ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೀಕ್ಷೆಯಲ್ಲಿ ಪಾಸ್ ಆಗ್ಬೇಕಾ? ಮಂಚ ಏರು ಎಂದ

By Mahesh
|
Google Oneindia Kannada News

Examination Controller Dubey Arrested MP
ಇಂದೋರ್, ಜು.25: ಪರೀಕ್ಷೆಯಲ್ಲಿ ಪಾಸ್ ಆಗಬೇಕಾ? ಒಳ್ಳೆ ಮಾರ್ಕ್ಸ್ ಸಿಗಬೇಕಾ? ಹಾಗಿದ್ರೆ ನನ್ನ ಮಂಚವೇರಿ ಕೊಂಚ ಸಹಕರಿಸು ಎಂದು ವಿದ್ಯಾರ್ಥಿನಿಯೊಬ್ಬಳನ್ನು ಕರೆದು ಕಿರುಕುಳ ನೀಡುತ್ತಿದ್ದ ಕಾಮಂಧ ಮೌಲ್ಯಮಾಪಕ ಅಧಿಕಾರಿಯನ್ನು ಇಂದೋರ್ ನಗರ ಪೊಲೀಸರು ಸೋಮವಾರ(ಜು.23) ಬಂಧಿಸಿದ್ದಾರೆ. ಮಧ್ಯಪ್ರದೇಶ ಸರ್ಕಾರದ ಪ್ರಭಾವಿ ರಾಜಕಾರಣಿಗಳ ನಿಕಟ ಸಂಪರ್ಕ ಹೊಂದಿರುವ ಜ್ಯೋತಿ ಸ್ವರೂಪ್ ದುಬೆ ಎಂಬ ವ್ಯಕ್ತಿಯ ಮೇಲೆ ಈ ರೀತಿ ಆರೋಪಗಳು ಕೇಳಿಬಂದಿತ್ತು.

ಮನ್ ಕುವಾರ್ ಬಾಯಿ ಮಹಿಳಾ ಕಾಲೇಜಿನ ಬಿಕಾಂ ಎರಡನೇ ಸೆಮಿಸ್ಟರ್ ನ ವಿದ್ಯಾರ್ಥಿನಿಯೊಬ್ಬಳಿಗೆ ದುಬೆ ಅಂಕಕ್ಕಾಗಿ ಸೆಕ್ಸ್ ಆಫರ್ ನೀಡಿದ್ದ ಎನ್ನಲಾಗಿದೆ.

'ಕಾಲೇಜು ಕ್ಲಾಸ್ ರೂಮ್ ನಲ್ಲಿ ಒಬ್ಬಂಟಿಯಾಗಿದ್ದಾಗ ನನ್ನ ಬಳಿ ಬಂದು ಮೈಕೈ ತಡವಿ ಅಸಹ್ಯವಾಗಿ ಸನ್ನೆ ಮಾಡುತ್ತಿದ್ದ. ನಾನು ಪ್ರತಿರೋಧಿಸಿದಾಗ ಎಲ್ಲಿ ಹೋಗುತ್ತೀಯಾ ನಿಮ್ಮ ಪೇಪರ್ ನಾನೇ ಕರೆಕ್ಟ್ ಮಾಡೋದು ಪಾಸ್ ಆಗ್ಬೇಕು ಅಂದ್ರೆ ನನ್ನ ಜೊತೆ ಸಹಕರಿಸು ಎಂದು ಬೆದರಿಸಿದ. ಯಾರೂ ಇಲ್ಲ ಸಮಯದಲ್ಲಿ ಕಾಫಿ ಶಾಪ್ ಕಡೆ ಬಾ'ಎಂದು ಪದೇ ಪದೇ ಪೀಡಿಸುತ್ತಿದ್ದ ಎಂದು ನೊಂದ ವಿದ್ಯಾರ್ಥಿನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಆದರೆ, ದೂರು ದಾಖಲಿಸಿಕೊಂಡ ಪೊಲೀಸರು ಯಾವುದೇ ಕ್ರಮ ಜರುಗಿಸದೆ ಸುಮ್ಮನಾಗಿಬಿಟ್ಟರು. ನಂತರ ಈ ವಿಷಯ ಸ್ಥಳೀಯ ಎಬಿವಿಪಿ ಸಂಘಟನೆಗೆ ಗೊತ್ತಾಯಿತು. ಸೋಮವಾರ ಪೊಲೀಸ್ ಠಾಣೆ ಎದುರು ಎಬಿವಿಪಿ ಕಾಯಕರ್ತರು ಪ್ರತಿಭಟನೆ ನಡೆಸಿ ದುಬೆ ಬಂಧನಕ್ಕಾಗಿ ಆಗ್ರಹಿಸಿದರು.

ಕಾಲೇಜಿನ ಪ್ರತಿಭಾವಂತೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಲ್ಲದೆ, ಆಕೆಯನ್ನು ಪರೀಕ್ಷೆಯನ್ನು ಫೇಲ್ ಮಾಡಿ ದೊಡ್ಡ ಅಪರಾಧ ಮಾಡಿರುವ ದುಬೆಗೆ ತಕ್ಕ ಶಿಕ್ಷೆ ಆಗಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಕಾಲೇಜಿನ ಪ್ರಿನ್ಸಿಪಾಲ್ ಅನುಪಮ ಗಂಗೂಲಿ, ದುಬೆಯನ್ನು ತಕ್ಷಣವೇ ಅಮಾನತು ಮಾಡಿದ್ದಾರೆ. ನಂತರ ದುಬೆಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ರಾಣಿ ದುರ್ಗಾವತಿ ವಿವಿಯಲ್ಲಿ sex -for marks ಪ್ರಕರಣ ಈ ಮುಂಚೆ ಕೂಡಾ ಸಂಬ್ಭವಿಸಿತ್ತು. ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳಿಗೆ ಏಜೆಂಟ್ ನೊಬ್ಬನ ಜೊತೆ ಮಲಗುವಂತೆ ಒತ್ತಡ ಹೇರಲಾಗಿತ್ತು. ಫಲಿತಾಂಶ ಹೊರಬೀಳುವ ಮೊದಲೇ ಕೆಲ ಪಠ್ಯ ವಿಷಯಗಳಲ್ಲಿ ಆಕೆಯನ್ನು ಫೇಲ್ ಮಾಡಲಾಗಿತ್ತು. ನಂತರ ಪರೀಕ್ಷಾ ರಿಜಿಸ್ಟ್ರಾರ್ ಸೇರಿದಂತೆ ಸುಮಾರು 12 ಮಂದಿ ಬಂಧನವಾಗಿತ್ತು.

English summary
Jyoti Swaroop Dubey, a examination controller of the autonomous Mankunwar Bai Women's College arrested by Madhya Pradesh police on Monday(Jul.23). Jyoti Dubey allegedly demanded sensula favour from B com student for increasing her marks during evaluation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X