ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ragging ಕಡಿವಾಣಕ್ಕೆ ಕೇಂದ್ರದಿಂದ ವೆಬ್ ಬಾಣ

By Srinath
|
Google Oneindia Kannada News

ನವದೆಹಲಿ, ಜುಲೈ 27: ವಿದ್ಯಾರ್ಥಿಗಳ ಪಾಲಿಗೆ ದುಃಸ್ವಪ್ನವಾಗಿರುವ Raggingಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಕೇಂದ್ರ ಸರಕಾರವು ಇಂದು ವೆಬ್ ಬಾಣ ಬಿಟ್ಟಿದೆ.

new-delhi-anti-ragging-portal-launched-hrd-ministry

ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳಲ್ಲಿ ಕಂಡುಬರುವ ಈ ಸಾಮಾಜಿಕ ಪಿಡುಗನ್ನು ನಿಯಂತ್ರಿಸಲು ಸರಕಾರವು www.antiragging.in ಅಂತರ್ಜಾಲ ತಾಣದ ಮೂಲಕ ಕ್ರಮ ಕೈಗೊಂಡಿದ್ದು, ಬಾಧಿತರು ದಿನದ 24 ಗಂಟೆಯಲ್ಲಿ ದೇಶದ ಯಾವುದೇ ಮೂಲೆಯಿಂದಲೂ Ragging ವಿರುದ್ಧ ದೂರು ಸಲ್ಲಿಸಬಹುದು. ಬಾಧಿತರು ಪ್ರಕರಣದ ಬೆನ್ನುಹತ್ತಿ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಶುಕ್ರವಾರ ಇಂದು ಈ ಜಾಲಕ್ಕೆ ಅಧಿಕೃತ ಚಾಲನೆ ನೀಡಿದರು. ಅಂದಹಾಗೆ, ಯುಜಿಸಿ ಈ ಅಂತರ್ಜಾಲ ತಾಣದ ನಿರ್ವಹಣೆ ಹೊತ್ತಿದೆ. 2009ರಲ್ಲಿ ಹಿಮಾಚಲ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲಿ ಅಮನ್ ಎಂಬ ವಿದ್ಯಾರ್ಥಿ Raggingಗೆ ಬಲಿಯಾಗಿದ್ದ.

ಅಮನ್ ತಂದೆ ರಾಜೇಂದ್ರ ಖಚ್ರೋ ಈ ಅಂತರ್ಜಾಲ ತಾಣಕ್ಕೆ ನೀರೆರೆಯುತ್ತಿದ್ದಾರೆ. ಅಮನ್ ಸತ್ಯ ಅಮನ್ ಖಚ್ರೋ ಟ್ರಸ್ಟ್ ದಿನದ 24 ಗಂಟೆಯೂ ಈ ವೆಬ್ ಜಾಲದ ಮೇಲೆ ನಿಗಾಯಿಟ್ಟಿರುತ್ತದೆ.

'ಪ್ರಕರಣದ ಗಂಭೀರತೆಯನ್ನು ಅವಲಂಬಿಸಿ ತಕ್ಷಣ ದೂರಿನ ಬಗ್ಗೆ ಪೊಲೀಸರು, ಮ್ಯಾಜಿಸ್ಟ್ರೇಟ್ ಹಾಗೂ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗುವುದು. ದೂರವಾಣಿ ಮೂಲಕವೂ (ಸಂಖ್ಯೆ 18001805522) ಪ್ರಕರಣ ದಾಖಲಿಸಬಹುದಾಗಿದೆ' ಎಂದು ಯುಜಿಸಿ ಅಧ್ಯಕ್ಷ ವೇದ್ ಪ್ರಕಾಶ್ ತಿಳಿಸಿದ್ದಾರೆ.

'ದೂರಿನ ಪ್ರತಿ ಹಂತದಲ್ಲೂ ತನಿಖೆ ಪ್ರಗತಿ ಬಗ್ಗೆ ಕಣ್ಗಾವಲಿಡಲಾಗುವುದು. ಯಾವುದೇ ಹಂತದಲ್ಲಿ ತನಿಖೆಯ ಜಾಡು ಹಾದಿ ತಪ್ಪುತ್ತಿದೆ ಅನಿಸಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು' ಎಂದು ಸಚಿವ ಸಿಬಲ್ ಇದೇ ವೇಳೆ ಹೇಳಿದರು. 2009ರ ಮೇ ತಿಂಗಳಲ್ಲಿ Ragging ಪಿಡುಗಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಕಠಿಣಾತಿಕಠಿಣ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಆದೇಶಿಸಿತ್ತು.

English summary
New Delhi Anti-Ragging portal launched HRD Ministry. The government launched an anti-ragging website helping students of universities, colleges and professional institutes lodge online complaints against ragging or harassment and seek faster response. www.antiragging.in
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X