ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ವ್ಯಾಪ್ತಿಗೆ ಎಲೆಕ್ಟ್ರಾನಿಕ್ ಸಿಟಿ ನಿರ್ಧಾರಕ್ಕೆ ಬದ್ಧ

By Mahesh
|
Google Oneindia Kannada News

Electronics City under BBMP
ಬೆಂಗಳೂರು, ಆ.6: ಎಲೆಕ್ಟ್ರಾನಿಕ್ ಸಿಟಿ ಪ್ರದೇಶವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಪಾಲಿಕೆ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಯಡಿಯೂರು ವಾರ್ಡ್ ಸದಸ್ಯ ಎನ್.ಆರ್.ರಮೇಶ್ ತಿಳಿಸಿದ್ದಾರೆ.ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಒಕ್ಕೂಟ (ELCIA) ಮತ್ತು ಸ್ಥಳೀಯರ ವಿರೋಧದ ನಡುವೆಯೂ ಎಲೆಕ್ಟ್ರಾನಿಕ್ಸಿಟಿಯನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಸರ್ಕಾರ ಮುಂದಾಗಿದೆ.

ಎಲೆಕ್ಟ್ರಾನ್ ಸಿಟಿ ಪ್ರದೇಶವನ್ನು ಪಾಲಿಕೆ ವ್ಯಾಪ್ತಿಗೆ ತರುವುದರಿಂದ ೩೦೦ ಕೋಟಿ ರೂ.ಆದಾಯ ಬರಲಿದೆ. ಎಲೆಕ್ಟ್ರಾನ್ ಸಿಟಿ ಪ್ರದೇಶವು ಆರಂಭದಲ್ಲಿ 13 ಕಿ.ಮೀ. ಚದರ ವ್ಯಾಪ್ತಿ ಹೊಂದಿತ್ತು. ಆದರೆ, ಈಗ 5.2 ಕಿ.ಮೀ. ವ್ಯಾಪ್ತಿ ಹೊಂದಿದ್ದರೂ ಸಹಾ ಪಾಲಿಕೆ ವ್ಯಾಪ್ತಿಯಿಂದ ಹೊರಗುಳಿದಿದ್ದು ತೆರಿಗೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ 187 ಬೃಹತ್ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕಂಪೆನಿಗಳುನ್ನು ಹೊಂದಿರುವ ಈ ಪ್ರದೇಶದಲ್ಲಿ 25ಕ್ಕೂ ಹೆಚ್ಚು ಬೃಹತ್ ವಸತಿ ಸಂಕೀರ್ಣಗಳು 26 ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು 3 ಸ್ಟಾರ್ ಹೊಟೇಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೂ ತೆರಿಗೆ ಜಾಲದಿಂದ ಹೊರಗುಳಿದಿದೆ ಎಂದು ರಮೇಶ್ ಆರೋಪಿಸಿದ್ದಾರೆ.

ಎಲೆಕ್ಟ್ರಾನ್ ಸಿಟಿ ಪ್ರದೇಶಕ್ಕೆ ಸಮಗ್ರ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ನಗರಾಭಿವೃದ್ಧಿ ತಪ್ಪು ಮಾಹಿತಿ ನೀಡುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಯಿಂದ ಹೊರಗುಳಿದಿದ್ದು ತೆರಿಗೆ ನೀಡುವಲ್ಲಿ ವಂಚನೆಯಾಗುತ್ತಿದೆ ಎಂದು ರಮೇಶ್ ತಿಳಿಸಿದರು.

ಈ ಬಗ್ಗೆ ಪಾಲಿಕೆ ಎಚ್ಚೆತ್ತುಕೊಂಡು ಎಲೆಕ್ಟ್ರಾನಿಕ್ ಸಿಟಿ ಪ್ರದೇಶವನ್ನು ತೆರಿಗೆ ಜಾಲಕ್ಕೆ ತರಲು ಮಾಸಿಕ ಸಭೆಯಲ್ಲಿ ಪಕ್ಷಾತೀತ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದು ರಮೇಶ್ ಹೇಳಿದ್ದಾರೆ.

ಬಿಬಿಎಂಪಿ ಈ ನಿರ್ಧಾರದಿಂದ ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಸುತ್ತಮುತ್ತಲಿನ ಕೋನಪ್ಪನ ಅಗ್ರಹಾರ, ದೊಡ್ಡ ನಾಗಮಂಗಲ, ರಾಯಸಂದ್ರ, ದೊಡ್ಡ ತೋಗೂರು, ಚಿಕ್ಕ ತೋಗೂರು, ಘಟ್ಟಹಳ್ಳಿ, ವೀರಸಂದ್ರ, ಶಿಕಾರಿಪಾಳ್ಯ, ತಿರುಪಾಳ್ಯ, ನೀಲಾದ್ರಿ ನಗರ, ಬೆಟ್ಟದಾಸನಪುರ, ಗೊಲ್ಲಹಳ್ಳಿ, ಹುಲಿಮಂಗಳ, ಗೋವಿಂದಶೆಟ್ಟಿ ಪಾಳ್ಯ, ಶಾಂತಿಪುರ ಮುಂತಾದ ಪ್ರದೇಶಗಳು ಬಿಬಿಎಂಪಿ ತೆರಿಗೆ ವ್ಯಾಪ್ತಿಗೆ ಬರಲಿವೆ.

ಎಲೆಕ್ಟ್ರಾನಿಕ್‌ ಸಿಟಿ 3 ಕೋಟಿ ಚದರಡಿ ನಿರ್ಮಿತ ಪ್ರದೇಶ ಹೊಂದಿದೆ. ಇದು ಪಾಲಿಕೆ ವ್ಯಾಪ್ತಿಗೇ ಸೇರಿದ್ದರೂ ತೆರಿಗೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ತಪ್ಪು ಮಾಹಿತಿ ನೀಡಿ ಪಾಲಿಕೆ ವ್ಯಾಪ್ತಿಯಿಂದ ಹೊರಗುಳಿದಿದೆ. ಎಲೆಕ್ಟ್ರಾನಿಕ್‌ ಸಿಟಿ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ತನ್ನ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು BBMP ನಿರ್ಧರಿಸಿದೆ.

English summary
Yediyur councillor N.R. Ramesh confirmed that inspite of opposition from ELCIA, BBMP will see that Electronics city will covered under Icome Tax.The cash straved BBMP is aiming to extract Rs 300 Crore from 187 major Electronics and IT compannies, 26 institutions spread over 3 Crore sq.ft build up area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X