ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.4: ವಿಕಾಸ್ ಬ್ಯಾಡ್ ಲಕ್ ದೇವೇಂದ್ರೊ ಬೊಂಬಾಟ್

By Mahesh
|
Google Oneindia Kannada News

Boxer Vikas Krishnan
ಲಂಡನ್, ಆ.6: ಬಾಕ್ಸಿಂಗ್ ನಲ್ಲಿ ರೆಫ್ರಿಗಳಿಂದ ಭಾರಿ ಕಿರಿಕಿರಿ ಉಂಟಾಗುತ್ತಿದೆ. ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಅವರನ್ನು ಮೊದಲು ವಿಜಯಿ ಎಂದು ಘೋಷಿಸಿ ನಂತರ ಅವರ ಎದುರಾಳಿ ಗೆದ್ದಿದ್ದಾರೆ ಎಂದು ಹೇಳಿ ಭಾರತದ ಕನಸಿಗೆ ಕೊಡಲಿ ಪೆಟ್ಟು ಹಾಕಿದ್ದಾರೆ.

20 ವರ್ಷದ ವಿಕಾಸ್ ಕೃಷ್ಣನ್ 69 ಕೆ.ಜಿ. ವಿಭಾಗದಲ್ಲಿ ಕಠಿಣ ಹೋರಾಟ ನಡೆಸಿ ಅಮೆರಿಕಾದ ಎರೊಲ್ ಸ್ಪೆನ್ಸ್ ವಿರುದ್ಧ 13-11ರಿಂದ ಗೆಲುವು ದಾಖಲಿಸಿಕೊಂಡು ಕ್ವಾರ್ಟರ್ ಫೈನಲಿಗೇರಿದ್ದರು. ತೃತೀಯ ರೌಂಡ್ ನಲ್ಲಿ ವಿಕಾಸ್ ಕೃಷ್ಣನ್ 9 ಫೌಲ್ ಮಾಡಿದ್ದರು. ಆದರೆ ರೆಫ್ರಿ ಒಂದು ಸಲ ಮಾತ್ರ ಭಾರತದ ಬಾಕ್ಸರ್ ಗೆ ಎಚ್ಚರಿಕೆ ನೀಡಿದ್ದರು. ಎರಡನೇ ಸುತ್ತಿನಲ್ಲಿ ಕೂಡ ಒಮ್ಮೆ ಹೀಗೆ ಆಗಿತ್ತು. ಆಗ ರೆಫ್ರಿ ಸುಮ್ಮನಿದ್ದರು.

ಇದನ್ನೆಲ್ಲ ಪರಿಶೀಲಿಸಿ ಸ್ಪರ್ಧೆಯ ಜ್ಯೂರಿ ತಂಡ ವಿಕಾಸ್ ಕೃಷ್ಣನ್ ವಿರುದ್ಧ ತೀರ್ಪು ನೀಡಿ ಸ್ಪೆನ್ಸ್ ಗೆ ನಾಲ್ಕು ಅಂಕ ನೀಡಿ ವಿಜಯಯೆಂದು ತೀರ್ಪಿತ್ತರು. ಈ ತೀರ್ಪು ಭಾರತದ ಪಾಲಿಗೆ ಭಾರೀ ನಿರಾಶೆಯನ್ನು ಉಂಟು ಮಾಡಿದೆ.
****
ದೇವೇಂದ್ರೋ ಬೊಂಬಾಟ್ : ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಮಂಗೋಲಿಯದ ಸರ್ದಂಬ ಪುರೆವ್ದೊರ್ಜ್16-11 ರಿಂದ ಮಣಿಸಿದ ಭಾರತದ ಲೈಶ್ರಾಮ್ ದೇವೇಂದ್ರೊ ಸಿಂಗ್ ಲಂಡನ್ ಒಲಿಂಪಿಕ್ಸ್‌ನ ಪುರುಷರ ಲೈಟ್ ಫ್ಲೇವೇಟ್(49 ಕೆಜಿ) ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ಆರಂಭವನ್ನು ಪಡೆದ ದೇವೇಂದ್ರೊ ಬಲವಾದ ಪಂಚ್‌ಗಳ ಮೂಲಕ ಮಂಗೋಲಿಯದ ಬಾಕ್ಸರ್‌ರನ್ನು ಹಿಮ್ಮೆಟಿಸಿ, ಎದುರಾಳಿಗೆ ಎಲ್ಲಿಯೂ ಪ್ರತಿರೋಧಕ್ಕೆ ಅವಕಾಶ ನೀಡದೆ ಪಂದ್ಯವನ್ನು 16-11 ರಿಂದ ವಶಪಡಿಸಿಕೊಂಡರು.
****
ಶೂಟಿಂಗ್ : ಮಹಿಳೆಯರ ಟ್ರಾಪ್ ಈವೆಂಟ್‌ನ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾದ ಭಾರತದ ಶೂಟರ್ ಶಗುನ್ ಚೌಧರಿ ಒಲಿಂಪಿಕ್ಸ್ ಅಭಿಯಾನ ನಿರಾಶಾದಾಯಕ ಅಂತ್ಯ ಕಂಡಿದೆ. ಶನಿವಾರ ಇಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ 22 ಸ್ಪರ್ಧಿಗಳು ಭಾಗವಹಿಸಿದ್ದು, ಶಾಗುನ್ 20ನೆ ಸ್ಥಾನ ಪಡೆದು ನಿರಾಶೆಗೊಳಿಸಿದರು.

