• search

ನಕಲಿ ಸಹಿಗೆ ಬ್ಯಾಂಕಿನಿಂದ 100 ಕೋಟಿ ಸಿಕ್ತು

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    Bhojpuri TV channel directors CBI Arrest
    ನವದೆಹಲಿ, ಜು.24: ನಕಲಿ ದಾಖಲೆ ಪತ್ರ, ನಕಲಿ ಸಹಿ ಮೂಲಕ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ವಂಚಿಸಿ ಸುಮಾರು 100 ಕೋಟಿ ರು ಸಾಲ ಪಡೆದಿದ್ದ ಭೋಜಪುರಿ ಟಿವಿ ನಿರ್ದೇಶಕ ಇಬ್ಬರನ್ನು ಸಿಬಿಐ ಬಂಧಿಸಿದೆ.

    ಭೊಜಪುರಿಯ ಪ್ರಾದೇಶಿಕ ಚಾನೆಲ್ ಮಹುವಾದ ಇಬ್ಬರು ನಿರ್ದೇಶಕರು 3 ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸುಮಾರು 100 ಕೋಟಿ ರೂ ಸಾಲ ಪಡೆದು ವಂಚಿಸಿದ್ದರು ಎಂದು ಸಿಬಿಐ ಮೂಲಗಳು ತಿಳಿಸಿವೆ.

    ಬ್ಯಾಂಕ್‌ಗಳ ದೂರಿನ ಅನ್ವಯ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ 3 ಬ್ಯಾಂಕ್‌ಗಳಿಂದ ತಲಾ ರೂ. 34 ಕೋಟಿ ಸಾಲ ಪಡೆದ ಆರೋಪದ ಮೇಲೆ ನಿರ್ದೇಶಕ ಪಿ.ಕೆ .ತಿವಾರಿ ಮತ್ತು ಆನಂದ್ ತಿವಾರಿ ನಕಲಿಕಾರರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪಾಟೀಲ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಇಬ್ಬರಿಗೂ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಕಳೆದ ಜನವರಿ 2012 ರಲ್ಲಿ ಬ್ಯಾಂಕ್ ಆಫ್ ಬರೋಡ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ್ದ ದೂರಿನನ್ವಯ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

    ಪಿ.ಕೆ .ತಿವಾರಿ ಮತ್ತು ಆನಂದ್ ತಿವಾರಿ ಇಬ್ಬರು ನಕಲಿ invoices ಹಾಗೂ Chartered Accountant ಪ್ರಮಾಣ ಪತ್ರಗಳನ್ನು ಬ್ಯಾಂಕಿಗೆ ಸಲ್ಲಿಸಿದ್ದಾರೆ. ಮೂರು ಬ್ಯಾಂಕ್ ಗಳಿಂದ ತಲಾ 34 ಕೋಟಿ ರು ಸಾಲ ಪಡೆದಿದ್ದಾರೆ.

    ಪಿಕೆ ತಿವಾರಿ ಹಾಗೂ ಆನಂದ್ ತಿವಾರಿ ಅವರನ್ನು ಆ.4 ರ ತನಕ ನ್ಯಾಯಾಂಗ ಬಂಧನದಲ್ಲಿರುವಂತೆ ಸಿಬಿಐ ವಿಶೇಷ ನ್ಯಾ. ಸ್ವರ್ಣಕಾಂತ್ ಶರ್ಮ ಆದೇಶ ನೀಡಿದ್ದಾರೆ. ಆರೋಪಿಗಳ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ಸಿಬಿಐ ತಂಡ ಹೇಳಿದ ಮೇಲೆ ನ್ಯಾ ಸ್ವರ್ಣಕಾಂತ್ ಶರ್ಮ ಆದೇಶ ನೀಡಿದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    CBI has arrested Two directors of popular Bhojpuri TV channel. The duo alleged of forgery to secure bank loans of nearly Rs 100 crore and were remanded in judicial custody for two weeks.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more