ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ನೀಲಿಮಾ ಸಾವು : ಮೂವರು ಟೆಕ್ಕಿಗಳ ಬಂಧನ

By Prasad
|
Google Oneindia Kannada News

Infosys employee death : 3 techies arrested
ಹೈದರಾಬಾದ್, ಆ. 3 : ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ನೀಲಿಮಾ ಯೆರುವಾ (27) ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮೂವರು ಟೆಕ್ಕಿಗಳನ್ನು ಬಂಧಿಸುವಲ್ಲಿ ಹೈದರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿರುವ ಮೂವರು ಸಾಫ್ಟ್ ವೇರ್ ಇಂಜಿನಿಯರುಗಳ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ನೀಲಿಮಾ ಸಾವಿನ ಪ್ರಕರಣವನ್ನು ಆತ್ಮಹತ್ಯೆ ಎಂದೇ ಪೊಲೀಸರು ಆರಂಭದಲ್ಲಿ ಪರಿಗಣಿಸಿದ್ದರು. ಆದರೆ, ಕ್ಯಾಂಪಸ್ಸಿನಲ್ಲಿ ದಕ್ಕಿದ್ದ ಕೆಲಸ ಕುರುಹುಗಳು ಬೇರೆ ಕಥೆಯನ್ನು ಹೇಳುತ್ತಿದ್ದವು. ಮಲ್ಟಿ ಪಾರ್ಕಿಂಗ್ ಲಾಟ್‌ನ ಹತ್ತನೇ ಮಹಡಿಯಲ್ಲಿ ನೀಲಿಮಾಳ ಪರ್ಸ್ ಸಿಕ್ಕಿದ್ದರೆ, ಏಳನೇ ಮಹಡಿಯಲ್ಲಿ ಆಕೆಯ ಚಪ್ಪಲಿ ಸಿಕ್ಕಿತ್ತು. ಅಲ್ಲದೆ, ಆಕೆಯ ದೇಹದ ಮೇಲೆ ಕೆಲ ಗಾಯದ ಗುರುತುಗಳಾಗಿದ್ದವು.

ಇದು ಆತ್ಮಹತ್ಯೆ ಎಂದು ನೀಲಿಮಾಳ ಕುಟುಂಬದವರು ನಂಬಲು ಸಿದ್ಧರಿರಲಿಲ್ಲ. ಆಕೆಯದು ಆತ್ಮಹತ್ಯೆಯಲ್ಲ ಕೊಲೆ ಎಂದು ಅವರು ದೂರು ನೀಡಿದ್ದರು. ಆದರೆ, ಇದು ಕೊಲೆ ಎಂಬುದಕ್ಕೆ ನೀಲಿಮಾ ಕುಟುಂಬದವರು ಯಾವುದೇ ಸಮರ್ಥನೆ ನೀಡಿರಲಿಲ್ಲ. ತನಿಖೆಯನ್ನು ಆರಂಭಿಸಿದ್ದ ಪೊಲೀಸರು ಸೆಕ್ಯೂರಿಟಿ ಗಾರ್ಡ್ ಮತ್ತು ಆಕೆಯ ಸಹೋದ್ಯೋಗಿಗಳ ವಿಚಾರಣೆ ನಡೆಸಿದ ನಂತರ ಇದು ಕೇವಲ ಆತ್ಮಹತ್ಯೆಯಲ್ಲ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ.

ಪ್ರಾಜೆಕ್ಟ್ ಕೆಲಸದ ಮೇಲೆ ಅಮೆರಿಕಾದ ನ್ಯೂ ಜೆರ್ಸಿಗೆ ಹೋಗಿದ್ದ ನೀಲಿಮಾ 2011ರಿಂದ ಅಲ್ಲೇ ವಾಸವಿದ್ದರು. ಅವರ ಪತಿ ಕೂಡ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ದುರ್ಘಟನೆ ನಡೆಯುವ ಕೆಲವೇ ದಿನಗಳ ಹಿಂದೆ ಅವರು ಭಾರತಕ್ಕೆ ಆಗಮಿಸಿದ್ದರು ಮತ್ತು ಆಗಸ್ಟ್ 17ರಂದು ಅಮೆರಿಕಕ್ಕೆ ಮರಳುವವರಿದ್ದರು. ದುರ್ಘಟನೆ ನಡೆದ ದಿನದಂದು ರಾತ್ರಿ 9.30ರವರೆಗೆ ಮಾತ್ರ ಅವರು ಕೆಲಸದ ಸ್ಥಳದಲ್ಲಿದ್ದರು. ಅವರ ಸಾವು ಸಂಭವಿಸಿರುವುದು 10.50 ಸುಮಾರಿಗೆ ಸೆಕ್ಯೂರಿಟಿ ಗಾರ್ಡ್ ಗಮನಕ್ಕೆ ಬಂದಿತ್ತು.

ತನಿಖೆ ಕೈಗೆತ್ತಿಕೊಂಡಿರುವ ಪೊಲೀಸ್ ಅಧಿಕಾರಿಗಳು ಹೇಳುವುದೇನೆಂದರೆ, "ನಾವು ಕಂಪನಿಯ ಅನೇಕ ಸಿಬ್ಬಂದಿಯನ್ನು ವಿಚಾರಿಸಿದ್ದೇವೆ. ನೀಲಿಮಾಳನ್ನು ಆಕೆಗೆ ಪರಿಚಯವಿದ್ದ ಸಹೋದ್ಯೋಗಿಯೊಬ್ಬರು ಡ್ರಾಪ್ ಕೊಡಲೆಂದು ಪಾರ್ಕಿಂಗ್ ಸ್ಥಳಕ್ಕೆ ಕರೆದುಕೊಂಡು ಬಂದಿರಬಹುದು. ಆಗ, ಮಾತಿನ ಚಕಮಕಿ ನಡೆದು ನೀಲಿಮಾ ಓಡಲು ಪ್ರಾರಂಭಿಸಿರಬಹುದು. ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆ ತಾನೇ ಕಟ್ಟಡದಿಂದ ಜಿಗಿದಿದ್ದಾಳೋ, ಆಕೆಯನ್ನು ತಳ್ಳಲಾಗಿದೆಯೋ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ."

ಸಿಸಿಟಿವಿ ದಾಖಲಿಸಿರುವ ಚಲನವಲನಗಳನ್ನು ಪೊಲೀಸರು ಅಭ್ಯಸಿಸುತ್ತಿದ್ದಾರೆ. ನೀಲಿಮಾ ಕುಟುಂಬದವರು ಹೇಳುವಂತೆ ಇದು ಕೊಲೆ ಎಂಬ ಖಚಿತ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಶಕ್ಕೆ ತೆಗೆದುಕೊಂಡಿರುವ ಮೂವರು ಟೆಕ್ಕಿಗಳ ವಿಚಾರಣೆಯ ನಂತರ ನೀಲಿಮಾ ಸಾವಿನ ಹಿಂದಿನ ನಿಖರವಾದ ಕಾರಣ ತಿಳಿದುಬರಬೇಕಿದೆ. ತನಿಖೆಗೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಇನ್ಫೋಸಿಸ್ ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.

English summary
Three techies have been arrested over the death case of Neelima who was an employee with IT giant Infosys in Hyderabad. Initial reports suggested that it was a case of suicide. However, the investigating officials smelt something fishy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X