ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈ ಎಷ್ಟು ಅಭಿವೃದ್ಧಿ ಮಾಡಿದ್ದಾರೋ?: ಸದಾನಂದ

By Srinath
|
Google Oneindia Kannada News

let-bsy-introspect-about-his-govt-sadananda-gowda
ನವದೆಹಲಿ, ಜುಲೈ 24: 'ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಹಿಂದಿನ ಸರಕಾರ ವಿಫಲವಾಗಿದೆ' ಎಂದು ನಿನ್ನೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ತಾಂಡವ ನೃತ್ಯವಾಡಿದ್ದಕ್ಕೆ ನಿನ್ನೆಯೇ ಮೈಸೂರಿನಲ್ಲಿ ಕಿಡಿಕಾರಿದ್ದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಇಂದು ನವದೆಹಲಿಯಲ್ಲಿ ಮೂರನೆಯ ಕಣ್ಣುಬಿಟ್ಟಿದ್ದಾರೆ.

ರಾಜ್ಯದ ಬರ ಪರಿಸ್ಥಿತಿಯನ್ನು ನನ್ನ ಅವಧಿಯಲ್ಲಿ ಸಮರ್ಥವಾಗಿ ನಿರ್ವಹಿಸಿದ್ದಕ್ಕೆ ಕೇಂದ್ರ ಸರಕಾರವೇ ಶಹಬ್ಬಾಸ್ ಎಂದಿದೆ. ಅಂತಹುದರಲ್ಲಿ ಯಡಿಯೂರಪ್ಪ ಸರ್ಟಿಫಿಕೇಟ್ ನನಗೆ ಬೇಕಿಲ್ಲ ಎಂದಿದ್ದ ಸದಾನಂದರು ಯಡಿಯೂರಪ್ಪ ಅವರನ್ನು ದೆಹಲಿಯಲ್ಲಿ ಜೋರಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ರೇಣುಕಾಚಾರ್ಯ- ರವಿ ಜುಗಲ್ ಬಂದಿ: ಈ ಮಧ್ಯೆ ಸದನದಲ್ಲಿ ಯಡಿಯೂರಪ್ಪ ಆರ್ಭಟಿಸಿದ್ದನ್ನು ಅವರ ಕಟ್ಟಾ ಬೆಂಬಲಿಗರಾದ ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಮೆಚ್ಚುಗೆ ಸೂಚಿಸಿ, ಸಮರ್ಥಿಸಿಕೊಂಡಿದ್ದಾರೆ. ಆದರೆ, ಮತ್ತೊಬ್ಬ ಸಚಿವ ಸಿಟಿ ರವಿ ಅವರು ಯಡಿಯೂರಪ್ಪ ವಾಗ್ದಾಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ವಿರುದ್ಧ ಸದಾನಂದ ಗೌಡ ದೆಹಲಿಯಲ್ಲಿ ಹೇಳಿರುವುದೇನು?:
* ಯಡಿಯೂರಪ್ಪ ಈ ರೀತಿ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ.
* ಯಡಿಯೂರಪ್ಪ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿದೆ. ಅವರು ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ.
* ಬರ ಪರಿಹಾರ ಕಾಮಗಾರಿಯ ಬಗ್ಗೆ ಯಡಿಯೂರಪ್ಪರಿಗೆ ಅಸಮಾಧಾನವಿದ್ದಲ್ಲಿ ಅದನ್ನು ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ಚರ್ಚೆ ಮಾಡಬಹುದಿತ್ತು.
* ಗೊಂದಲ ಸಷ್ಟಿಸಲು ಯಡಿಯೂರಪ್ಪ ಇಂತಹ ಹೇಳಿಕೆ ನೀಡಿದ್ದಾರೆ. ಅಧಿಕಾರ ಅನುಭವಿಸಿ ಕೆಳಗಿಳಿದ ಬಳಿಕ ಅವರು ಇಂತಹ ಹೇಳಿಕೆ ನೀಡಿರುವುದು ದುರಂತ.
* ತನ್ನ ಆಡಳಿತಾವಧಿಯಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂದು ಯಡಿಯೂರಪ್ಪ ಪರಾಮರ್ಶೆ ನಡೆಸಲಿ. ಅದು ಬಿಟ್ಟು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ.
* ರೈತರ ಸಾಲ ಮನ್ನಾ ಮಾಡಲು ಅಧಿಕಾರದಿಂದ ಕೆಳಗಿಳಿದ ಬಳಿಕ ಹೇಳಿಕೆ ನೀಡುವ ಯಡಿಯೂರಪ್ಪ ಈ ಕಾರ್ಯವನ್ನು ತನ್ನ ಅಧಿಕಾರವಧಿಯಲ್ಲಿ ಯಾಕೆ ಮಾಡಲಿಲ್ಲ.

English summary
Karnataka ex CM BS Yeddyurappa has yesterday in the lower house has lamblasted previous govt (and Sadananda Gowda who was the CM at that time) for its failure in handling the drought in the state. But Sadananda Gowda retaliated to it in Mysore yesterday and in New Delhi today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X