೇ 11-14ರಷ್ಟು ಕೈಗಾರಿಕಾ ಪ್ರಗತಿ ಕಾಣಲು ನಿರ್ದೇಶನ ನೀಡಿದ್ದ ನ್ಯಾಸ್ ಕಾಮ್ ಗೆ ಸಿಟಿಎಸ್ ಪ್ರಗತಿ ಕೊಂಚಮಟ್ಟಿಗೆ ನಿರಾಳತೆ ತಂದಿದೆ.

ಆದಾಯದ ಮೇಲೆ ಆದಾಯ: ಶೇ 21ರಷ್ಟು ನಿವ್ವಳ ಲಾಭದೊಂದಿಗೆ 252 ಮಿಲಿಯನ್ ಡಾಲರ್ ಗಳಿಸಿರುವ ಸಿಟಿಎಸ್, 2011ರ 2ನೇ ತ್ರೈಮಾಸಿಕದಲ್ಲಿ 208 ಮಿಲಿಯನ್ ಡಾಲರ್ ಮಾತ್ರ ಗಳಿಸಿತ್ತು. ಆದಾಯ 1.8 ಬಿಲಿಯನ್ ಡಾಲರ್ ನಂತೆ ಶೇ 20ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 1.5 ಬಿಲಿಯನ್ ಡಾಲರ್ ಇತ್ತು.

ಪ್ರಸಕ್ತ ತ್ರೈಮಾಸಿಕದಲ್ಲಿ ನಿವ್ವಳ ಉದ್ಯೋಗಿಗಳ ಸಂಖ್ಯೆ 4,700ಕ್ಕೇರಿದೆ. ನೇಮಕಾತಿಯಲ್ಲಿ ಶೇ 35ರಷ್ಟು ಪಾಲು ನೇರವಾಗಿ ಕಾಲೇಜು ಕ್ಯಾಂಪಸ್ ಸಂದರ್ಶನ ಮೂಲಕ ನಡೆದಿದೆ. ಶೇ 65 ರಷ್ಟು ಅನುಭವಿ ವೃತ್ತಿಪರರನ್ನು ಸೇರಿಸಿಕೊಳ್ಳಲಾಗಿದೆ. ಕಳೆದ ವರ್ಷ ಲಕ್ಷ ಉದ್ಯೋಗಿಗಳ ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಾಂಗ್ನಿಜೆಂಟ್ ಈಗ ಒಟ್ಟಾರೆ 1,45,000 ಉದ್ಯೋಗಿಗಳಿದ್ದಾರೆ.

ಮೂರನೇ ತ್ರೈಮಾಸಿಕದಲ್ಲಿ ಕನಿಷ್ಠ ಪಕ್ಷ 1.87 ಬಿಲಿಯನ್ ಡಾಲರ್ ಆದಾಯ ನಿರೀಕ್ಷಿಸಲಾಗಿದೆ. 2012ರ ಆರ್ಥಿಕ ವರ್ಷದ ಆದಾಯ ನಿರೀಕ್ಷೆ 7.34 ಬಿಲಿಯನ್ ಡಾಲರ್ ಗೇರಿದೆ. 2011ಕ್ಕೆ ಹೋಲಿಸಿದರೆ ಶೇ 20ರಷ್ಟು ಅಧಿಕವಾಗಿದೆ ಎಂದು ಕಾಂಗ್ನಿಜೆಂಟ್ ಅಧ್ಯಕ್ಷ ಗಾರ್ಡನ್ ಕೊಬರ್ನ್ ಹೇಳಿದ್ದಾರೆ.

ಎರಡನೇ ತ್ರೈಮಾಸಿಕದ ಕೊನೆಗೆ ಸಿಟಿಎಸ್ ಸಂಸ್ಥೆ 815 ರಿಂದ 202 ರಷ್ಟು ಸಕ್ರಿಯ ಗ್ರಾಹಕರನ್ನು ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸೋಷಿಯಲ್, ಮೊಬೈಲ್, ಅನಾಲಿಟಕಲ್ ಹಾಗೂ ಕ್ಲೌಡ್ ತಂತ್ರಜ್ಞಾನದಲ್ಲಿ ಕಾಂಗ್ನಿಜೆಂಟ್ ಉತ್ತಮ ಪ್ರಗತಿ ಸಾಧಿಸುವ ಗುರಿ ಇದೆ ಎಂದು ಸಿಇಒ ಫ್ರಾನ್ಸಿಸ್ಕೋ ಡಿ ಸೋಜಾ ಹೇಳಿದ್ದಾರೆ.

English summary
Cognizant Technology Solutions Corporation a leading provider of information technology, consulting, and business process outsourcing services, announced its second quarter 2012 financial results. revenue was up 21 per cent to $1.795 billion, largely due to increased demand for its outsourcing services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X