ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು. 31: ಪದಕ ಬೇಟೆಯಲ್ಲಿ ಶಟ್ಲರ್ ಕಶ್ಯಪ್

By Mahesh
|
Google Oneindia Kannada News

Shuttler P Kashyap
ಲಂಡನ್, ಆ.1: ಒಲಿಂಪಿಕ್ಸ್ 2012 ಕ್ರೀಡಾಕೂಟದಲ್ಲಿ ದಿನೇ ದಿನೇ ಭಾರತ ಕ್ರೀಡಾಳುಗಳು ಸೋತು ನಿರ್ಗಮಿಸುತ್ತಿದ್ದರೂ, ಭಾರತದ ಪದಕದ ಬೇಟೆ ಇನ್ನೂ ನಿಂತಿಲ್ಲ. ಬಾಡ್ಮಿಂಟನ್, ಟೆನಿಸ್ ನಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕರೂ, ರೋಯಿಂಗ್ ಹಾಗೂ ಆರ್ಚರಿಯಲ್ಲಿ ವೈಫಲ್ಯ ಮುಂದುವರೆದಿದೆ. ಮಂಗಳವಾರ(ಜು.31) ಭಾರತದ ಕ್ರೀಡಾಪಟುಗಳ ಏಳು ಬೀಳಿನ ಸಂಕ್ಷಿಪ್ತ ವಿವರಣೆ ಇಲ್ಲಿದೆ..

ಬಾಕ್ಸಿಂಗ್ : ಹೊಂಡುರಾಸ್‌ನ ಬೇರನ್ ಮೊಲಿನಾ ಫುಗ್ಯುರೊ ವಿರುದ್ಧದ ಪಂದ್ಯದಲ್ಲಿ ದೇವೇಂದ್ರೊ ಭಯಂಕರ ಆಟ ಪ್ರದರ್ಶಿಸಿದರು. ದೇವೇಂದ್ರೊ ಪ್ರತಿ ಪಂಚ್‌ಗೆ ಎದುರಾಳಿ ಫ್ಯುಗುರೊ ತತ್ತರಿಸಿಬಿಟ್ಟರು. ಮೊದಲ ಸುತ್ತಿನಲ್ಲೇ ನಾಕೌಟ್ ಪಂಚ್ ಇಟ್ಟ ದೇವೇಂದ್ರೋರನ್ನು ರೆಫ್ರಿ ವಿಜಯಿ ಎಂದು ಘೋಷಿಸಿದರು.
***
ಟೆನಿಸ್ : ಲಿಯಾಂಡರ್ ಪೇಸ್-ವಿಷ್ಣುವರ್ಧನ್ ಜೋಡಿ ಒಲಿಂಪಿಕ್ಸ್ ಗೇಮ್ಸ್‌ನ ಪುರುಷರ ಡಬಲ್ಸ್ ಪಂದ್ಯದ ಮೊದಲ ಸುತ್ತಿನಲ್ಲಿ ಜಯ ಸಾಧಿಸಿ ಎರಡನೆ ಸುತ್ತು ತಲುಪಿದೆ. ಹಾಲೆಂಡ್‌ನ ಜೀನ್ ಜೂಲಿಯನ್ ರೊಜೆರ್ ಹಾಗೂ ರಾಬಿನ್ ಹಾಸೆ ಅವರನ್ನು 7-6(1), 4-6, 6-2 ಸೆಟ್‌ಗಳಿಂದ ಪೇಸ್-ವಿಷ್ಣುವರ್ಧನ್ ಜೋಡಿ ಸೋಲಿಸಿದರು.

