ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.6 ಬಾಕ್ಸರ್ ಗಳ ಮೇಲೆ ಅಖಂಡ ಭಾರತದ ನಿರೀಕ್ಷೆ

By Mahesh
|
Google Oneindia Kannada News

ಲಂಡನ್, ಆ.6: ಲಂಡನ್ ಒಲಿಂಪಿಕ್ಸ್ 2012ರಲ್ಲಿ ಬಾಕ್ಸರ್ ಗಳು ಪದಕ ಗಳಿಸುವ ನಿರೀಕ್ಷೆ ಹುಟ್ಟಿಸಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಹಾಗೂ ವಿಜೇಂದರ್ ಸಿಂಗ್ ಕ್ವಾಟರ್ ಫೈನಲ್ ಸೋಮವಾರ(ಆ.6) ಪಂದ್ಯಗಳನ್ನಾಡುತ್ತಿದ್ದಾರೆ. ಹಾಕಿ ತಂಡದ ಸತತ ನಾಲ್ಕನೇ ಸೋಲಿನ ನಂತರ ಭಾರತದ ಪದಕ ನಿರೀಕ್ಷೆ ಈಗ ಬಾಕ್ಸರ್ ಗಳ ಮೇಲೆ ನೆಟ್ಟಿದೆ.

ಸೋಮವಾರ ಅಥ್ಲೆಟಿಕ್ಸ್ ನಲ್ಲಿ ಎನ್ನಾರೈ ಕನ್ನಡಿಗ ವಿಕಾಸ್ ಗೌಡ ಅವರು ಡಿಸ್ಕರ್ ಥ್ರೋ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉಳಿದಂತೆ ಗಗನ್ ನಾರಂಗ್, ಸಂಜೀವ್ ರಜಪೂತ್, ಮಾನವ್ ಜಿತ್ ಸಿಂಗ್ ಸಂಧು ಅವರ ಶೂಟಿಂಗ್ ಸ್ಪರ್ಧೆಗಳು ನಡೆಯಲಿದೆ. ಪದಕ ಪಟ್ಟಿಯಲ್ಲಿ ಭಾರತ 1 ಬೆಳ್ಳಿ, 2 ಕಂಚು ಪದಕದೊಂದಿಗೆ ಒಟ್ಟು 3 ಪದಕ ಗಳಿಸಿ 40ನೇ ಸ್ಥಾನದಲ್ಲಿದೆ.

[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]

ಆ.6 2012, ಸೋಮವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)

ಶೂಟಿಂಗ್: ಮಧ್ಯಾಹ್ನ 1.00
ಪುರುಷರ 50.ಮೀ ರೈಫಲ್ 3 ಪೊಸಿಷನ್

ಅರ್ಹತಾ ಸುತ್ತು- ಗಗನ್ ನಾರಂಗ್ ಮತ್ತು ಸಂಜೀವ್ ರಜಪೂತ್
ಸಂಜೆ 6.15: ಫೈನಲ್

ಮಧ್ಯಾಹ್ನ: 1.30: ಪುರುಷರ ಟ್ರ್ಯಾಪ್ : ಮಾನವ್ ಜಿತ್ ಸಿಂಗ್ ಸಂಧು
ರಾತ್ರಿ 8.30 : ಫೈನಲ್

ಬಾಕ್ಸಿಂಗ್: ಸಂಜೆ 6.30
ಮಹಿಳೆಯರ ಫ್ಲೈವೇಟ್ 51 ಕೆಜಿ ವಿಭಾಗ, ಕ್ವಾಟರ್ ಫೈನಲ್
ಎಂಸಿ ಮೇರಿ ಕೋಮ್ vs ಮರೋವು ರಹಾಲಿ (ಟುನೀಶಿಯಾ)

ರಾತ್ರಿ 2.30: ಪುರುಷರ ಮಿಡ್ಲ್ (75 ಕೆಜಿ) ಕ್ವಾಟರ್ ಫೈನಲ್
ವಿಜೇಂದರ್ ಸಿಂಗ್ vs ಅಬ್ಬೋಸ್ ಅಟೋಯೇವ್ (ಉಜ್ಬೇಕಿಸ್ತಾನ)

ಅಥ್ಲೆಟಿಕ್ಸ್ : ಡಿಸ್ಕಸ್ ಥ್ರೋ: ಮಧ್ಯಾಹ್ನ 2.00

ಪುರುಷರ ಅರ್ಹತಾ ಸುತ್ತು, ವಿಕಾಸ್ ಗೌಡ

English summary
Five-time world champion MC Mary Kom (51 kg) and Vijender Singh are the gold medal hope for India. Indian athletes Vikas Gowda in Discuss throw and Gagan Narang in Shooting are also in action today(Aug.6)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X