• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾದಾ ಪೊಲೀಸರೂ ನಿಮ್ಮ ವಾಹನಕ್ಕೆ ಅಡ್ಡ ಹಾಕಬಹುದು

By Srinath
|
bangalore-law-and-order-police-handle-traffic-duty
ಬೆಂಗಳೂರು, ಜುಲೈ 24: ಹುಷಾರು, ಟ್ರಾಫಿಕ್ ಪೊಲೀಸರಷ್ಟೇ ಅಲ್ಲ. ಇನ್ನು ಮುಂದೆ ಸಾದಾ ಪೊಲೀಸರೂ, ಅಂದರೆ law and order ಪೊಲೀಸರೂ ಸಹ ನಿಮ್ಮ ವಾಹನವನ್ನು ಅಡ್ಡಗಟ್ಟಿ, ತಪಾಸಣೆ ಮಾಡಬಹುದು.

ರಾಜಧಾನಿ ಬೆಂಗಳೂರಿನಲ್ಲಿ ಬೈಕುಗಳು, ಕಾರುಗಳು ಅದರಲ್ಲೂ ಇಂಡಿಕಾ ಕಾರುಗಳ ಕಳ್ಳತನ ಹೆಚ್ಚಾಗುತ್ತಿದೆ. ಅಲ್ಲದೆ ಡ್ರಾಪ್ ನೆಪದಲ್ಲಿ ಸುಲಿಗೆ ಮಾಡುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಆದ್ದರಿಂದ ಅಂತಹ ಪ್ರಕರಣಗಳನ್ನು ಬೇಧಿಸುವ ಹೊಣೆಯನ್ನು ಕಾನೂನು ಸುವ್ಯವಸ್ಥೆಯ ಹೊಣೆಹೊತ್ತಿರುವ ಸಾದಾ ಪೊಲೀಸರಿಗೂ ಈಗ ವಹಿಸಲಾಗಿದೆ.

ಹಾಗಾಗಿ, next time ಖಾಕಿ ಪೊಲೀಸರು ನಿಮ್ಮ ವಾಹನವನ್ನು ತಡೆದರೆ 'ನೀವ್ಯಾರ್ ರೀ ಕೇಳಕ್ಕೆ, ಟ್ರಾಫಿಕ್ ಪೊಲೀಸರಿದ್ದಾರಲ್ವಾ?' ಎಂದು ವರಾತ ತೆಗೆದು, ಸೀದಾ ಸ್ಟೇಷನ್ ಗೆ ಹೋಗಬೇಡಿ.

ಇನ್ಮುಂದೆ ಯಾವುದೇ ಪೊಲೀಸರು ಬೇಕಾದರೂ ನಿಮ್ಮ ವಾಹನವನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಬಹುದು. ಅಗತ್ಯ ದಾಖಲೆಗಳ ತಪಾಸಣೆ ಮಾಡಬಹುದು. ಯಡವಟ್ಟಾಗಿದ್ದರೆ ವಿಚಾರಣೆಗೊಳಪಡಿಸಿ, ಅಗತ್ಯ ಕ್ರಮ ಕೈಗೊಳ್ಳಬಹುದು.

ಪ್ರಾಯೋಗಿಕವಾಗಿ ಈಗಾಗಲೇ ಒಂದು ತಿಂಗಳಿಂದ ಈ ನಿಯಮ ಜಾರಿಯಲ್ಲಿದೆ. ಹಾಗಂತ ಇಡೀ ದಿನ ಈ ಕಾನೂನು ಪೊಲೀಸರು ಟ್ರಾಫಿಕ್ ಕೆಲ್ಸ ಮಾಡ್ತಾರೆ ಅಂತಲ್ಲ. ದಿನಕ್ಕೆ ಒಂದೆರಡು ಗಂಟೆ ಕಾಲ ಹಾಗೇ ಸುಮ್ಮನೆ ಪುರಸೊತ್ತು ಸಿಕ್ಕಿದಾಗ ದಿನ-ರಾತ್ರಿ ನಿಮ್ಮ ವಾಹನಕ್ಕೆ ಕೈ ತೋರಿಸಬಹುದು.

ಮುಖ್ಯವಾಗಿ ಟ್ರಾಫಿಕ್ ಪೊಲೀಸರು ಮರೆಯಲ್ಲೆಲ್ಲೋ ನಿಂತು ಹೊಂಚು ಹಾಕಿ ನಿಮ್ಮ ಮೇಲೆ ಮುಗಿಬೀಳುತ್ತಾರೆ. ಆದರೆ ಈ ಕಾನೂನು ಪೊಲೀಸರು ಹಾಗಲ್ಲ. ದೂರದಿಂದಲೇ ಬ್ಯಾರಿಕೇಡ್ ಗಳನ್ನು ಹಾಕಿಕೊಂಡು ಕಾರ್ಯಾಚರಣೆಗೆ ನಿಂತಿರುತ್ತಾರೆ. ಅನುಮಾನಾಸ್ಪದ ವಾಹನಗಳನ್ನು ಗಬಕ್ ಅಂತ ತಡೆದು ನಿಲ್ಲಿಸುತ್ತಾರೆ.

ಡ್ರಾಪ್ ನೆಪದಲ್ಲಿ ಪ್ರಯಾಣಿಕರನ್ನು ಬೆದರಿಸಿ, ಸುಲಿಗೆ ಮಾಡುವುದು. ರಸ್ತೆಯಲ್ಲಿ ಹೋಗುವವರನ್ನು, ಬಸ್ಸಿಗಾಗಿ ಕಾಯುತ್ತಿರುವವರನ್ನು ಬೆದರಿಸಿ, ದೋಚುವ ಪ್ರಕರಣಗಳನ್ನು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಟಾಟಾ ಇಂಡಿಕಾ ಕಾರುಗಳು ಮತ್ತು ಸುಮೋ ವಾಹನಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ಒಳಗೆ ಕುಳಿತಿರುವ ಪ್ರಯಾಣಿಕರು ಮತ್ತು ಚಾಲಕರ ಮಾಹಿತಿಯನ್ನೂ ಪೊಲೀಸರು ಪಡೆಯಲಿದ್ದಾರೆ. ಪೊಲೀಸರಿಗೆ ಖಂಡಿತಾ ಸಹಕರಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಟ್ರಾಫಿಕ್ ಜಾಮ್ ಸುದ್ದಿಗಳುView All

English summary
Bangalore law and order police to handle traffic mantle.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more