• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕ್ಷಣ ಕೊಡ್ಸಲಿಲ್ಲ ಅಂತ ರೈಲು ಕೆಳಗೆ ಬಿದ್ದು ಸತ್ತಳು

By Srinath
|

ಜೈಪುರ, ಆ.4: 'ಭಾರತದ ಮಡಿವಂತಿಕೆ ಸಮಾಜದಲ್ಲಿ ನಮ್ಮಂತಹ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರಕುವುದಿಲ್ಲ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಪತ್ರ ಬರೆದಿಟ್ಟು ನತದೃಷ್ಟ ಯುವತಿಯೊಬ್ಬಳು ಇಲ್ಲಿನ ಹನುಮಾನ್ ಗಢದ ಭದಾರಾ ಬಳಿ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಸಮಸ್ತ ದೇಶವಾಸಿಗಳಿಗೆ ಗುಡ್ ಬೈ ಹೇಳಿದ್ದಾಳೆ.

ನಮ್ಮ ದೇಶಕ್ಕೆ ಇಂತಹ ಹೆಣ್ಣುಮಗುವಿನ ಬಗ್ಗೆ ಕನಿಷ್ಠ ಯೋಚಿಸುವಷ್ಟಾದರೂ ವ್ಯವಧಾನವಿದೆಯಾ? ಹೀಗೆ, ಉನ್ನತ ಶಿಕ್ಷಣಕ್ಕೆ ಅವಕಾಶ ನೀಡಲಿಲ್ಲವೆಂದು ನಮ್ಮ ಮಡಿವಂತಿಕೆಯ ಸಮಾಜಕ್ಕೆ ಸಡ್ಡು ಹೊಡೆದು ಪ್ರಾಣಾರ್ಪಣ ಮಾಡಿರುವುದು 19 ವರ್ಷದ ಪೂಜಾ ಕುಮಾವತ್.

'ಪೂಜಾ ಕುಮಾವತ್ ಪಿಯುಸಿಯಲ್ಲಿ ಶೇ. 84ರಷ್ಟು ಅಂಕ ಗಳಿಸಿದ್ದಳು. ಆಕೆಗೆ IIT ಮತ್ತು AIEEE ಪಾಸು ಮಾಡುವ ಆಸೆ ಬಹಳಷ್ಟಿತ್ತು. ಆದರೆ ಅದಕ್ಕಾಗಿ ದೊಡ್ಡ ನಗರಕ್ಕೆ ಆಕೆಯನ್ನು ಒಬ್ಬಳೇ ಕಳಿಸುವ ಇಚ್ಛೆ ನಮಗಿರಲಿಲ್ಲ.

ಅವಳ ಸುರಕ್ಷೆತಯ ದೃಷ್ಟಿಯಿಂದ ಉನ್ನತ ವ್ಯಾಸಂಗ ಬೇಡ ಮಗಳೇ ಎಂದು ಆಕೆಗೆ ತಿಳಿಯ ಹೇಳಿದ್ದೆವು. ಆದರೂ ಪೂಜಾ...' ಎಂದು ಹಾಲು ಮಾರುವ ಉದ್ಯೋಗ ಮಾಡುವ ಪೂಜಾಳ ಅಪ್ಪ ಪೃಥ್ವಿ ಸಿಂಗ್ ಕುಮಾವತ್ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಇಲ್ಲಿ ತಪ್ಪು ಯಾರದು?

ಭೋಜಾಸರ ಗ್ರಾಮದ ಈ ನಿರ್ಭಾಗ್ಯ ಪೋಷಕರು ಸಮೀಪದಲ್ಲೇ ಇರುವ ಶ್ಯಾಮ್ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ಪೂಜಾಳನ್ನು 5 ದಿನಗಳ ಹಿಂದೆ ಬಿಎಸ್ಸಿಗೆ ಸೇರಿಸಿದ್ದರು. ನಿರುತ್ಸಾಹಗೊಂಡ ಪೂಜಾ ಮರಳಿ ಬಾರದ ಲೋಕಕ್ಕೆ ಹೋಗೇ ಬಿಟ್ಟಳು ಎಂದು ಖಾಸಗಿ ಕಾಲೇಜಿನ ಲೆಕ್ಚರರ್ ಮಹೇಂದ್ರ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

'ಬೆಳಗ್ಗೆ 7.30ಕ್ಕೆಲ್ಲ ಎಂದಿನಂತೆ ಕಾಲೇಜಿಗೆ ಬಂದಿದ್ದಳು. ಆದರೆ ತನ್ನ ತಾತನಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ, ಲೀವ್ ತೆಗೆದುಕೊಂಡು ಹೊರಟಳು. ಆದರೆ ಸೀದಾ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟಳು' ಎಂದು ಮಹೇಂದ್ರ ಕುಮಾರ್ ಹೇಳಿದ್ದಾರೆ.

'ಹಮೇಶಾ ಲಡ್ಕೋ ಕೋ ಹೀ ಆಪರ್ಚುನಿಟಿ ಕ್ಯೊ ಮಿಲ್ತಿ ಹೈ? ಮೈ ಲಡ್ಕಿ ಹೂ ಇಸ್ ಲಿಯೇ ಮುಝೆ ಮೌಕಾ ನಹೀ ಮಿಲಾ? ಜಿಂದಗಿ ಕೆ ಸಪ್ನೆ ಪೂರೆ ನ ಹೋ ತೊ, ಜಿಂದಗಿ ಕಾ ಕ್ಯಾ ಫಾಯಿದಾ? ಬಿಎಸ್ಸಿ ಮೇರಿ ಮಜಬೂರಿ ಹೈ. ಬ್ಯಾಡ್ ಲಕ್. ಅಪನಿ ಮರ್ಜಿ ಸೆ ಜಾನ್ ದೆ ರಹೀ ಹೂ' ಎಂದು ಪತ್ರ ಬರೆದಿಟ್ಟ ಪೂಜಾ, 10 ಗಂಟೆಗೆಲ್ಲ ರೈಲಿಗೆ ಸಿಕ್ಕಿ ಸತ್ತಿದ್ದಾಳೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Denied higher education girl Puja Kumawat kills herself in Jaipur. Academically promising18-year old Puja jumped before a running train in Hanumangarh's Bhadara area, leaving a suicide note questioning conservative India's resistance to allowing girls the opportunity to higher education.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more