ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.29: ಒಲಿಂಪಿಕ್ಸ್ ನಲ್ಲಿ ಭಾರತದ ಸಾಧನೆ ಹೀಗಿತ್ತು

By Mahesh
|
Google Oneindia Kannada News

Olympics
ಲಂಡನ್, ಜು.29: ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಸ್ವಿಟ್ಜರ್‌ಲೆಂಡ್‌ನ ಸಬ್ರಿನ್ ಜಾಕ್ವೆಟ್ ವಿರುದ್ಧ ಭಾನುವಾರ(ಜು.29) ನಡೆದ ಪಂದ್ಯದಲ್ಲಿ ಸುಲಭ ಜಯ ಸಾಧಿಸಿ ಶುಭಾರಂಭ ಮಾಡಿದರು. ಕೇವಲ 22 ನಿಮಿಷದಲ್ಲಿ ಜಾಕ್ವೆಟ್‌ರನ್ನು 21-9, 21-4 ಸೆಟ್‌ಗಳಿಂದ ಮಣಿಸಿದರು.

ರೌಂಡ್‌ರಾಬಿನ್ ಲೀಗ್ ಆಗಿರುವುದರಿಂದ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಸೈನಾ ಇತರ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಸೈನಾ ಕೇವಲ 10 ನಿಮಿಷದಲ್ಲಿ ಎರಡನೆ ಸೆಟ್‌ನ್ನು ಗೆದ್ದುಕೊಂಡಿದ್ದು, ಸೋಮವಾರದ 'ಈ' ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂನ ಲಿಯನ್ನ ಟ್ಯಾನ್‌ರನ್ನು ಎದುರಿಸಲಿದ್ದಾರೆ.

ಟೆನಿಸ್ : ಸಾನಿಯಾ ಮಿರ್ಝಾ ಹಾಗೂ ರುಶ್ಮಿ ಚಕ್ರವರ್ತಿ ಮಹಿಳೆಯರ ಟೆನಿಸ್ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ಶನಿವಾರ ತಡರಾತ್ರಿ 1 ಗಂಟೆ, 30 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ-ರುಶ್ಮಿ ಜೋಡಿ ಚೈನೀಸ್ ಥೈಪೆಯ ಸೂ ವೀ ಸೀ ಹಾಗೂ ಚೀಯಾ-ಜುಂಗ್ ವಿರುದ್ಧ 1-6, 6-3, 1-6 ಸೆಟ್‌ಗಳಿಂದ ಸೋಲನುಭವಿಸಿದರು.

ರೋಯಿಂಗ್ : ಪುರುಷರ ವಿಭಾಗದ ಸಿಂಗಲ್ಸ್ ಸ್ಕಲ್ಸ್‌ನಲ್ಲಿ(ರಿಪಿಚೇಜ್) ಜಯ ಸಾಧಿಸಿದ ಸ್ವರ್ಣ ಸಿಂಗ್ ಲಂಡನ್ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಶನಿವಾರ ನಡೆದ ಸ್ಪರ್ಧೆಯಲ್ಲಿ 2 ಕಿ.ಮೀ. ಅಂತರವನ್ನು 6:54:04 ಸೆಕೆಂಡ್‌ನಲ್ಲಿ ತಲುಪಿ 4ನೆ ಸ್ಥಾನ ಪಡೆದಿದ್ದ ಹಿನ್ನಲೆಯಲ್ಲಿ ಇಂದು ಸ್ವರ್ಣ ಸಿಂಗ್ ರಿಪಿಚೇಜ್ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಿದ್ದರು. [ಜು.30 ಒಲಿಂಪಿಕ್ಸ್: ಭಾರತದ ಆಟೋಟಗಳು ]

