ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೂನಲ್ಲಿ ಭಗವಾನ್ ಬುದ್ಧನ ಚಿತ್ರ, ಐಕಾನ್ ಪ್ರಮಾದ

By Mahesh
|
Google Oneindia Kannada News

Buddhists outraged at Buddha's images on shoes
ವಾಷಿಂಗ್ಟನ್, ಆ.3: ಕ್ಯಾಲಿಫೋರ್ನಿಯ ಮೂಲದ ಕಂಪೆನಿಯೊಂದು ಬುದ್ಧನ ಚಿತ್ರವಿರುವ ಪಾದರಕ್ಷೆ(ಶೂ)ಗಳ ಹೊಸ ಸರಣಿಯನ್ನು ಬಿಡುಗಡೆಗೊಳಿಸಿದೆ. ಈ ಶೂಗಳನ್ನು ಕಂಡು ಟಿಬೆಟ್ಟಿಯನ್ ಹಾಗೂ ಬೌದ್ಧ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಟಿಬೆಟ್ ಹಾಗೂ ಭೂತಾನ್‌ನ ಬೌದ್ಧರು ಐಕಾನ್ ಶೂಸ್ ಕಂಪೆನಿಗೆ ಈಗಾಗಲೇ ಪತ್ರವೊಂದನ್ನು ಬರೆದಿದ್ದಾರೆ

ಐಕಾನ್ ಕಂಪೆನಿಯ ಫೇಸ್‌ಬುಕ್ ಪುಟದಲ್ಲಿ ಬೌದ್ಧರು ಖಂಡನಾ ವಾಕ್ಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ, ಶೂ ತಯಾರಿಕಾ ಸಂಸ್ಥೆ ಐಕಾನ್ ಶೂಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

''ಬೌದ್ಧ ದೇವತೆಗಳ ಚಿತ್ರಗಳನ್ನು ಪರಮ ಪಾವನವೆಂದು ಪೂಜಿಸುವುದು ಬೌದ್ಧ ಧರ್ಮೀಯರ ಒಂದು ಮಹತ್ವದ ಸಂಪ್ರದಾಯವಾಗಿದೆ. ಪಾದರಕ್ಷೆಗಳಲ್ಲಿ ಅಂತಹ ಚಿತ್ರಗಳನ್ನು ಬರೆಯುವುದು ಬೌದ್ಧರಿಗೆ ಒಂದು ಮಹಾ ಅಪಮಾನವಾಗಿದೆ'' ಎಂದು ಇಂಟರ್‌ನ್ಯಾಶನಲ್ ಕ್ಯಾಂಪೇನ್ ಫಾರ್ ಟಿಬೆಟ್‌ನ ಬುಚುಂಗ್ ತ್ಸೆರಿಂಗ್ ಬರೆದಿದ್ದಾರೆ.

''ಭಗವಾನ್ ಬುದ್ಧರನ್ನು ಜಗತ್ತಿನಾದ್ಯಂತದ ಮಿಲಿಯಾಂತರ ಜನರು ಆರಾಧಿಸುತ್ತಾರೆ. ಆದುದರಿಂದ ಕಂಪೆನಿಯು ಮಾರಾಟ ಮಾಡಿರುವ ಬುದ್ಧನ ಚಿತ್ರದ ಎಲ್ಲ ಶೂಗಳನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಇಂತಹ ಉತ್ಪನ್ನಗಳ ಮಾರಾಟವನ್ನು ಕೂಡಲೇ ನಿಲ್ಲಿಸಬೇಕು.

ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಕೃತ್ಯದ ಬಗ್ಗೆ ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ ಕೂಡಲೇ ಕ್ಷಮೆಯಾಚನೆಯನ್ನು ಪ್ರಕಟಿಸಬೇಕು ಎಂಬುದು ನನ್ನ ಆಗ್ರಹವಾಗಿದೆ'' ಎಂದು ಟಿಬೆಟ್ ಸಂಸತ್ತಿನ ಉತ್ತರ ಅಮೆರಿಕನ್ ಸದಸ್ಯ ತಾಹ್ಸಿ ನಾಮ್‌ಗ್ಯಾಲ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಪಾಲ್ ಡೆಸಾರ್ಟ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಕಾನ್ ಸಂಸ್ಥೆ 1999ರಲ್ಲಿ ಹಾಲಿವುಡ್ ಚಿತ್ರ ನಿರ್ಮಾಣಗಾರರೊಬ್ಬರಿಂದ ಸ್ಥಾಪಿತವಾಯಿತು. ಶೂ ಹಾಗೂ ಹ್ಯಾಂಡ್ ಬ್ಯಾಗ್ಸ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಐಕಾನ್ ಶೂನಲ್ಲಿ ಬಳಸಲ್ಪಡುವ ಚಿತ್ರಗಳನ್ನು ವಿವಿಧೆಡೆಗಳಿಂದ ಎರವಲು ಪಡೆಯಲಾಗುತ್ತದೆ. ನಂತರ ಈ ಚಿತ್ರಕಾರರಿಗೆ ಸಂಭಾವನೆ ನೀಡಲಾಗುತ್ತದೆ ಎಂದು ಫೇಸ್ ಬುಕ್ ಪುಟದಲ್ಲಿ ಹೇಳಲಾಗಿದೆ.

English summary
The Tibetan and the Buddhist community are outraged at a California-based company for promoting a range of shoes with the Lord Buddha's images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X