ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಲಿ ಶಾಸಕ ಸುರೇಶ್ ಬಾಬು ಹೈದರಾಬಾದ್ ನಲ್ಲಿ ಬಂಧನ

|
Google Oneindia Kannada News

Kampli MLA Suresh Babu arrested
ಹೈದರಾಬಾದ್, ಜು 30: ಕಂಪ್ಲಿ ಶಾಸಕ ಟಿ ಎಚ್ ಸುರೇಶ್ ಬಾಬು ಅವರನ್ನು ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್ ನಲ್ಲಿ ಸೋಮವಾರ (ಜು 30) ರಾತ್ರಿ ಬಂಧಿಸಿದ್ದಾರೆ.

ಜನಾರ್ಧನ ರೆಡ್ಡಿ ಬೇಲ್ ಗಾಗಿ ಡೀಲ್ ಪ್ರಕರಣದಲ್ಲಿ ಬಾಬು ಅವರನ್ನು ನಗರದ ಅಶೋಕ್ ನಗರದಲ್ಲಿ ಬಂಧಿಸಲಾಗಿದೆ ಎಂದು ಆಂಧ್ರ ಎಸಿಬಿ ಅಧಿಕಾರಿ ಡಿ ಜಿ ಪ್ರಸಾದ್ ಹೇಳಿಕೆ ನೀಡಿದ್ದಾರೆ. ವಿಚಾರಣೆಗೆ ತೆರಳಿದ್ದಾಗ ಸುರೇಶ್ ಬಾಬು ಅವರನ್ನು ಬಂಧಿಸಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಬಳ್ಳಾರಿ ಸಂಸದೆ ಜೆ ಶಾಂತಾ ಮತ್ತು ರಾಯಚೂರು ಸಂಸದ ಸಣ್ಣ ಫಕೀರಪ್ಪ ಅವರ ಜೊತೆ ಇದ್ದ ಸುರೇಶ್ ಬಾಬು ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದು ನಾಳೆ (July 31) ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಬೇಲ್ ಗಾಗಿ ಡೀಲ್ ಪ್ರಕರಣದಲ್ಲಿ ಸುರೇಶ್ ಬಾಬು 4ನೇ ಆರೋಪಿಯಾಗಿದ್ದಾರೆ.

ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಸುರೇಶ್ ಬಾಬು ಅವರಿಗೆ ರೆಡ್ಡಿ ಬೇಲ್ ಡೀಲ್ ಪ್ರಕಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಎಸಿಬಿ ಪೊಲೀಸರು ವಾರಂಟ್ ಜಾರಿ ಮಾಡಿದ್ದರು. ಜನಾರ್ಧನ ರೆಡ್ಡಿ ಅಳಿಯ ಮತ್ತು ಶ್ರೀರಾಮುಲು ನಂತರ ಅವರ ಆಪ್ತರಂದೇ ಗುರುತಿಸಿದ್ದ ಸುರೇಶ ಬಾಬು ರೆಡ್ಡಿ ಕೃಪಾಕಟಾಕ್ಷದಿಂದ ಸಣ್ಣ ವಯಸಿನಲ್ಲೇ ಶಾಸಕರಾಗಿದ್ದರು.

ಓಬುಳಾಪುರಂ ಅಕ್ರಮ ಗಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಜನಾರ್ದನ ರೆಡ್ಡಿಯವರಿಗೆ ಜಾಮೀನು ಒದಗಿಸಲು ನ್ಯಾಯಾಧೀಶರಿಗೇ ಲಂಚ ನೀಡಿದ್ದು, ಪ್ರಕರಣದಲ್ಲಿ ರೆಡ್ಡಿ ಅವರ ಕಟ್ಟಾ ಬೆಂಬಲಿಗರಾದ ಅವರ ಸೋದರ ಸೋಮಶೇಖರ ರೆಡ್ಡಿ ಮತ್ತು ಸುರೇಶ್‌ ಬಾಬು ಪಾತ್ರದ ಬಗ್ಗೆಯೂ ಕೇಳಿಬಂದಿತ್ತು.

ಈ ಸಂಬಂಧ ಎಸಿಬಿಯು ಸೋಮಶೇಖರ ರೆಡ್ಡಿ ಮತ್ತು ಸುರೇಶ್‌ ಬಾಬು ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿತ್ತು.

English summary
Andhra Pradesh ACB police arrested Kampli MLA Suresh Babu in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X