ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಕ ಬರ: ಕಸಾಯಿಖಾನೆಗೆ ಜಾನುವಾರುಗಳ ಮಾರಾಟ

By Srinath
|
Google Oneindia Kannada News

north-karnataka-cattle-sold-due-lack-of-fodder-water
ಹಾವೇರಿ, ಜುಲೈ 25: ತಮ್ಮ ಮನೆಯಲ್ಲಿ ಸಾಕಿಕೊಂಡಿದ್ದ ಜಾನುವಾರುಗಳಿಗೆ ತಿನ್ನಿಸಲು ಮೇವಿಲ್ಲದೆ, ಕುಡಿಸಲು ನೀರಿಲ್ಲದೆ ಪರದಾಡುತ್ತಿರುವ ಉತ್ತರ ಕರ್ನಾಟಕದ ರೈತ ಕುಟುಂಬಗಳು ಹಸು- ಎತ್ತುಗಳನ್ನು ಅಗ್ಗದ ದರಕ್ಕೆ ಮಾರಾಟ ಮಾಡಿ, ಕೈತೊಳೆದುಕೊಳ್ಳುತ್ತಿದ್ದಾರೆ.

ಜಾನುವಾರು ಯೋಗಕ್ಷೇಮಕ್ಕೆ ಕ್ಷಾಮದ ಬರೆ:
ಹೀಗೆ ಜಾನುವಾರುಗಳ ಯೋಗಕ್ಷೇಮಕ್ಕೆ ಬಾಧಕವಾಗಿರುವುದು ತೀವ್ರ ಕ್ಷಾಮ. ದುಃಸ್ಥಿತಿಯಲ್ಲಿರುವ ರೈತರು ಕೊನೆಗೆ ಅನ್ಯ ಮಾರ್ಗವಿಲ್ಲದೆ ಕಸಾಯಿಖಾನೆಗೆ ಕೇಳಿದಷ್ಟು ಬೆಲೆಗೆ ತಮ್ಮ ಜಾನುವಾರುಗಳನ್ನು ತಳ್ಳುತ್ತಿದ್ದಾರೆ. ರೈತರು ಈ ಹಿಂದೆ ತಾವು ಖರೀದಿಸಿದ್ದಕ್ಕಿಂತ ಅರ್ಧದಷ್ಟು ಕಡಿಮೆ ಬೆಲೆಗೇ ಮಾರಿಬಿಡುತ್ತಿದ್ದಾರೆ. ಬಿಜಾಪುರ, ಧಾರವಾಡ, ಬಾಗಲಕೋಟ, ಹಾವೇರಿ, ಗದಗ ಜಿಲ್ಲೆಗಳ ರೈತರು ಇಂತಹ ದುಃಸ್ಥಿತಿಗೆ ತಲುಪಿದ್ದಾರೆ.

ಸಾಮಾನ್ಯವಾಗಿ ಈ ಭಾಗದ ರೈತರು ಹಸುಗಳಿಗೆ 50,000 ದಿಂದ 80,000 ರುಪಾಯಿ ಕೊಟ್ಟು ಖರೀದಿಸಿರುತ್ತಾರೆ. ಹಾಗೆಯೇ ಜೋಡಿ ಎಮ್ಮೆಗೆ 25,000 ರೂ. ದಿಂದ 30,000 ರು. ನೀಡಿರುತ್ತಾರೆ. ಆದರೆ ಇದೇ ರೈತರು ಈಗ ಬರ ಪರಿಸ್ಥಿತಿಯಿಂದಾಗಿ 15,000 ದಿಂದ 20,000 ರುಪಾಯಿಗೆಲ್ಲ ಮಾರಿಬಿಡುತ್ತಿದ್ದಾರೆ.

ಅದೇ ರೀತಿ ಎಮ್ಮೆಗಳನ್ನು ಅಬ್ಬಬ್ಬಾ ಅಂದರೆ 10,000 ರೂ. ಗೆ ಮಾರುತ್ತಿದ್ದಾರೆ. ದುರಂತವೆಂದರೆ ಇಂತಹ ಬಡ ಜಾನುವಾರುಗಳನ್ನು ಖರೀದಿಸುವವರು ಕಸಾಯಿಖಾನೆಯ ಕಟುಕರೇ. ಹೀಗೆ ಕಡಿಮೆ ಬೆಲೆಗೆ ಖರೀದಿಸಿದ ಕಟುಕರು ಪಕ್ಕದ ಗೋವಾ ಮತ್ತು ಮಹಾರಾಷ್ಟ್ರಗೆ ಸಾಗಾಟ ಮಾಡುತ್ತಿದ್ದಾರೆ.

ಬಿಜಾಪುರದ ಗ್ರಾಮವೊಂದರಲ್ಲಿ 60 ರೈತ ಕುಟುಂಬಗಳಿವೆ. ಈ ಮನೆಗಳಲ್ಲಿ ತಲಾ ಒಂದೆರಡು ಜೋಡಿ ಹಸುಗಳು ಇದ್ದವು. ಆದರೆ ಈಗ 55 ಕುಟುಂಬಗಳು ತಮ್ಮ ಮನೆಗಳಲ್ಲಿದ್ದ ಜಾನುವಾರುಗಳನ್ನು ಅಗ್ಗದ ಬೆಲೆಗೆ ಮಾರಿದ್ದಾರೆ. ಇದು ಇಲ್ಲಿನ ಬರ ಚಿತ್ರಕ್ಕೆ ಹಿಡಿದ ಕನ್ನಡಿಯಾಗಿದೆ.

ಬರ ಜಿಲ್ಲೆಗಳಲ್ಲಿ ಸರಕಾರವೇನೋ ಒಂದಷ್ಟು ಗೋಶಾಲೆಗಳನ್ನು ತೆರೆದಿವೆಯಾದರೂ ಅಲ್ಲಿ ನೀರು-ಮೇವು ಸುಳಿದಿಲ್ಲ. ಹೀಗೆ ನೀರು-ಮೇವಿನ ಕೊರತೆಯಿಂದಾಗಿ ಹಸು, ಎಮ್ಮೆ, ಎತ್ತುಗಳು ಕಸಾಯಿ ಖಾನೆ ಸೇರುತ್ತಿವೆ.

English summary
Drought hit North Karnataka Farmers selling cattle and buffaloes due to dearth of fodder and water. Many farmers in north-karnataka have already sold their live stocks for a throw away price. Most of the Cattle are sold to slaughter houses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X