• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಲಾ ಶಿಕ್ಷಕಿ ವರ್ಗಾವಣೆ; ವಿದ್ಯಾರ್ಥಿಗಳ ರಕ್ತಪ್ರತಿಭಟನೆ

By Rajendra
|

ಮಾಗಡಿ, ಆ.4: ತಮ್ಮ ಪ್ರೀತಿಪಾತ್ರದ ಶಿಕ್ಷಕಿಯನ್ನು ಏಕಾಏಕಿ ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೈಗಳಿಗೆ ಕಾಂಪಾಸ್ ನಿಂದ ರಕ್ತ ಕಾರುವಂತೆ ಗಾಯ ಮಾಡಿಕೊಂಡು ಪ್ರತಿಭಟಿಸಿದ ವಿಚಿತ್ರ ಘಟನೆ ಮಾಗಡಿಯ ತಿರುಮಲೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಶನಿವಾರ (ಆ.4) ಬೆಳಕಿಗೆ ಬಂದಿದೆ.

ಇಲ್ಲಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ 5, 6 ಹಾಗೂ 7ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕಿ ರಮಣಿ ಎಂಬುವವರನ್ನು ಬಹಳ ಹಚ್ಚಿಕೊಂಡಿದ್ದರು. ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈಕೆಯನ್ನು ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು.

ತಮ್ಮ ಅಚ್ಚುಮೆಚ್ಚಿನ ಶಿಕ್ಷಕಿ ವರ್ಗಾವಣೆಯಾಗಿದ್ದು ಇಲ್ಲಿನ ವಿದ್ಯಾರ್ಥಿಗಳ ಪಾಲಿಗೆ ನುಂಗಲಾರದ ತುತ್ತಾಗಿತ್ತು. ತಮಗೆ ಅದೇ ಶಿಕ್ಷಕಿ ಬೇಕು ಎಂದು ರಚ್ಚೆಹಿಡಿದ ವಿದ್ಯಾರ್ಥಿಗಳು ಪಾಲಕರ ಗಮನಕ್ಕೂ ತರದೆ ಜಾಮಿಟ್ರಿ ಬಾಕ್ಸ್ ನಲ್ಲಿದ್ದ ಕೈವಾರ ತೆಗೆದು ಕೈಗಳಿಗೆ ಪರಪರ ಎಂದು ಗೀಚಿಕೊಂಡಿದ್ದಾರೆ.

ಬಳಿಕ ಈ ಘಟನೆ ಶಾಲಾ ಮುಖ್ಯೋಪಾದ್ಯಾಯರ ಗಮನಕ್ಕೆ ಬಂದು ವಿಚಾರಿಸಿದಾಗ, ವಿದ್ಯಾರ್ಥಿಗಳು ರಮಣಿ ಶಿಕ್ಷಕಿಯನ್ನು ಮತ್ತೆ ಇದೇ ಶಾಲೆಗೆ ಹಾಕಿಸಬೇಕು ಎಂದು ತಿಳಿಸಿದ್ದಾಗಿ ಹೇಳಿದ್ದಾರೆ. ಈ ವಿಷಯ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಅವರ ಕಿವಿಗೂ ಬಿದ್ದು ಅವರೂ ಶಾಲೆ ಭೇಟಿ ನೀಡಿ ವಿಚಾರಿಸಿದ್ದಾರೆ.

ಬಹಳವಾಗಿ ಹಚ್ಚಿಕೊಂಡಿದ್ದ ತಮ್ಮ ಟೀಚರ್ ಒಬ್ಬರು ವರ್ಗವಾಗಿ ಹೋದಾಗ ಇವರು ಈ ರೀತಿ ಮಾಡಿಕೊಂಡಿದ್ದಾರೆ ಎಂಬುದು ಅವರ ಗಮನಕ್ಕೂ ಬಂದಿದೆ. ಇದರಲ್ಲಿ ಯಾರದೇ ಕೈವಾಡ ಇಲ್ಲ ಎನ್ನಲಾಗಿದೆ. ಮುಗ್ಧ ವಿದ್ಯಾರ್ಥಿಗಳ ಈ ರಕ್ತ ಪ್ರತಿಭಟನೆಗೆ ರಮಣಿ ಟೀಚರ್ ಮತ್ತೆ ಇದೇ ಶಾಲೆಗೆ ಬರುತ್ತಾರೋ ಇಲ್ಲವೋ ಕಾದು ನೋಡಬೇಕು.

ಈ ಮುಗ್ಧ ಮಕ್ಕಳ ಪರಿಸ್ಥಿತಿ ನೋಡಿದರೆ ಬೇಡಬೇಡ ಎಂದರೂ ಕನ್ನಡದ ಜನಪ್ರಿಯ ಶಿಶುಗೀತೆ ಮತ್ತೆಮತ್ತೆ ನೆನಪಾಗುತ್ತದೆ. "ಬಹಳ ಒಳ್ಳೇರು ನಮ್ಮಿಸ್ಸು ಏನ್ ಹೇಳಿದ್ರು ಎಸ್ಸೆಸ್ಸು...ನಗ್ತಾ ನಗ್ತಾ ಮಾತಾಡಿಸ್ತಾರೆ ಸ್ಕೂಲಿಗೆಲ್ಲಾ ಪೇಮಸ್ಸು...ಸ್ಕೂಲಿಗೆಲ್ಲಾ ಪೇಮಸ್ಸು...ಆಟಕ್ಕೆ ಬಾ ಅಂತಾರೆ ಆಟದ ಸಾಮಾನ್ ಕೊಡ್ತಾರೆ ಆಟದ್ ಜೊತೆ ಗೊತ್ತಿಲ್ದಂಗೆ.. ಪಾಟನೂ ಕಲಿಸ್ತಾರೆ..."(ಏಜೆನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
About 15 students of govt primary school of class 5th, 6th and 7th are protest against for transferring of their favorite teacher Ramani. The incident took place at Magadi's Tirumale govt primary school. The students are protesting for scratch their hands with compass needle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more