• search

ಶಿಕಾರಿಪುರ ಶೀಘ್ರವೇ 31ನೆ ಜಿಲ್ಲೆ: ಕೃಪೆ ಯಡಿಯೂರಪ್ಪ

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    shikaripura-to-become-district-31-thanks-to-yeddyurappa
    ಶಿವಮೊಗ್ಗ, ಆ.4: ಅತ್ತ ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಭಾಗ್ಯ ಪ್ರಾಪ್ತಿಯಾಗುವ ಬೆನ್ನಿಗೇ ಶಿಕಾರಿಪುರವೂ ರಾಜ್ಯದ 31ನೆಯ ಜಿಲ್ಲೆಯಾಗಿ ಉದಯವಾಗುವ ಲಕ್ಷಣಗಳು ಹೆಚ್ಚಾಗಿವೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೋರಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇದೇ ಸ್ವಾತಂತ್ರ್ಯೋತ್ಸವದ ವೇಳೆಗೆ ಅಂಕಿತ ಹಾಕುವ ನಿರೀಕ್ಷೆಯಿದೆ.

    ರಾಜಕೀಯವಾಗಿ ಶಿಕಾರಿಪುರ ಬಿಎಸ್ ಯಡಿಯೂರಪ್ಪನವರ ಸ್ವಕ್ಷೇತ್ರ. ತಾವು ಪ್ರತಿನಿಧಿಸುವ ಈ ವಿಧಾನಸಭಾ ಕ್ಷೇತ್ರವು ಜಿಲ್ಲೆಯಾಗಿ ಮಾರ್ಪಡಲಿ ಎಂಬುದು ಯಡಿಯೂರಪ್ಪ ಅವರ ರಾಜಕೀಯ ಆಕಾಂಕ್ಷೆ.

    ಹಾಗೆ ನೋಡಿದರೆ ಈ ಹಿಂದಿನಿಂದಲೂ ಯಡಿಯೂರಪ್ಪನವರು ತಮ್ಮ ಶಿಕಾರಿಪುರದತ್ತ ವಿಶೇಷ ಆಸಕ್ತಿ ವಹಿಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿದ್ದಾಗ ತದನಂತರ ಮುಖ್ಯಮಂತ್ರಿಯಾದ ಮೇಲೆ ತಮ್ಮ ಅಧಿಕಾರವನ್ನು ಬಳಸಿ ಶಿಕಾರಿಪುರ ತಾಲೂಕಿನತ್ತ ವಿಶೇಷ ಅನುದಾನ ಹರಿಸಿದ್ದಾರೆ. ಮುಂದೆ ಅದಕ್ಕೆ ಜಿಲ್ಲಾ ಸ್ಥಾನಮಾನ ಲಭಿಸಿ, ಆ ಮೂಲಕ ರಾಜಕೀಯವಾಗಿ ತಮ್ಮ ಪಟ್ಟಭದ್ರ ಕ್ಷೇತ್ರವಾಗಿ ಉಳಿಯಲಿ ಎಂಬುದು ಯಡಿಯೂರಪ್ಪನವರ ಮನದಾಳದ ಆಲೋಚನೆ.

    ಕಳೆದ ಐದು ವರ್ಷಗಳಲ್ಲಿ ಯಡಿಯೂರಪ್ಪನವರು ಶಿಕಾರಿಪುರ ಪಟ್ಟಣದಲ್ಲಿ ಏನೆಲ್ಲಾ ಮಾಡಿದ್ದಾರೆಂದರೆ ಜಿಲ್ಲಾಧಿಕಾರಿ ಕಚೇರಿಗೆ ಯೋಗ್ಯವೆನಿಸುವ ವಿಶಾಲ ಕಟ್ಟಡಕ್ಕೆ ಅಗತ್ಯವಿರುವ ಹಣ ಮಂಜೂರು ಮಾಡಿದ್ದಾರೆ. ಜತೆಗೆ ಜಿಲ್ಲಾ ಪಂಚಾಯತ್ ಆಡಳಿತ ಕಚೇರಿಯೂ ತಲೆಯೆತ್ತಿದೆ. ಇನ್ನು ತಾಲೂಕು ಮಟ್ಟದ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದಾರೆ.

    ಅತ್ಯಾಧುನಿಕ ಅತಿಥಿ ಗೃಹ ಮತ್ತು ಜಿಲ್ಲಾ ಮಟ್ಟದ ಸಭಾಭವನಕ್ಕೂ ಅಗತ್ಯ ಹಣಕಾಸನ್ನು ಬಿಡುಗಡೆ ಮಾಡಿದ್ದು, ಒಟ್ಟಾರೆ ಪಟ್ಟಣಕ್ಕೆ ಈಗಾಗಲೇ ಜಿಲ್ಲಾಮಟ್ಟದ ಅಗತ್ಯ ಮೂಲಪರಿಕರಗಳನ್ನು ಸದ್ದಿಲ್ಲದೆ ಒದಗಿಸಿದ್ದಾರೆ. ಹಾಗೆಯೇ,
    ತಾಲೂಕು ಕೇಂದ್ರವಾದ ಶಿಕಾರಿಪುರದ ರಸ್ತೆಗಳನ್ನು ವಿಶಾಲಗೊಳಿಸಿದ್ದಾರೆ. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೌಲಭ್ಯಗಳು ಸುಧಾರಿಸಿವೆ.

    ಶಿವಮೊಗ್ಗ ಜಿಲ್ಲೆಯಿಂದ ಸೊರಬ, ಹಾವೇರಿ ಜಿಲ್ಲೆಯ ಹಿರೇಕೆರೂರು ಹಾಗೂ ದಾವಣಗೆರೆಯ ಹೊನ್ನಾಳಿ ಕ್ಷೇತ್ರಗಳು ಶಿಕಾರಿಪುರಕ್ಕೆ ಸೇರ್ಪಡೆಯಾಗಲಿವೆ. ಅಲ್ಲಿಗೆ ಶಿವಮೊಗ್ಗ ಜಿಲ್ಲೆಯನ್ನು ಎರಡನೆಯ ಬಾರಿಗೆ ವಿಂಗಡನೆ ಮಾಡಿದಂತಾಗುತ್ತದೆ. ಈ ಹಿಂದೆ 1997ರಲ್ಲಿ ದಾವಣಗೆರೆ ಜಿಲ್ಲಾ ರಚನೆಯಾದಾಗ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಹೊನ್ನಾಳಿ ಮತ್ತು ಚೆನ್ನಗಿರಿ ದಾವಣಗೆರೆಯ ಪಾಲಾಗಿದ್ದವು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Shikaripura may become 31st district thanks to BS Yeddyurappa. Presently it is a taluka head quarter in Shimoga district.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more