ಎರಡನೆ ಸುತ್ತಿನಲ್ಲಿ ಫ್ರೆಂಚ್‌ನ ಬಲಿಷ್ಠ ಜೋಡಿ ಜೋ-ವಿಲ್ಫ್ರೆಡ್ ಸೋಂಗ ಹಾಗೂ ಮೈಕಲ್ ಲೊಡ್ರಾರನ್ನು ಎದುರಿಸಲಿದ್ದಾರೆ. ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಪುರುಷರ ಡಬಲ್ಸ್ ವಿಭಾಗದಲ್ಲಿ ಫ್ರಾನ್ಸ್ ನ ಜುಲಿಯನ್ ಬೆನ್ನೆಟೆ ಮತ್ತು ರಿಚರ್ಡ್ ಗಾಸ್ಕೆಟ್ ವಿರುದ್ಧ 3-6, 4-6ರ ನೇರ ಸೆಟ್ ಗಳಿಂದ ಸೋಲುಂಡಿದ್ದಾರೆ.
****
ಬಾಡ್ಮಿಂಟನ್: ಬಿ ಗುಂಪಿನ ರೌಂಡ್ ರಾಬಿನ್ ಪಂದ್ಯದಲ್ಲಿ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ 2011ಜ್ವಾಲಾ-ಅಶ್ವಿನಿ ಜೋಡಿ ಸಿಂಗಾಪುರದ ಶಿನಿಟಾ ವೌಲಿಯಾ ಸಾರಿ ಹಾಗೂ ಲೆಯ್ ಯಾವೊರನ್ನು ಮಣಿಸಿದರೂ ಕ್ವಾಟರ್ ಫೈನಲ್ ತಲುಪಲು ವಿಫಲರಾಗಿದ್ದಾರೆ.

ಜ್ವಾಲಾ ಅಶ್ವಿನಿ 21-16, 21-15 ಅಂತರದಲ್ಲಿ ಗೆಲುವು ಪಡೆದರು. ಆದರೆ, ಸಿಂಗಾಪುರದ ವಿರುದ್ಧ 8 ಅಂಕಗಳ ವ್ಯತ್ಯಾಸದಿಂದ ಗೆಲುವು ಸಾಧಿಸಿದ್ದರೆ ಮಾತ್ರ ಮುಂದಿನ ಹಂತ ಪ್ರವೇಶ ಸಾಧ್ಯವಿತ್ತು. ಅದರೆ, 7 ಅಂಕ ವ್ಯತ್ಯಾಸದಿಂದ ಜಯ ಸಾಧಿಸಿದ ಭಾರತ ತಂಡವನ್ನು ಹಿಂದಿಕ್ಕಿ ಜಪಾನ್ ತಂಡ ಮುಂದಿನ ಹಂತ ತಲುಪಿದೆ.

ಪುರುಷರ ಸಿಂಗಲ್ಸ್ : ವಿಯೆಟ್ನಾಂನ ನೆಗ್ಯುನ್ ಟಿಯನ್ ಮಿನ್ಹ್ ವಿರುದ್ಧ ನೇರ ಸೆಟ್‌ಗಳಿಂದ ಜಯ ದಾಖಲಿಸಿದ ಬ್ಯಾಡ್ಮಿಂಟನ್ ಪಟು ಪಿ. ಕಶ್ಯಪ್ ಲಂಡನ್ ಒಲಿಂಪಿಕ್ಸ್ ಗೇಮ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಡಿ ಗುಂಪಿನ ಅಂತಿಮ ಪಂದ್ಯದಲ್ಲಿ 11ನೆ ರ್ಯಾಂಕ್‌ನ ಮಿನ್ಹ್ ವಿರುದ್ಧ 21ನೆ ಶ್ರೇಯಾಂಕದ ಕಶ್ಯಪ್ 21-9, 21-14 ಸೆಟ್‌ಗಳಿಂದ ಮಣಿಸಿದರು. ಡಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ ಕಶ್ಯಪ್ ನಾಕೌಟ್ ಹಂತಕ್ಕೇರಿದರು.

ಕಶ್ಯಪ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಗ್ರೂಪ್‌ಸಿ ಅಗ್ರ ಸ್ಥಾನಿ ಶ್ರೀಲಂಕಾದ ನಿಲುಕ ಕರುಣರತ್ನೆಯನ್ನು ಎದುರಿಸಲಿದ್ದಾರೆ. ಈ ಮೊದಲು ಸ್ಟಾಕ್‌ಹೋಂ ಟೂರ್ನಿಯಲ್ಲಿ ಕಶ್ಯಪ್ ಲಂಕಾ ಆಟಗಾರನ ವಿರುದ್ಧ ಗೆಲುವು ಸಾಧಿಸಿದ್ದರು.

ಮಿಶ್ರ ಡಬಲ್ಸ್: ಗ್ರೂಪ್ ಹಂತದಲ್ಲಿ ಸತತ ಮೂರನೆ ಸೋಲನುಭವಿಸಿದ ಭಾರತದ ಮಿಶ್ರ ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ವಿ. ಡಿಜು ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ.