ಆರಂಭದಲ್ಲಿ 25ರಲ್ಲಿ 23 ಅಂಕ ಗಳಿಸಿದ ಚೌಧರಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಎರಡನೆ ಸುತ್ತಿನಲ್ಲಿ 17, ಮೂರನೆ ಸುತ್ತಿನಲ್ಲಿ 21 ಅಂಕ ಸಹಿತ ಒಟ್ಟು 61 ಅಂಕಗಳಿಸಿದರು. ಇದು ಫೈನಲ್‌ಗೇರಲು ಸಾಕಾಗಲಿಲ್ಲ.
*****
ನಡಿಗೆ : ಲಂಡನ್ ಒಲಿಂಪಿಕ್ಸ್ ಗೇಮ್ಸ್‌ನ 20 ಮೀ. ನಡಿಗೆಯಲ್ಲಿ ಭಾರತದ ಇರ್ಫಾನ್ ಕೆ.ಟಿ. ರಾಷ್ಟ್ರೀಯ ದಾಖಲೆಯನ್ನು ಮುರಿದು 10ನೆ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಇಂದು ಇಲ್ಲಿ ನಡೆದ ಸ್ಪರ್ಧೆಯಲ್ಲಿ ಇರ್ಫಾನ್ 1:20:21 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ 10ನೆ ಸ್ಥಾನ ಪಡೆದರು. ಮಾತ್ರವಲ್ಲ ರಾಷ್ಟ್ರೀಯ ದಾಖಲೆಯನ್ನು ಮುರಿದರು.
****
ಲಂಡನ್ ಒಲಿಂಪಿಕ್ಸ್‌ನ ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್ ಈವೆಂಟ್‌ನ ಅರ್ಹತಾ ಸುತ್ತಿನಲ್ಲಿ 13ನೆ ಸ್ಥಾನ ಪಡೆದ ಭಾರತದ ಸುಧಾ ಸಿಂಗ್ ಫೈನಲ್ ರೌಂಡ್ ತಲುಪಲು ವಿಫಲರಾಗಿದ್ದಾರೆ.

2010ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್‌ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿರುವ ಸುಧಾ ಇಂದು 9:48:86 ಸೆಕೆಂಡ್‌ನಲ್ಲಿ ಗುರಿ ತಲುಪಿ ತಮ್ಮ ವೈಯಕ್ತಿಕ ಶ್ರೇಷ್ಠ ಸಮಯ (9:47:70 ಸೆಕೆಂಡ್)ಕ್ಕಿಂತಲೂ ಕಡಿಮೆ ಸಾಧನೆ ತೋರಿದರು. 3000 ಮೀ. ಸ್ಟೀಪಲ್‌ಚೇಸ್ ಈವೆಂಟ್‌ನ ಅರ್ಹತಾ ಸುತ್ತಿನಲ್ಲಿ 15 ಓಟಗಾರ್ತಿಯರು ಭಾಗವಹಿಸಿದ್ದು, ಸುಧಾ 13ನೆ ಸ್ಥಾನ ಪಡೆದರು.
***
ಟೆನಿಸ್: ಬೆಲಾರಿಸ್‌ನ ಅಗ್ರ ಶ್ರೇಯಾಂಕಿತ ವಿಕ್ಟೋರಿಯ ಅಝೆರಿಂಕಾ ಹಾಗೂ ಮ್ಯಾಕ್ಸ್ ಮಿರ್ನಿ ವಿರುದ್ಧದ ಮಿಕ್ಸೆಡ್ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶರಣಾದ ಭಾರತದ ಲಿಯಾಂಡರ್‌ಪೇಸ್-ಸಾನಿಯಾ ಮಿರ್ಝಾರ ಒಲಿಂಪಿಕ್ಸ್ ಪದಕದ ಕನಸು ಭಗ್ನಗೊಂಡಿದೆ. ಇಂದು ಪೇಸ್-ಸಾನಿಯಾ ಸೋಲುವುದ ರೊಂದಿಗೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ ಟೆನಿಸ್ ಅಭಿಯಾನ ಕೊನೆಗೊಂಡಿದೆ.

