ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ Q1: ನಿವ್ವಳ ಲಾಭ ಶೇ 18 ರಷ್ಟು ಏರಿಕೆ

By Mahesh
|
Google Oneindia Kannada News

Wipro Q1
ಬೆಂಗಳೂರು, ಜು.24: ಭಾರತದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ವಿಪ್ರೋ ತನ್ನ 2012-13 ಸಾಲಿನ ಮೊದಲ ತ್ರೈಮಾಸಿಕ ವರದಿಯನ್ನು ಮಂಗಳವಾರ(ಜು.24) ಪ್ರಕಟಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ Q1ನಲ್ಲಿ 1,508 ಕೋಟಿ ರು ನಂತೆ ಶೇ 18 ರಷ್ಟು ಲಾಭ ಗಳಿಸಿದೆ. ಒಟ್ಟಾರೆ ಆದಾಯದಲ್ಲೂ ಶೇ 24 ರಷ್ಟು ಏರಿಕೆಯಾಗಿದ್ದು 10,653 ಕೋಟಿ ರು ಆದಾಯ ಗಳಿಸಿದೆ.

ಮೊದಲ ತ್ರೈಮಾಸಿಕ ವರದಿ ಲಾಭಾಂಶ ನಿರೀಕ್ಷಿತ ಮಟ್ಟದಲ್ಲಿರುವುದರಿಂದ ಮಾರುಕಟ್ಟೆಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳನ್ನು ಕಾಣುವ ಸಾಧ್ಯತೆಯಿಲ್ಲ ಎಂದು ಆರ್ಥಿಕ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಪ್ರೋ ಸಂಸ್ಥೆ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 37 ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿದೆ.

ಐಟಿ ವಿಭಾಗ: ಸಂಸ್ಥೆಯ ಒಟ್ಟು ಆದಾಯಕ್ಕೆ ಐಟಿ ಸೇವಾ ವಿಭಾಗವು ಶೇ 78 ರಷ್ಟು ಕೊಡುಗೆ ನೀಡುತ್ತಿದೆ. ಐಟಿ ವಿಭಾಗದ ಆದಾಯ 8,31,400 ಕೋಟಿ ರು ದಾಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 30 ರಷ್ಟು ಪ್ರಗತಿ ಕಂಡು ಬಂದಿದೆ. ಐಟಿ ವಿಭಾಗದ ಕಾರ್ಯನಿರ್ವಹಣಾ ಆದಾಯ ಶೇ 21 ರಷ್ಟಿದೆ.

'ವಿಪರೀತ ಏರು ಪೇರಿನಿಂದ ಕೂಡಿರುವ ಐಟಿ ವಾತಾವರಣದಲ್ಲಿ ನಾವು ನಮ್ಮ ಗುರಿಗೆ ತಕ್ಕಂತೆ ಆದಾಯ ಗಳಿಸುವಲ್ಲಿ ಸಫಲರಾಗಿದ್ದೇವೆ. ಲಭ್ಯ ಪ್ರತಿಭೆಗಳನ್ನು ಬಳಸಿಕೊಂಡು, ತಂತ್ರಜ್ಞಾನ ಆಧಾರಿತ ಉದ್ಯಮಗಳತ್ತ ಇನ್ನಷ್ಟು ಹೂಡಿಕೆ ಮಾಡಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಲಾಗುವುದು' ಎಂದು ಐಟಿ ಬಿಸಿನೆಸ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಟಿ.ಕೆ ಕುರಿಯನ್ ಹೇಳಿದ್ದಾರೆ.

ಮುಂದಿನ ತ್ರೈಮಾಸಿಕದಲ್ಲಿ ಐಟಿ ವಿಭಾಗವು 1,520 ಮಿಲಿಯನ್ ಡಾಲರ್ ನಿಂದ 1,550 ಮಿಲಿಯನ್ ಡಾಲರ್ ತನಕ ವಹಿವಾಟು ನಡೆಸುವ ನಿರೀಕ್ಷೆಯಿದೆ ಎಂದು ಬಿಎಸ್ ಇಗೆ ಸಲ್ಲಿಸಲಾದ ತ್ರೈಮಾಸಿಕ ವರದಿಯಲ್ಲಿ ವಿಪ್ರೋ ಸಂಸ್ಥೆ ಹೇಳಿದೆ.