ಮಂಗಳವಾರ ಮೂರನೆ ಹಾಗೂ ಕೊನೆಯ ಸುತ್ತಿನ ಗ್ರೂಪ್ ಪಂದ್ಯದಲ್ಲಿ ಜ್ವಾಲಾ-ಡಿಜು ಜೋಡಿ ಕೇವಲ 27 ನಿಮಿಷಗಳಲ್ಲಿ ದಕ್ಷಿಣ ಕೊರಿಯದ ಜುಂಗ್ ಎನ್ ಹಾ ಹಾಗೂ ಯಂಗ್ ಡಿ ಲೀ ವಿರುದ್ಧ 15-21, 15-21 ಸೆಟ್‌ಗಳಿಂದ ಸೋಲು ಅನುಭವಿಸಿದರು.
***
ಬಿಲ್ಲುಗಾರಿಕೆ : ಪುರುಷರ ವೈಯಕ್ತಿಕ ವಿಭಾಗದ ಬಿಲ್ಲುಗಾರಿಕೆಯಲ್ಲಿ ಜಯಂತ್ ತಾಲೂಕ್ದಾರ್ ಮೊದಲ ಸುತ್ತಿನಲ್ಲಿ, ರಾಹುಲ್ ಬ್ಯಾನರ್ಜಿ ಹಾಗೂ ತರುಣ್‌ದೀಪ್‌ರಾಯ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಟೂರ್ನಿಯಿಮ್ದ ನಿರ್ಗಮಿಸಿದ್ದಾರೆ.

ತಾಲೂಕ್ದಾರ್ ಅಮೆರಿಕದ ಜೇಕಬ್ ವುಕಿ ವಿರುದ್ಧ 6-0ಯಿಂದ ಸುಲಭವಾಗಿ ಸೋತರು. ರಾಹುಲ್ ಬ್ಯಾನರ್ಜಿ ಪೊಲೆಂಡ್‌ನ ರಫೆಲ್ ಡೊಬ್ರೊವೊಲ್ಸಿಕಿ ವಿರುದ್ಧ 3-7 ರಿಂದ ಶರಣಾದರು. ತರುಣ್‌ದೀಪ್ ರಾಯ್, ಕೊರಿಯದ ಬಬ್‌ಮಿನ್ ಕಿಮ್ ವಿರುದ್ಧ 2-6 ರಿಂದ ಸೋತು ಕೂಟದಿಂದ ಹೊರ ನಡೆದರು.
****
ಜುಡೋ : ಮಹಿಳೆಯರ 63 ಕೆಜಿ ವಿಭಾಗದಲ್ಲಿ ಗರಿಮಾ ಚೌಧರಿ ಕೇವಲ 81 ನಿಮಿಷದಲ್ಲಿ ಸೋಲನುಭವಿಸಿ ಹೊರ ನಡೆದರು.. ಜಪಾನ್‌ನ ಯೊಶೀ ಯುನೊರನ್ನು ಎದುರಿಸಿದ ಗರಿಮಾ 1.20 ನಿಮಿಷದಲ್ಲಿ ಸೋಲೊಪ್ಪಿಕೊಂಡರು.

ರೋಯಿಂಗ್: ಸಿಂಗಲ್ಸ್ ಸ್ಕಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸ್ವರ್ಣ ಸಿಂಗ್ ವಿರ್ಕ್ ನಾಲ್ಕನೆ ಸ್ಥಾನ ಪಡೆದಿದ್ದಾರೆ. ಪುರುಷರ ಲೈಟ್‌ವೇಟ್ ಡಬಲ್ಸ್ ಸ್ಕಲ್ಸ್ ನಲ್ಲಿ ಭಾರತದ ಸಂದೀಪ್ ಕುಮಾರ್ ಹಾಗೂ ಮಂಜಿತ್ ಸಿಂಗ್ ಆರು ತಂಡಗಳಿದ್ದ ರಿಪಿಚೇಜ್ ಸುತ್ತಿನಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು.

English summary
Performance of Indian athletes on July 31 of the London Olympics 2012. P Kashyap won his second group match with ease and entered knock out stage. Tennis and shuttler had good day, Archery and Boxers bad luck continued
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X