ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್ ಸ್ಟೇಡಿಯಂ ಖಾಲಿ ಖಾಲಿ ರಹಸ್ಯ ಲೀಕ್

By Mahesh
|
Google Oneindia Kannada News

London Olympics 2012
ಲಂಡನ್, ಜು.31: ಜಾಗತಿಕ ಕ್ರೀಡೆ ಒಲಿಂಪಿಕ್ಸ್ ಆಯೋಜನೆ ಮಾಡುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿರುವ ಇಂಗ್ಲೆಂಡ್ ಮೊದಲ ನಾಲ್ಕು ದಿನಗಳಲ್ಲೇ ಭಾರಿ ಮುಖಭಂಗ ಅನುಭವಿಸಿತು. ಭಾರತದಲ್ಲಿ ಎರಡನೇ ಡಿವಿಷನ್ ಕ್ರಿಕೆಟ್ ಪಂದ್ಯಕ್ಕೆ ಸೇರುವಷ್ಟು ಕ್ರೀಡಾಭಿಮಾನಿಗಳು ಕೂಡಾ ಸ್ಟೇಡಿಯಂನಲ್ಲಿ ಕಾಣಿಸುತ್ತಿರಲಿಲ್ಲ.

ಮಿಲಿಟರಿ ಮಂದಿ ಸ್ಟೇಡಿಯಂನ ಖಾಲಿ ಸ್ಥಾನವನ್ನು ತುಂಬಿಸುತ್ತಿದ್ದರು. ವಿಶ್ವಖ್ಯಾತ ಅಥ್ಲೀಟ್ ಗಳು ಖಾಲಿ ಇರುವ ಕ್ರೀಡಾಂಗಣದಲ್ಲಿ ಮುಜಗರದಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. [ಜು.30: ಕ್ರೀಡಾಪಟುಗಳ ಏಳು ಬೀಳು]

ಇದಕ್ಕೆ ಕಾರಣ ಊಹಿಸುವುದು ಸುಲಭವಾದರೂ ಲಂಡನ್ ಪೊಲೀಸರಿಗೆ, ಟೂರ್ನಿ ಆಯೋಜಕರಿಗೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಆದರೆ, ಕೊನೆಗೂ ಪೊಲೀಸರು ರಹಸ್ಯ ಬೇಧಿಸಿದ್ದಾರೆ. ಜರ್ಮನ್ ಮೂಲದ ವುಲ್ಫ್ ಗ್ಯಾಂಗ್ ಮೆಂಜಲ್ ಎಂಬ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ. ಕಾಳಸಂತೆಯಲ್ಲಿ ಅಕ್ರಮವಾಗಿ ಟಿಕೆಟ್ ಮಾರಾಟದ ಆರೋಪ ಆತನ ಮೇಲೆ ಹೊರೆಸಲಾಗಿದೆ.

ಸ್ಟ್ರಾಟ್ ಫರ್ಡ್ ನ ಒಲಿಂಪಿಕ್ಸ್ ಗ್ರಾಮದ ಬಳಿ 1,100 ಪೌಂಡ್ ಬೆಲೆಯ ಎರಡು ಟಿಕೆಟ್ ಮಾರಾಟ ಮಾಡುತ್ತಿದ್ದ ಮೆಂಜಲ್ ನನ್ನು ಬಂಧಿಸಿದ ಪೊಲೀಸರಿಗೆ ಆತನ ಜೇಬಿನಲ್ಲಿದ್ದ ವಿವಿಧ ಕ್ರೀಡೆಗಳ 31 ಟಿಕೆಟ್ ಗಳು ಸಿಕ್ಕಿದೆ. ನಂತರ ಬ್ಲೂಮ್ಸ್ ಬರಿಯಲ್ಲಿರುವ ಆತನ ಹೋಟೆಲ್ ರೂಮ್ ನಲ್ಲಿ ಹುಡುಕಾಟ ನಡೆಸಿದಾಗ ಇನ್ನೂ 20 ಟಿಕೆಟ್ ಸಿಕ್ಕಿದೆ. ಈತನ ಬಳಿ ಇದ್ದ ಟಿಕೆಟ್ ಗಳ ಮೊತ್ತ ಸುಮಾರು £23,000 ಎನ್ನಲಾಗಿದೆ.

ಆದರೆ, ಮೆಂಜಲ್ ಆರೋಪವನ್ನು ಅಲ್ಲಗೆಳೆದಿದ್ದು, ನನ್ನ ಅಪ್ಪಟ ಕ್ರೀಡಾಪ್ರೇಮಿ. ನಾನು ನನ್ನ ಗೆಳೆಯರು ಪಂದ್ಯಗಳನ್ನು ನೋಡಲು ಈ ಟಿಕೆಟ್ ಪಡೆದಿದ್ದೆ. ಈ ಟಿಕೆಟ್ ಗಳನ್ನು ಯುಕೆಯಲ್ಲಿ ಮಾರಾಟ ಮಾಡಬಾರದು ಎಂಬ ಕಾನೂನು ನನಗೆ ಗೊತ್ತಿಲ್ಲ. ಜರ್ಮನಿಯಲ್ಲಿದ್ದಾಗ ಇಬೇ ಮೂಲಕ ಆನಲೈನ್ ಟಿಕೆಟ್ ಬುಕ್ಕಿಂಗ್ ಮಾಡಿಸಿದ್ದೆ ಎಂದು ಹೇಳಿದ್ದಾನೆ.

57 ವರ್ಷದ ಮೆಂಜಲ್ ಗೆ 435 ಪೌಂಡ್ ಮಾತ್ರ ದಂಡ ವಿಧಿಸಲಾಗಿದೆ. ಟಿಕೆಟ್ ವರ್ಗಾಯಿಸುವಂತಿಲ್ಲ ಹಾಗೂ ಮರು ಮಾರಾಟ ಮಾಡಬಾರದು ಎಂಬ ಕಾನೂನು ಈತನಿಗೆ ತಿಳಿದಿಲ್ಲ ಎಂದು ಜಡ್ಜ್ ಮಾರ್ಕ್ ರಾಡ್ವೇ ಅಭಿಪ್ರಾಯಪಟ್ಟಿದ್ದಾರೆ.

ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಈವರೆಗೆ 29 ಜನ ನಕಲಿ ಟಿಕೆಟ್ ಮಾರಾಟಗಾರರನ್ನು ಬಂಧಿಸಿದ್ದಾರೆ. ಮರು ಮಾರಾಟ ಪ್ರಕರಣದಲ್ಲಿ ಮೆಂಜಲ್ ಸೇರಿದಂತೆ 11 ಜನರು ಕೋರ್ಟ್ ಮೆಟ್ಟಿಲೇರಿದ್ದಾರೆ. ಮೆಂಜಲ್ ನಿರಪರಾಧಿಯೇ ಇರಬಹುದು. ಆದರೆ, ಕಾಳಸಂತೆಯಲ್ಲಿ ಒಲಿಂಪಿಕ್ಸ್ ಟಿಕೆಟ್ ಮರು ಮಾರಾಟದಿಂದ ಲಂಡನ್ ಒಲಿಂಪಿಕ್ಸ್ ಆಯೋಜಕರ ಮಾನ ಮಾರ್ಯದೆ ಹಾಳಾಗಿರುವುದಂತೂ ಸತ್ಯ.

English summary
A 57-year-old German Wolfgang Menzel was fined £435, arrested after he is found with £23,000 worth of Olympics tickets. Black ticket selling, irregular ticket sales caused olympics stadium to go empty stands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X