ಶುಕ್ರವಾರ ಮಂದಬೆಳಕಿನ ಕಾರಣ ಇಂದಿಗೆ ಮುಂದೂಡಲ್ಪಟ್ಟಿದ್ದ ಪಂದ್ಯದಲ್ಲಿ ಪೇಸ್-ಸೈನಾ ಜೋಡಿ 5-7, 6-7(7/5) ಸೆಟ್‌ಗಳಿಂದ ಸೋಲೊಪ್ಪಿಕೊಂಡಿತು.
****
ಡಿಸ್ಕರ್ ಥ್ರೋ : ಭಾರತಕ್ಕೆ ಪದಕ ತಂದು ಕೊಡಬಲ್ಲ ಫೇವರಿಟ್ ಅಥ್ಲೀಟ್ ಕೃಷ್ಣ್ಣಾ ಪೂನಿಯಾ ಲಂಡನ್ ಒಲಿಂಪಿಕ್ಸ್‌ನ ಡಿಸ್ಕಸ್ ಥ್ರೋ ಅರ್ಹತಾ ಸುತ್ತಿನಲ್ಲಿ 8ನೆ ಸ್ಥಾನ ಪಡೆಯುವ ಮೂಲಕ ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ.

ಇನ್ನೋರ್ವ ಡಿಸ್ಕಸ್ ಥ್ರೋವರ್ ಸೀಮಾ ಆಂಟಿಲ್ ಟ್ರಾಕ್ ಅಂಡ್ ಫೀಲ್ಡ್ ಈವೆಂಟ್‌ನ ಮೊದಲ ದಿನವೇ ವಿಫಲರಾಗಿ ಗೇಮ್ಸ್‌ನಿಂದ ಹೊರ ನಡೆದಿದ್ದಾರೆ.

ಪೂನಿಯಾ ಮೊದಲ ಸುತ್ತಿನಲ್ಲಿ 1 ಕೆಜಿ ಡಿಸ್ಕಸ್‌ನ್ನು 63.54 ಮೀ. ದೂರ ಎಸೆದು ಎ ಗುಂಪಿನಲ್ಲಿ ಐದನೆ ಸ್ಥಾನವನ್ನು ಪಡೆದರು. ಒಟ್ಟಾರೆ 8ನೆ ಸ್ಥಾನವನ್ನು ಗಿಟ್ಟಿಸಿದರು. ಸೀಮಾ ಮೂರನೆ ಹಾಗೂ ಅಂತಿಮ ಸುತ್ತಿನಲ್ಲಿ 61.91 ಮೀ. ದೂರ ಎಸೆದರು. ಆದರೆ 13ನೆ ಸ್ಥಾನವನ್ನು ಪಡೆದ ಕಾರಣ ಫೈನಲ್ ರೌಂಡ್ ತಲುಪಲು ವಿಫಲರಾದರು.

ಅಥ್ಲೆಟಿಕ್‌ನಲ್ಲಿ ಭಾರತದ ಶಾಟ್‌ಪುಟ್ ಪಟು ಓಂ ಪ್ರಕಾಶ್ ಕರ್ಹಾನ, ತ್ರಿಪಲ್ ಜಂಪರ್ ಮಯೂಖಾ ಜಾನಿ ಅವರು ಅರ್ಹತಾ ಸುತ್ತಿನಲ್ಲಿ ಎಡವಿದ್ದರು.

English summary
Performance of Indian athletes on Aug.4 of the London Olympics 2012. All Tennis stars of India bowed out of Olympics 2012. Saina got Bronze. Krishan Poonia fail to snatch award. Devendro Singh entered quater finals. bad luck for boxer Vikas Krishnan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X