ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.1: ಆರ್ಚರಿ ನಂತರ ಟೆನಿಸ್, ಹಾಕಿ ತಂಡ ಹೊರಕ್ಕೆ

By Mahesh
|
Google Oneindia Kannada News

Aug.1: Full results of Indian athletes
ಲಂಡನ್, ಆ.2: ಒಲಿಂಪಿಕ್ಸ್ 2012 ಕ್ರೀಡಾಕೂಟದಲ್ಲಿ ಬಿಲ್ಲುಗಾರಿಕೆ ತಂಡ ಸಂಪೂರ್ಣ ಸೋತು ಸುಣ್ಣವಾದ ಬೆನ್ನಲ್ಲೇ ಭಾರತದ ವಿಶ್ವಖ್ಯಾತ ಟೆನಿಸ್ ಪಟುಗಳು ಬುಧವಾರ (ಆ.1) ಟೂರ್ನಿಯಿಂದ ಭಾರತದ ಪದಕದ ಬೇಟೆ ಇನ್ನೂ ನಿಂತಿಲ್ಲ.

ಬಾಡ್ಮಿಂಟನ್ ನಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕರೂ, ಹಾಕಿ ತಂಡದ ವೈಫಲ್ಯ ಮುಂದುವರೆದಿದೆ. ಬುಧವಾರ(ಆ.1) ಭಾರತದ ಕ್ರೀಡಾಪಟುಗಳ ಏಳು ಬೀಳಿನ ಸಂಕ್ಷಿಪ್ತ ವಿವರಣೆ ಇಲ್ಲಿದೆ..

ಬಾಡ್ಮಿಂಟನ್: ಭಾರತದ ಭರವಸೆಯ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಲಂಡನ್ ಒಲಿಂಪಿಕ್ಸ್ ನ ಸಿಂಗಲ್ಸ್ ವಿಭಾಗದ ಕ್ವಾಟರ್ ಫೈನಲ್ ತಲುಪಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಹಾಲೆಂಡಿನ ಜಿ ಯುವೋ ಅವರನ್ನು 21-14,21-16ರ ನೇರ ಸೆಟ್ ಗಳಲ್ಲಿ ಸೋಲಿಸಿದರು. [ಆ.2: ಬಾಕ್ಸರ್ ಗಳ ಪಂಚ್ ನೋಡಲು ಮರೆಯದಿರಿ]

ಮಹಿಳಾ ಡಬಲ್ಸ್ ನಲ್ಲಿ ಉತ್ತಮ ಆಟ ಪ್ರದರ್ಶಿಸಿದರೂ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಜೋಡಿ ಬಿ ಗುಂಪಿನ ಕ್ವಾಟರ್ ಫೈನಲ್ ಹಂತ ತಲುಪಲು ವಿಫಲರಾದರು. ಬೇರೆ ಗುಂಪಿನಲ್ಲಿದ್ದ ಚೀನಾ, ಇಂಡೋನೇಶಿಯಾ ಹಾಗೂ ಮಲೇಶಿಯಾ ಆಟಗಾರರು ಕಳಪೆ ಆಟ, ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಅಮಾನತಾಗಿದ್ದಾರೆ. 1 ಅಂಕ ಕಡಿಮೆ ಹೊಂದಿರುವ ಭಾರತ ಜೋಡಿಯನ್ನು ಮುಂದಿನ ಹಂತಕ್ಕೆ ಕಳಿಸಲು ಒಲಿಂಪಿಕ್ಸ್ ಸಮಿತಿ ನಿರಾಕರಿಸಿದೆ.

ಟೆನಿಸ್ : ಮಹೇಶ್ ಭೂಪತಿ ಹಾಗೂ ರೋಹನ್ ಭೋಪಣ್ಣ ಜೋಡಿ ನಿರ್ಗಮನದ ನಂತರ ಭರವಸೆ ಹುಟ್ಟಿಸಿದ್ದ ಪೇಸ್ ಹಾಗೂ ವಿಷ್ಣುವರ್ಧನ್ ಅವರು ಕೂಡಾ ಒಲಿಂಪಿಕ್ಸ್ ಅಭಿಯಾನಕ್ಕೆ ಮುಕ್ತಾಯ ಹಾಡಿದ್ದಾರೆ.

ಫ್ರಾನ್ಸ್ ಜೋಡಿ ಸೋಂಗಾ ಹಾಗೂ ಲೋದ್ರಾ ಜೋಡಿಗೆ 6-7 (3) 6-4 3-6 ಅಂತರದಿಂದ ಶರಣಾಗಿದೆ. ಮಹೇಶ್ ಭೂಪತಿ ಅವರು 2016ರ ಬ್ರೆಜಿಲ್ ಒಲಿಂಪಿಕ್ಸ್ ನಲ್ಲಿ ಆಡುವುದಿಲ್ಲ. 5 ಬಾರಿ ಒಲಿಂಪಿಕ್ಸ್ ಪದಕಕ್ಕಾಗಿ ಯತ್ನಿಸಿ ಸೋತ್ತಿದ್ದೇನೆ ಎಂದು ಹೇಳಿದ್ದಾರೆ.

ಹಾಕಿ : ಕಳಪೆ ರಕ್ಷಣಾ ವಿಭಾಗ ನಿರ್ವಹಣೆಯಿಂದ ಹಾಕಿ ಇಂಡಿಯಾ ತಂಡ ಸತತ ಎರಡನೇ ಸೋಲು ಕಂಡಿದೆ. ಮೊದಲ ಗೋಲು ದಾಖಲಿಸಿ ಮುನ್ನಡೆ ಪಡೆದ ಭಾರತ ನಂತರ ಕಳಪೆ ಆಟ ಪ್ರದರ್ಶಿಸಿ, 1-3 ಅಂತರದಿಂದ ಸೋತು ಸುಣ್ಣವಾಗಿದೆ. ಹಾಲೆಂಡ್ ವಿರುದ್ಧ ಮೊದಲ ಪಂದ್ಯವನ್ನು 2-3 ಅಂತರದಿಂದ ಸೋತಿತ್ತು.

English summary
Performance of Indian athletes on Aug.1 of the London Olympics 2012. After the Archery team Tennis stars of India bowed out of Olympics 2012. Hockey team bad show continous as they lost to New Zealand. Saina was the lone good performer of the today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X