ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.5 ಪದಕ ನಿರೀಕ್ಷೆಯಲ್ಲಿ ಬಾಕ್ಸರ್ ಮೇರಿ ಕಣಕ್ಕೆ

By Mahesh
|
Google Oneindia Kannada News

Mary Kom
ಲಂಡನ್, ಆ.5: ಶನಿವಾರ(ಆ.4) ಚೀನಾ ಕೃಪೆಯಿಂದ ಸೈನಾಗೆ ಮತ್ತೊಂದು ಕಂಚು ಲಭಿಸಿದ ಖುಷಿಯಲ್ಲೇ ಭಾನುವಾರ ಆಟವನ್ನು ಭಾರತದ ಕ್ರೀಡಾಪಟುಗಳು ಆರಂಭಿಸಲಿದ್ದಾರೆ. ವಿಶ್ವ ಚಾಂಪಿಯನ್ ಮೇರಿ ಕೋಮ್ ಬಾಕ್ಸಿಂಗ್ ನಲ್ಲಿ ಪದಕದ ನಿರೀಕ್ಷೆ ಹುಟ್ಟಿಸಿದ್ದು, ಭಾನುವಾರ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

46 ಹಾಗೂ 48 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಅವರು ಈ ಬಾರಿ ಮಹಿಳಾ ಬಾಕ್ಸಿಂಗ್ ನ 51 ಕೆಜಿ ಫ್ಲೈವೇಟ್ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಅವರು ಪೋಲೆಂಡ್ ನ ಕ್ಯಾರೊಲಿನಾ ಮಿಚಾಲ್ ಜುಕ್ ಅವರ ವಿರುದ್ಧ ಸೆಣಸಲಿದ್ದಾರೆ.

2 ಮಕ್ಕಳ ತಾಯಿ 29 ವರ್ಷದ ತಾಯಿ ಮೇರಿ ಕೋಮ್ ಅವರು 2 ಪಂದ್ಯ ಗೆದ್ದರೆ ಪದಕ ಖಾತ್ರಿಯಾಗಲಿದೆ. 46,48 ಕೆಜಿ ವಿಭಾಗದಲ್ಲಿ ವಿಶ್ವ ಹಾಗೂ ಏಷ್ಯನ್ ಚಾಂಪಿಯನ್ ಆಗಿದ್ದರು. ಒಲಿಂಪಿಕ್ಸ್ ನಲ್ಲಿ ಈ ಎರಡು ವಿಭಾಗ ಇಲ್ಲದ ಕಾರಣ 51 ಕೆಜಿ ವಿಭಾಗ ಸ್ಪರ್ಧಿಸುತ್ತಿದ್ದಾರೆ.

ಮಿಚಾಲ್ ಜುಕ್ ವಿರುದ್ಧ ಜಯ ಗಳಿಸಿದರೆ ಕ್ವಾಟರ್ ಫೈನಲ್ ನಲ್ಲಿ ಟುನೀಶಿಯಾದ ಮರೊವು ರಾಹಿಲ್ ವಿರುದ್ಧ ಸೆಣಸಬೇಕಾಗುತ್ತದೆ.
ಭಾರತದ ಬಾಕ್ಸಿಂಗ್ ಕ್ಷೇತ್ರದಲ್ಲಿ "Magnificent Mary", ಎಂದೇ ಕರೆಯಲ್ಪಡುವ ಮೇರಿ ಅವರಿಗೆ ಒಲಿಂಪಿಕ್ಸ್ ಗೆ ಪ್ರವೇಶಕ್ಕೂ ಮುನ್ನ ಭಾರಿ ಹಿನ್ನಡೆ ಉಂಟಾಗಿತ್ತು. ಮೇರಿ ಅವರಿಗೆ ತರಬೇತಿ ನೀಡುತ್ತಿರುವ ಅಮೆರಿಕ ಕೋಚ್ ಚಾರ್ಲ್ಸ್ ಅಟ್ಕಿಸನ್ ನೆರವಿಲ್ಲದೆ ಮೇರಿ ಕಣಕ್ಕಿಳಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ಸ್ ಕೋಚ್ ಗಳಿಗೆ ನೀಡುವ 3 ಸ್ಟಾರ್ ಪ್ರಮಾಣಪತ್ರ ಹೊಂದಿಲ್ಲದ ಕಾರಣ ಅವರಿಗೆ ಒಲಿಂಪಿಕ್ಸ್ ಗ್ರಾಮಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಹೀಗಾಗಿ ಕೋಚ್ ನೆರವಿಲ್ಲದೆ ಏಕಾಂಗಿಯಾಗಿ ಮೇರಿ ಕೋಮ್ ತರಬೇತಿ ಹೊಂದುತ್ತಿದ್ದಾರೆ.

[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]

ಆ.5, 2012, ಭಾನುವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಶೂಟಿಂಗ್: ಮಧ್ಯಾಹ್ನ 2.30
ಪುರುಷರ ಟ್ರ್ಯಾಪ್ ಮೊದಲ ಸುತ್ತು: ಮಾನವಜೀತ್ ಸಿಂಗ್ ಸಂಧು

ಬಾಕ್ಸಿಂಗ್: ಸಂಜೆ 6.00
ಮಹಿಳೆಯರ 51 ಕೆಜಿ ವಿಭಾಗ
ಎಂಸಿ ಮೇರಿ ಕೋಮ್ vs ಮಿಚಾಲು ಜುಕ್ (ಪೋಲೆಂಡ್)

ಹಾಕಿ : ಸಂಜೆ : 6.00 ಭಾರತ vs ದಕ್ಷಿಣ ಕೊರಿಯಾ

English summary
Five-time world champion MC Mary Kom (51kg) would be India's lone flag-bearer and a gold medal hope when women's boxing makes its historic Olympic debut in three weight categories here on Sunday(Aug.5).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X