ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇರಿಗೆ ಅದ್ಭುತ ಜಯ, ಪದಕ ಗ್ಯಾರಂಟಿ

By Mahesh
|
Google Oneindia Kannada News

ಲಂಡನ್, ಆ.6: ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಪದಕ ಗಳಿಸುವುದು ಖಚಿತವಾಗಿದೆ. ಭಾನುವಾರ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಕಣಕ್ಕಿಳಿದಿದ್ದ ಮೇರಿ, ಸೋಮವಾರ ಸಂಜೆ ಅದ್ಭುತ ಆಟ ಪ್ರದರ್ಶಿಸಿ ಕ್ವಾಟರ್ ಫೈನಲ್ ನಲ್ಲಿ ಭರ್ಜರಿ ಜಯ ದಾಖಲಿಸಿ, ಸೆಮಿಫೈನಲ್ ಪ್ರವೇಶಿಸಿದ್ದಾರೆ.

Mary Kom
ಸೋಮವಾರ(ಆ.6) ಸಂಜೆ ನಡೆದ ಕ್ವಾಟರ್ ಫೈನಲ್ ನಲ್ಲಿ ಟುನೀಶಿಯಾದ ಮರೊವು ರಾಹಿಲ್ ವಿರುದ್ಧ 15-6 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬುಧವಾರ(ಆ.8)ರಂದು ಗ್ರೇಟ್ ಬಿಟನ್ ನ ನಿಕೋಲ್ ಆಡಮ್ ಅವರನ್ನು ಉಪಾಂತ್ಯದಲ್ಲಿ ಎದುರಿಸಲಿದ್ದಾರೆ. ನಿಕೋಲ್ ಅವರು ಬಲ್ಗೇರಿಯಾ ಸ್ಟೊಯ್ಕಾ ಪೆಟ್ರೋವಾ ಅವರನ್ನು 16-7 ಅಂತರದಿಂದ ಸೋಲಿಸಿ ಸೆಮಿಸ್ ಪ್ರವೇಶಿಸಿದರು.

ಮಹಿಳಾ ಬಾಕ್ಸಿಂಗ್ ನ 51 ಕೆಜಿ ಫ್ಲೈವೇಟ್ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಮೇರಿ ಅವರು ಪೋಲೆಂಡ್ ನ ಕ್ಯಾರೊಲಿನಾ ಮಿಚಾಲ್ ಜುಕ್ ಅವರನ್ನು 19-14ರ ಅಂತರದಲ್ಲಿ ಸೋಲಿಸಿದ್ದರು.

ಚಿನ್ನ ಗೆಲ್ಲುವ ಎಲ್ಲ ಕುರುಹು ತೋರಿರುವ ಮೇರಿ ಅವರಿಗೆ ಕನಿಷ್ಠ ಕಂಚಿನ ಪದಕವಂತೂ ಸಿಗುತ್ತದೆ. ಸೆಮಿಫೈನಲ್ ನಲ್ಲಿ ಭಾಗವಹಿಸುವ ಇಬ್ಬರೂ ಸ್ಪರ್ಧಿಗಳಿಗೆ ಪದಕ ಖಚಿತವಾಗಿ ದೊರೆಯಲಿದೆ.

ಒಲಿಂಪಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ ಪಾದಾರ್ಪಣೆ ಮಾಡಿರುವ 29 ವರ್ಷದ ಮೇರಿ ಕೋಮ್ ಅವರು ನಾಲ್ಕು ಸುತ್ತಿನಲ್ಲಿ 2, 3, 6 ಮತ್ತು 4 ಅಂಕಗಳಿಸಿದರೆ, ರಹಾಲೆ 1, 2, 1 ಮತ್ತು 2 ಅಂಕ ಗಳಿಸಿ ಸೋತರು.

ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲಿರುವ ಮೂರನೇ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಮೇರಿ ಪಾತ್ರರಾಗಿದ್ದಾರೆ. 2000ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಕರಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಸೈನಾ ನೆಹ್ವಾಲ್ ಲಂಡನ್ ಒಲಿಂಪಿಕ್ಸ್ 2012 ರ ಕಂಚಿನ ಪದಕ ಗೆದ್ದಿದ್ದಾರೆ.