23ರ ಹರೆಯದ ಪಂಜಾಬ್‌ನ ಸಿಂಗ್ ಅವರು ಐವರು ಸದಸ್ಯರಿದ್ದ ರಿಪಿಚೇಜ್ ಸುತ್ತಿನ ರೋಯಿಂಗ್ ರೇಸ್‌ನಲ್ಲಿ 2 ಕಿ.ಮೀ. ದೂರವನ್ನು 7:00:49 ಸೆಕೆಂಡ್‌ನಲ್ಲಿ ತಲುಪಿ ಕ್ವಾರ್ಟರ್ ಫೈನಲ್‌ಗೇರಿದರು. ಕ್ವಾರ್ಟರ್ ಫೈನಲ್ ಮಂಗಳವಾರ(ಜು.31) ನಡೆಯಲಿದೆ. ಐವರು ರೋಯಿಂಗ್ ಸ್ಪರ್ಧಿಗಳಲ್ಲಿ ಸ್ವರ್ಣ ಸಿಂಗ್ ಆರಂಭದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಪುರುಷರ ಡಬಲ್ಸ್ ಸ್ಕಲ್ಸ್ ಹೀಟ್‌ನಲ್ಲಿ ಭಾರತದ ರೋವರ್‌ಗಳಾದ ಸಂದೀಪ್ ಕುಮಾರ್ ಹಾಗೂ ಮಂಜಿತ್ ಸಿಂಗ್ ನಾಲ್ಕನೆ ಸ್ಥಾನವನ್ನು ಪಡೆದರು. ಮಂಜಿತ್ ಹಾಗೂ ಸಂದೀಪ್ 6:56:60 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಜೋಡಿ ಲೈಟ್‌ವೇಟ್ ಡಬಲ್ ಸ್ಕಲ್ಸ್‌ನ ರಿಪಿಚೇಜ್‌ನಲ್ಲಿ ಭಾಗವಹಿಸಲಿದೆ.
****

ಬಾಕ್ಸಿಂಗ್ : ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಒಲಿಂಪಿಕ್ಸ್ ಗೇಮ್ಸ್‌ನ 75 ಕೆಜಿ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಶನಿವಾರ ತಡ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 27ರ ಹರೆಯದ ವಿಜೇಂದರ್ ಅವರು ಕಜಕಿಸ್ತಾನದ ಡನಬೆಕ್ ಸುಕನೊವ್‌ರನ್ನು 14-10 ಅಂತರದಿಂದ ಮಣಿಸಿದರು.

ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿರುವ ಹರ್ಯಾಣದ ವಿಜೇಂದರ್, ಎರಡನೆ ಸುತ್ತಿನಲ್ಲಿ ಮೇಲುಗೈ ಸಾಧಿಸಿದ ವಿಜೇಂದರ್ 4-3 ಮುನ್ನಡೆಯನ್ನು ಸಾಧಿಸಿ, ಮೂರನೆ ಹಾಗೂ ಕೊನೆಯ ಸುತ್ತಿನಲ್ಲಿ ಹೆಚ್ಚಿನ ಒತ್ತಡವಿಲ್ಲದೆ 14-10 ರಿಂದ ಜಯ ಸಾಧಿಸಿದರು. ವಿಜೇಂದರ್ ಆ.2ರಂದು ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಟರೆಲ್ ಗೌಶಾರನ್ನು ಎದುರಿಸಲಿದ್ದಾರೆ.

