ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.30: ದುರಾದೃಷ್ಟದ ನಡುವೆ ಭಾರತಕ್ಕೆ ಶುಭಫಲ

By Mahesh
|
Google Oneindia Kannada News

ಲಂಡನ್, ಜು.30: ಒಲಿಂಪಿಕ್ಸ್ 2012 ಕ್ರೀಡಾಕೂಟದಲ್ಲಿ ಜು.30 ಭಾರತದ ಪಾಲಿಗೆ ಶುಭ ದಿನವಾಗಿ ಪರಿಣಮಿಸಿದೆ. ಶೂಟಿಂಗ್ 10 ಮೀ ಏರ್ ರೈಫಲ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಗಗನ್ ನಾರಂಗ್ ಸೋಮವಾರ (ಜು.30)ಕಂಚಿನ ಪದಕ ಗೆದ್ದಿಕೊಂಡರು. ಬಾಡ್ಮಿಂಟನ್, ಟೆನಿಸ್ ನಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕರೂ, ಬಾಕ್ಸಿಂಗ್ ಹಾಗೂ ಹಾಕಿಯಲ್ಲಿ ಭಾರತದ ಲಕ್ ಚೆನ್ನಾಗಿರಲಿಲ್ಲ. ಸೋಮವಾರ ಭಾರತದ ಕ್ರೀಡಾಪಟುಗಳ ಏಳು ಬೀಳಿನ ಸಂಕ್ಷಿಪ್ತ ವಿವರಣೆ ಇಲ್ಲಿದೆ..

ಬ್ಯಾಡ್ಮಿಂಟನ್ : ಭಾರತದ ನಂ.1 ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗ್ರೂಪ್ 'ಇ' ಎರಡನೆ ಪಂದ್ಯದಲ್ಲಿ ಸೈನಾ ಅವರು ಬೆಲ್ಜಿಯಂನ ಲಿಯಾನೆ ತನ್ರ್‌ನ್ನು 21-4 ಮತ್ತು 21-14 ನೇರ ಸೆಟ್‌ಗಳಿಂದ ಮಣಿಸಿದರು.

ಮಹಿಳೆಯರ ಡಬಲ್ಸ್ : ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಮೊದಲ ಜಯ ದಾಖಲಿಸಿದ್ದಾರೆ. ಸೋಮವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಚೈನೀಸ್ ಥೈಪೆಯ ವೆನ್ ಸಿಂಗ್ ಚಾಂಗ್ ಹಾಗೂ ಯೂ ಚಿನ್ ಚೈನ್ ಜೋಡಿಯನ್ನು 25-22,16-21,21-18 ಸೆಟ್ ಗಳಲ್ಲಿ ಮಣಿಸಲು ಭಾರತದ ಜೋಡಿಗೆ 55 ನಿಮಿಷ ಬೇಕಾಯಿತು. ಜ್ವಾಲಾ ಹಾಗೂ ಅಶ್ವಿನಿ ಜೋಡಿ ಮಂಗಳವಾರ ಸಿಂಗಾಪುರ ಜೋಡಿ ವಿರುದ್ಧ ಸೆಣಸಲಿದೆ.

ಬಾಕ್ಸಿಂಗ್ : ರೆಫ್ರಿಯ ವಿವಾದಾತ್ಮಕ ತೀರ್ಪಿಗೆ ಭಾರತದ ಯುವ ಬಾಕ್ಸರ್ ಸುಮಿತ್ ಸಾಂಗ್ವನ್ ಬಲಿ ಪಶುವಾಗಿದ್ದಾರೆ. ಬಾಕ್ಸರ್ ಸುಮಿತ್ ಸಾಂಗ್ವನ್ 81 ಕೆಜಿ ವಿಭಾಗದ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಬ್ರೆಜಿಲ್‌ನ ಯಾಮಗುಚಿ ಪಾಲ್ಕಾವೊ ವಿರುದ್ಧ 14-15 ರಿಂದ ಶರಣಾದರು.

ಬ್ರೆಜಿಲ್ ಆಟಗಾರ ಕಣದಲ್ಲಿದ್ದಾಗ ರೆಫ್ರಿ ಕೂಡಾ ಬ್ರೆಜಿಲ್ ದೇಶದವರಾಗಿದ್ದು ಪ್ರಮಾದ. ರೆಫ್ರಿ ಗ್ರೀಕ್‌ನ ನಿಕೊಲಾಸ್ ನೀಡಿರುವ ತೀರ್ಪು ಸರಿಯಿಲ್ಲ ಭಾರತದ ನಿಯೋಗ ಹಾಗೂ ಕ್ರೀಡಾ ಸಚಿವ ಅಜಯ್‌ಮಾಕನ್‌ ಪ್ರಶ್ನಿಸಿದ್ದರು. ಆದರೆ, ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. [ಜು.29: ಭಾರತದ ಸಾಧನೆ ಹೀಗಿತ್ತು]

ಟೆನಿಸ್ : ಪುರುಷರ ಡಬಲ್ಸ್ ಪಂದ್ಯದಲ್ಲಿ ಮಹೇಶ್ ಭೂಪತಿ-ರೋಹನ್ ಬೋಪಣ್ಣ ಜೋಡಿ ಮ್ಯಾಕ್ಸ್ ಮಿರ್ನಿ-ಅಲೆಕ್ಸಾಂಡರ್ ಬರಿ ವಿರುದ್ಧ ಜಯ ಸಾಧಿಸಿ ಪ್ರಿ-ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.7ನೆ ಶ್ರೇಯಾಂಕಿತ ಭಾರತದ ಜೋಡಿ ಬೆಲಾರಿಸ್ ಜೋಡಿಯನ್ನು 7-6(4), 6-7(4), 8-6 ಸೆಟ್‌ಗಳಿಂದ ಸೋಲಿಸಿದರು.