46 ಹಾಗೂ 48 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಅವರು ಈ ಬಾರಿ ಮಹಿಳಾ ಬಾಕ್ಸಿಂಗ್ ನ 51 ಕೆಜಿ ಫ್ಲೈವೇಟ್ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಅವರು ಪೋಲೆಂಡ್ ನ ಕ್ಯಾರೊಲಿನಾ ಮಿಚಾಲ್ ಜುಕ್ ಅವರ ವಿರುದ್ಧ ಸೆಣಸುವ ಮೂಲಕ ಒಲಂಪಿಕ್ಸ್ ಗೆ ಪಾದರ್ಪಣೆ ಮಾಡಿದ್ದರು.

2 ಮಕ್ಕಳ ತಾಯಿ 29 ವರ್ಷದ ತಾಯಿ ಮೇರಿ ಕೋಮ್ ಅವರು 2 ಪಂದ್ಯ ಗೆದ್ದರೆ ಪದಕ ಖಾತ್ರಿಯಾಗಲಿದೆ. 46,48 ಕೆಜಿ ವಿಭಾಗದಲ್ಲಿ ವಿಶ್ವ ಹಾಗೂ ಏಷ್ಯನ್ ಚಾಂಪಿಯನ್ ಆಗಿದ್ದರು. ಒಲಿಂಪಿಕ್ಸ್ ನಲ್ಲಿ ಈ ಎರಡು ವಿಭಾಗ ಇಲ್ಲದ ಕಾರಣ 51 ಕೆಜಿ ವಿಭಾಗ ಸ್ಪರ್ಧಿಸಿದ್ದಾರೆ.

ಭಾರತದ ಬಾಕ್ಸಿಂಗ್ ಕ್ಷೇತ್ರದಲ್ಲಿ "Magnificent Mary", ಎಂದೇ ಕರೆಯಲ್ಪಡುವ ಮೇರಿ ಅವರಿಗೆ ಒಲಿಂಪಿಕ್ಸ್ ಗೆ ಪ್ರವೇಶಕ್ಕೂ ಮುನ್ನ ಭಾರಿ ಹಿನ್ನಡೆ ಉಂಟಾಗಿತ್ತು. ಮೇರಿ ಅವರಿಗೆ ತರಬೇತಿ ನೀಡುತ್ತಿರುವ ಅಮೆರಿಕ ಕೋಚ್ ಚಾರ್ಲ್ಸ್ ಅಟ್ಕಿಸನ್ ನೆರವಿಲ್ಲದೆ ಮೇರಿ ಕಣಕ್ಕಿಳಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ಸ್ ಕೋಚ್ ಗಳಿಗೆ ನೀಡುವ 3 ಸ್ಟಾರ್ ಪ್ರಮಾಣಪತ್ರ ಹೊಂದಿಲ್ಲದ ಕಾರಣ ಅವರಿಗೆ ಒಲಿಂಪಿಕ್ಸ್ ಗ್ರಾಮಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಹೀಗಾಗಿ ಕೋಚ್ ನೆರವಿಲ್ಲದೆ ಏಕಾಂಗಿಯಾಗಿ ಮೇರಿ ಕೋಮ್ ತರಬೇತಿ ಹೊಂದುತ್ತಿದ್ದಾರೆ.

ಸಂಭ್ರಮ, ದುಃಖ: ಇಂದು ನನ್ನ ಅವಳಿ ಗಂಡು ಮಕ್ಕಳ ಹುಟ್ಟು ಹಬ್ಬ, ಅವರ ಜತೆಯಲ್ಲಿ ಸಂಭ್ರಮ ಆಚರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಇಲ್ಲಿ ಭಾರತಕ್ಕಾಗಿ ನಾನು ಕಣಕ್ಕಿಳಿದು ಉತ್ತಮ ಹೋರಾಟ ನಡೆಸಿದ ತೃಪ್ತಿ ಇದೆ ಎಂದು ಮೇರಿ ಕೋಮ್ ಬೆಳಗ್ಗೆ ಹೇಳಿದ್ದರು.

English summary
"Magnificent" Mary Kom assured herself of a medal when she reached the semi-finals of the women's fly 51kg category at the London Olympics 2012 here on Monday(Aug.6)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X