• search

ಆಡುಗೋಡಿ: ಟೆಕ್ಕಿ ಮನೆ ದೋಚಿದ ಕೆಲಸದಾಯಮ್ಮ

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    blore-maid-lakshmi-house-theft-techie-rs-23-lakh-jewel
    ಬೆಂಗಳೂರು, ಜುಲೈ 24: ಮನೆಗೆಲಸ ಮಾಡುತ್ತಾ, ಮನೆಯನ್ನು ತೊಳೆದು ಸ್ವಚ್ಚವಾಗಿಡು ಅಂತ ಹೇಳಿದರೆ ಆಯಮ್ಮಾ ಮಾಡಿದ್ದಾದರೂ ಏನು ಗೊತ್ತ? ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ಹಣವನ್ನು ದೋಚಿ ಇಡೀ ಮನೆಯನ್ನು ಗುಡಿಸಿಟ್ಟಿದ್ದಾಳೆ. ಯಾರಪ್ಪಾ ಆಯಮ್ಮ? ಚಿನ್ನಾ ದುಡ್ಡು ಎಷ್ಟು ಅಂತ ಕೇಳಿದಿರಾ? ವಿವರವಾಗಿ ಓದಿಕೊಳ್ಳಿ...

    ಆಡುಗೋಡಿ ಸಮೀಪದ ನಂಜಪ್ಪ ಲೇಔಟ್‌ನ ಲಕ್ಷ್ಮೀ (48) ಅದೇ ಲೇಔಟಿನ ಮೂರನೇ ಅಡ್ಡರಸ್ತೆಯ ನಿವಾಸಿಯಾಗಿರುವ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀನಿವಾಸ್‌ ಪ್ರಸಾದ್ ಎಂಬುವರ ಮನೆಯಲ್ಲಿ ಬರೋಬ್ಬರಿ 12 ವರ್ಷಗಳಿಂದ ಮನೆಗೆಲಸ ಮಾತ್ತಿದ್ದಳು.

    ಹಾಗಾಗಿ, ಟೆಕ್ಕಿ ಶ್ರೀನಿವಾಸ್‌ ಪ್ರಸಾದ್ ಕುಟುಂಬಕ್ಕೆ ಅವಳ ಮೇಲೆ ಅಪಾರ ನಂಬಿಕೆ. ಆದರೆ ಕಳೆದ ವಾರ ಎಂದಿನಂತೆ ಟೆಕ್ಕಿ ಶ್ರೀನಿವಾಸ್‌ ಕೆಲಸಕ್ಕೆ ಹೋಗಿದ್ದಾಗ... ಅವರ ಪತ್ನಿ ಶರ್ಮಿಳಾ ಒಬ್ಬರೇ ಮನೆಯಲ್ಲಿದ್ದರು. ಸಮಯ ಸಾಧಿಸಿದ ಲಕ್ಷ್ಮೀ, ಅಲ್ಮೇರಾದ ಕೀಗಳನ್ನು ತೆಗೆದುಕೊಂಡು ಚಿನ್ನಾಭರಣ ಕಳವು ಮಾಡಿದ್ದಾಳೆ. ಬಳಿಕ, ಕೀಗಳನ್ನು ಅವುಗಳಿದ್ದ ಸ್ಥಳದಲ್ಲಿಯೇ ವಾಪಸಿಟ್ಟು ತನ್ನ ಮನೆಗೆ ಹೊರಟುಹೋಗಿದ್ದಾಳೆ.

    ಆ ನಂತರವೂ ಅವಳು ಎಂದಿನಂತೆ, ಏನೂ ನಡೆದೇ ಇಲ್ಲವೆಂಬಂತೆ ಕೆಲಸಕ್ಕೆ ಬಂದು ಹೋಗುತ್ತಿದ್ದಳು. ಘಟನೆ ನಡೆದ ಮೂರ್ನಾಲ್ಕು ದಿನಗಳ ನಂತರ ಮನೆಯೊಡತಿ ಶರ್ಮಿಳಾ ಅಲ್ಮೇರಾ ತೆರೆದು ನೋಡಿದಾಗಲೇ ಆಭರಣಗಳು ಕಳವಾಗಿರುವುದು ಪತ್ತೆಯಾಗಿದೆ.

    'ಅಲ್ಮೇರಾದಲ್ಲಿ ಒಂದೂವರೆ ಕೆ.ಜಿ. ಯಷ್ಟು ಆಭರಣಗಳಿದ್ದವು. ಆದರೆ, 793 ಗ್ರಾಂನಷ್ಟು ಆಭರಣ ಮಾತ್ರ ಕಳವಾಗಿದೆ' ಎಂದು ಶ್ರೀನಿವಾಸ್‌ ಪ್ರಸಾದ್ ಪೊಲೀಸರಿಗೆ ದೂರು ನೀಡಿದರು.ದೂರನ್ನು ಆಧರಿಸಿ, ಆಡುಗೋಡಿ ಪೊಲೀಸರು ಕೆಲಸದಾಕೆ ಲಕ್ಷ್ಮೀ ಮೇಲೆ ಅನುಮಾನಗೊಂಡು ಅವಳನ್ನು ಮೂರ್ನಾಲ್ಕು ಬಾರಿ ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದಾರೆ.

    ಅವಳೋ, ಒಂದೊಂದು ಬಾರಿಯೂ ಒಂದೊಂದು ರೀತಿಯ ಹೇಳಿಕೆ ನೀಡಿ, ಪೊಲೀಸರ ದಿಕ್ಕು ತಪ್ಪಿಸಲು ನೋಡಿದ್ದಾಳೆ. ಇದರಿಂದ ಪೊಲೀಸರಿಗೆ ಅನುಮಾನ ಇನ್ನೂ ಹೆಚ್ಚಾಗಿದೆಯಷ್ಟೆ. ಅದೊಮ್ಮೆ ಪೊಲೀಸರು ಸೀದಾ ಅವಳ ಮನೆಗೆ ಹೋಗಿ ಪರಿಶೀಲಿಸಿದಾಗ ಆಭರಣಗಳು ಅಲ್ಲೇ ಹೊಳೆಯುತ್ತಿದ್ದವು.

    ತಕ್ಷಣ ಪೊಲೀಸರು ಮನೆಗೆಲಸದ ಲಕ್ಷ್ಮೀಯಿಂದ ಒಟ್ಟು 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮನೆಗೆಲಸದ ಲಕ್ಷ್ಮೀ ಸದ್ಯ ಆಡುಗೋಡಿ ಪೊಲೀಸರ ಅತಿಥಿಯಾಗಿದ್ದಾಳೆ. ಯಾವುದಕ್ಕೇ ಇರಲಿ. ಒಮ್ಮೆ ಮೇಲಿನ ಫೋಟೋದಲ್ಲಿರುವ ಮನೆಗೆಲಸದ ಲಕ್ಷ್ಮೀಯನ್ನು ನೋಡಿ. ನಿಮ್ಮ ಮನೆಯಲ್ಲೂ ಆಯಮ್ಮ 'ಕೆಲಸ' ಮಾಡಿರಬಹುದು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    A 43 year old housemaid Lakshmi stole Rs 23 lakh jewellery in techie Srinivasa Prasad house in adugodi in Bangalore.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more