ಆದರೆ, ವೈಲ್ಡ್‌ಕಾರ್ಡ್ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಸೋಮ್‌ದೇವ್ ವರ್ಮನ್ ಅವರು ಫಿನ್‌ಲೆಂಡ್‌ನ ಜಾರ್ಕೊ ನೀಮಿನಿನ್ ವಿರುದ್ಧ 3-6, 1-6 ಸೆಟ್‌ಗಳಿಂದ ಶರಣಾಗಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಇದೇ ರೀತಿ ಕೊನೆ ಕ್ಷಣದಲ್ಲಿ ಒಲಿಂಪಿಕ್ಸ್ ನ ಪುರುಷರ ಸಿಂಗಲ್ಸ್ ಆಡುವ ಅವಕಾಶ ಪಡೆದಿದ್ದ ಭಾರತದ ವಿಷ್ಣುವರ್ಧನ್ ಕಠಿಣ ಹೋರಾಟವನ್ನು ನೀಡಿದರೂ ನೇರ ಸೆಟ್‌ಗಳಿಂದ ಶರಣಾದರು. ವಿಂಬಲ್ಡನ್ ಹುಲ್ಲುಹಾಸಿನಲ್ಲಿ ಸಿಂಗಲ್ಸ್ ಪಂದ್ಯದ ಮೊದಲ ಸುತ್ತಿನಲ್ಲಿ ವಿಷ್ಣುವರ್ಧನ್ ವಿಶ್ವದ 77ನೆ ಶ್ರೇಯಾಂಕಿತ ಸ್ಲೋವಾಕಿಯದ ಬ್ಲೇಝ್ ಕಾವ್‌ಸಿಕ್ ವಿರುದ್ಧ 3-6, 2-6 ಸೆಟ್‌ಗಳಿಂದ ಸೋಲುಂಡರು.

ಹಾಕಿ : ಭಾರತದ ಪುರುಷರ ಹಾಕಿ ತಂಡ ಬಿ ಗುಂಪಿನ ಮೊದಲ ಒಲಿಂಪಿಕ್ಸ್ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ 2-3 ರಿಂದ ಸೋಲನುಭವಿಸಿದೆ. 8 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಆಡಿದ 10ನೆ ಶ್ರೇಯಾಂಕದ ಭಾರತ ಮೂರನೇ ಶ್ರೇಯಾಂಕನ ಹಾಲೆಂಡ್ ವಿರುದ್ಧ ಮೊದಲಾವಧಿಯಲ್ಲಿ ಎರಡು ಗೋಲುಗಳನ್ನು ಬಿಟ್ಟುಕೊಟ್ಟಿತ್ತು. ರಾಬರ್ಟ್ ವ್ಯಾಂಡರ್ (20) ಹಾಗೂ ರೊಡೆರಿಕ್ (29) ಎರಡು ಗೋಲು ಬಾರಿಸಿದರು.

ನಂತರ ಧರ್ಮವೀರ್‌ಸಿಂಗ್(45ನೆ ನಿಮಿಷ) ಶಿವೇಂದ್ರ ಸಿಂಗ್ 48ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. 51 ನೇ ನಿಮಿಷದಲ್ಲಿ ಮಿಂಕ್ ವಾಂಡರ್‌ವೀರ್ಡೆನ್ ಗೋಲು ಬಾರಿಸಿ ಹಾಲೆಂಡ್ ಮುನ್ನಡೆ ಹಾಗೂ ಜಯ ದೊರಕಿಸಿಕೊಟ್ಟರು. ಭಾರತಕ್ಕೆ ಅಂತಿಮ ಹಂತದಲ್ಲಿ ಪೆನಾಲ್ಟಿ ಕಾರ್ನರ್ ಸಿಗುವ ಅವಕಾಶ ಇತ್ತಾದರೂ ರೆಫ್ರಿ ಕಾರ್ನರ್ ನೀಡಲು ನಿರಾಕರಿಸಿಬಿಟ್ಟರು.

ಬಿಲ್ಲುಗಾರಿಕೆ : ಸೋಮವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬೊಂಬಲ್ಯದೇವಿ ಮೆಕ್ಸಿಕೊದ ರೊಮನ್ ಏಡಾರ ವಿರುದ್ಧ 2-6 ರಿಂದ ಸೋಲನುಭವಿಸಿದರು. ಬೊಂಬಲ್ಯದೇವಿ ಮೊದಲ ಸುತ್ತಿನ ಪಂದ್ಯದಲ್ಲಿ ಗ್ರೀಕ್‌ನ ಎವಾನ್‌ಜಿಲಿಯಾಸಾರಾರನ್ನು 6-4 ಅಂತರದಿಂದ ಮಣಿಸಿದ್ದರು.

English summary
Performance of Indian athletes on July30 of the London Olympics 2012. Saina Nehwal won her second group match with ease and entered knoct out stage. Tennis and shuttler had good day, Hockey team and Boxers bad luck continued
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X