ಪುರುಷರ ಲೈಟ್‌ವೇಟ್ ಬಾಕ್ಸಿಂಗ್‌ನಲ್ಲಿ(60 ಕೆಜಿ) ಸಿಷೆಲ್ಸ್ ನ ಅಲಿಸೊಪ್ ವಿರುದ್ಧ 18-8 ರಿಂದ ಗೆಲುವು ಪಡೆದ ಭಾರತದ ಬಾಕ್ಸರ್ ಜೈ ಭಗವಾನ್ ಲಂಡನ್ ಒಲಿಂಪಿಕ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
***
ಶೂಟಿಂಗ್ : ಭಾರತೀಯ ಶೂಟರ್‌ಗಳಾದ ಹೀನಾ ಸಿಧು ಹಾಗೂ ಅನ್ನು ರಾಜ್ ಸಿಂಗ್ ಮಹಿಳೆಯರ 10 ಮೀ. ಏರ್ ಪಿಸ್ತೂಲು ಅರ್ಹತಾ ಸುತ್ತಿನ ಪಂದ್ಯದಲ್ಲಿ ವಿಫಲರಾಗಿದ್ದಾರೆ. ರಾಯಲ್ ಆರ್ಟಿಲರಿ ಬಾರೆಕ್ಸ್ ನಲ್ಲಿ ಅರ್ಹತಾ ಸುತ್ತಿನ ಪಂದ್ಯದಲ್ಲಿ 382 ಅಂಕ ಗಳಿಸಿದ ಹೀನಾ 12ನೆ ಸ್ಥಾನ ಹಾಗೂ 378 ಅಂಕ ಪಡೆದ ಅನ್ನು ರಾಜ್ 23ನೆ ಸ್ಥಾನ ಪಡೆದರು.
*****
ಬ್ಯಾಡ್ಮಿಂಟನ್ : ಎರಡನೆ ಗ್ರೂಪ್ ಪಂದ್ಯದಲ್ಲಿ ಭಾರತದ ಮಿಶ್ರ ಡಬಲ್ಸ್ ಜೋಡಿ ಜ್ವಾಲಾಗುಟ್ಟಾ -ವಿ ಡಿಜು ಲಂಡನ್ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ. ಇಂದು ಕೇವಲ ಅರ್ಧಗಂಟೆಯಲ್ಲಿ ಕೊನೆಗೊಂಡ ಪಂದ್ಯದಲ್ಲಿ ಜ್ವಾಲಾ-ಡಿಜು ಜೋಡಿ ಡೆನ್ಮಾರ್ಕ್‌ನ ಟಿ ಲೇಬೋರ್ನ್ ಹಾಗೂ .ಆರ್. ಜುಹ್ಲ್ ವಿರುದ್ಧ 12-21, 16-21 ಸೆಟ್‌ಗಳಿಂದ ಸೋಲುಂಡಿತು. ಮೊದಲ ಗ್ರೂಪ್ ಪಂದ್ಯದಲ್ಲೂ ಈ ಜೋಡಿ ಇಂಡೋನೇಷ್ಯಾ ಜೋಡಿಗೆ ಶರಣಾಗಿತ್ತು.

ಮಂಗಳವಾರ ಕೊನೆಯ ಗ್ರೂಪ್ ಪಂದ್ಯದಲ್ಲಿ ಜ್ವಾಲಾ-ಡಿಜು ಜೋಡಿ ಕೊರಿಯದ ಯೊಂಗ್‌ಡೀ ಲೀ ಹಾಗೂ ಜುಂಗ್ ಎನ್ ಹಾರನ್ನು ಎದುರಿಸಲಿದ್ದಾರೆ.
****
ಬಿಲ್ಲುಗಾರಿಕೆ : ಭಾರತೀಯ ಮಹಿಳಾ ಆರ್ಚರಿ ತಂಡ ಕೂಡ ಕಳಪೆ ಪ್ರದರ್ಶನ ನೀಡಿ ಒಲಿಂಪಿಕ್ಸ್ ನಿಂದ ಹೊರ ನಡೆದಿದೆ. ಡೆನ್ಮಾರ್ಕ್ ವಿರುದ್ಧದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ದೀಪಿಕಾ ಕುಮಾರಿ, ಬೊಂಬಲ್ಯಾದೇವಿ ಹಾಗೂ ಚೆಕ್ರೊವೊಲೂ ಸೂರೊ ಒಳಗೊಂಡ ಭಾರತದ ಆರ್ಚರಿ ತಂಡ ಡೆನ್ಮಾರ್ಕ್‌ನ ಲೌಸೀ ಲೌಸೆನ್,ಮಾಜ ಜಾಗೆರ್ ಹಾಗೂ ಕರಿನ ಕ್ರಿಸ್ಟಿಯನ್ಸೆನ್ ವಿರುದ್ಧ 210-211 ಅಂತರದಿಂದ ಶರಣಾಗಿ ನಿರಾಶೆಗೊಳಿಸಿದರು.

English summary
Performance of Indian athletes on the third day of the London Olympics 2012. Saina Nehwal won her first group match with ease.Saina Nehwal bt Sabrina Jaquet (SWI) 21-9 21-4
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X