ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ ಐದೇ ಜಿಲ್ಲೆಗಳಲ್ಲಿ ಉತ್ತಮ ಮಳೆ

By Srinath
|
Google Oneindia Kannada News

monsoon-karnataka-5-districts-receive-normal-rains
ಬೆಂಗಳೂರು, ಜುಲೈ 25: ಮುಂಗಾರು ನಿಜಕ್ಕೂ ವ್ಯಾಪಕವಾಗಿ ಮುನಿಸಿಕೊಂಡಿದೆ. ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ. 2 ಜಿಲ್ಲೆಗಳಲ್ಲಿ ಹೆಚ್ಚಾಗಿ ಬಿದ್ದಿದೆ. ಎರಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ. 14 ಜಿಲ್ಲೆಗಳಲ್ಲಿ ಎಲ್ಲೋ ಒಂಚೂರು ಮಳೆಯಾಗಿದೆ. 7 ಜಿಲ್ಲೆಗಳಲ್ಲಂತೂ ಸುತರಾಂ ಮಳೆಯಾಗಿಲ್ಲ.

ಅದರಲ್ಲೂ ನೈಋತ್ಯ ಮುಂಗಾರು ಐದು ಜಿಲ್ಲೆಗಳಲ್ಲಷ್ಟೇ ವಾಡಿಕೆಯಂತೆ ಸಾಮಾನ್ಯವಾಗಿತ್ತು. 25 ಜಿಲ್ಲೆಗಳಲ್ಲಿ ತೀರಾ ಕ್ಷೀಣವಾಗಿತ್ತು. ಎರಡೇ ಜಿಲ್ಲೆಗಳಲ್ಲಿ ಈ ಮಳೆ ಧೋ ಎಂದು ಬಿರುಸಾಗಿ ಸುರಿದಿದೆ. 17 ಜಿಲ್ಲೆಗಳಲ್ಲಿ ತುಂಬಾ ತೆಳುವಾದ ಮಳೆಯಾಗಿದೆ.

ಕಳೆದ 24 ಗಂಟೆಗಳಲ್ಲಿ (ಮಂಗಳವಾರಕ್ಕೆ) ಶೇ. 25 ಹೋಬಳಿಗಳಲ್ಲಿ 2.5 ಮಿಮೀ ಮಳೆಯಾಗಿದೆಯಷ್ಟೆ. ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರದಲ್ಲಿ ಗರಿಷ್ಠ 77.5 ಮಿಮೀ ಮಳೆಯಾಗಿದೆ ಎಂದು ರಾಜಧಾನಿಯಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ (KSNDMC) ತಿಳಿಸಿದೆ.

ಉತ್ತರ ಕನ್ನಡ, ಕೊಡಗು, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಸಾಧಾರಣದಿಂದ ಭರ್ಜರಿ ಮಳೆಯಾಗಿದೆ. ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ತುಸು ಹೆಚ್ಚೇ ಅನಿಸುವಷ್ಟು ವ್ಯಾಪಕ ಮಳೆಯಾಗಿದೆ. ದಾವಣಗೆರೆ ಮತ್ತು ಬೀದರಿನಲ್ಲಿ ಸಾಧಾರಣ, ತುಂತುರು ಮಳೆಯಾಗಿದೆ.

ಬಿಜಾಪುರ, ಗುಲ್ಬರ್ಗಾ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಹಾಸನ, ಯಾದಗಿರಿ, ಬೆಳಗಾವಿ, ಧಾರವಾಡ, ಚಿತ್ರದುರ್ಗ, ರಾಯಚೂರು, ತುಮಕೂರು ಮತ್ತು ಗದಗದಲ್ಲಿ ಹೆಚ್ಚು ಮಳೆಯಾಗಿದೆ. ಜೂನ್ 1 ರಿಂದ ಜುಲೈ 23ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಶೇ. 39ರಷ್ಟು ಕೊರತೆ ಮಳೆಯಾಗಿದೆ. 412 ಮಿಮೀ ಮಳೆಯಾಗಬೇಕಿದ್ದ ಕಡೆ 251 ಮಿಮೀ ಮಾತ್ರವೇ ಮಳೆಯಾಗಿದೆ.

English summary
Karnataka Monsoon 2012 -only 5 districts receive normal rains according to Bangalore-based Karnataka State Natural Disaster Management Centre (KSNDMC). The luck 5 : Uttara Kannada, Dakshina Kannada, Kodagu, Chikmaglur and Udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X