ಜೂನ್ 30,2012ರ ಗಣತಿಯಂತೆ ಐಟಿ ವಿಭಾಗದಲ್ಲಿ ಒಟ್ಟು 1,38,552 ಉದ್ಯೋಗಿಗಳಿದ್ದಾರೆ. ಈ ತ್ರೈಮಾಸಿಕದಲ್ಲಿ ಒಟ್ಟು 2,632 ಹೊಸ ನೇಮಕಾತಿಯಾಗಿದೆ. ಸಂಸ್ಥೆಯ ಆದಾಯ ಡಾಲರ್ ನಲ್ಲಿ $1,540 ಮಿಲಿಯನ್ ನಷ್ಟಿದೆ.

ಯುಕೆಯ ಪ್ರಮುಖ ರೀಟೈಲ್ ಬ್ಯಾಂಕ್ ಹಾಗೂ ವಿಮಾ ಸಂಸ್ಥೆ ರಾಯಲ್ ಫಿಲಿಫ್ಸ್ ಎಲೆಕ್ಟ್ರಾನಿಕ್ಸ್ ನಿಂದ ಬಹು ವಾರ್ಷಿಕ ವ್ಯಾಪಾರ ಆದೇಶ (order) ಪಡೆದಿದೆ. ಹೀಗಾಗಿ Q2ನಲ್ಲೂ ವಿಪ್ರೋ ಸ್ವಲ್ಪ ಹೆಚ್ಚಿನ ಏರುಪೇರಿಲ್ಲದ ತ್ರೈಮಾಸಿಕ ವರದಿಯನ್ನು ನಿರೀಕ್ಷಿಸಬಹುದು.

ಇದರ ಜೊತೆಗೆ ಸೌದಿ ಅರೇಬಿಯಾ ಸಂಸ್ಥಾನದ ಅಲ್ ಹಮ್ಮದಿ ಆಸ್ಪತ್ರೆಗೆ ತಂತ್ರಜ್ಞಾನ ಸೇವೆ ಒದಗಿಸುವ ಬಹು ವಾರ್ಷಿಕ ಒಪ್ಪಂದ ಮಾಡಿಕೊಂಡಿದೆ. ವಿಪ್ರೋ ಉನ್ನತ ತಂತ್ರಜ್ಞಾನದ ಸಹಕಾರದೊಂದಿಗೆ 350 ಬೆಡ್ ಆಸ್ಪತ್ರೆಯನ್ನು ರಿಯಾದ್ ನಲ್ಲಿ ನಿರ್ಮಿಸಲು ಸೌದಿ ಸಂಸ್ಥಾನ ಮುಂದಾಗಿದೆ. ತಂತ್ರಜ್ಞಾನ ಸೇವೆ ಜೊತೆಗೆ ತಾಂತ್ರಿಕ ಪಾಲುದಾರರಾಗಿ ಕೂಡಾ ವಿಪ್ರೋ ಸಂಸ್ಥೆ ಕಾರ್ಯನಿರ್ವಹಿಸಲಿರುವುದು ಹೆಚ್ಚಿನ ಬಲ ತಂದಿದೆ.

India's Central Transmission utility (CTU) ನ MPLS ಪವರ್ ಗ್ರಿಡ್ ಜಾಲ ಅಳವಡಿಕೆ ಗುತ್ತಿಗೆ ಕೂಡ ವಿಪ್ರೋ ಪಾಲಾಗಿದೆ. CTU ಜೊತೆ ಮಾಡಿಕೊಂಡಿರುವ ಒಪ್ಪಂದದಂತೆ ಅಂತಾರಾಜ್ಯ ವಿದ್ಯುತ್ ಪ್ರಸರಣ ವ್ಯವಸ್ಥೆಗೆ ವಿಪ್ರೋ ತಾಂತ್ರಿಕ ಸಹಕಾರ ಒದಗಿಸಲಿದೆ.

English summary
IT major Wipro Ltd saw an 18 per cent increase in net profit to Rs 1,508 crore in the first quarter of 2012-2013, compared with the previous year. and revenues totalling Rs 10,653 crores. The company has added 37 new customers during the quarter ending June 30,2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X