ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಲೋಕಾಯುಕ್ತ ನೇಮಕ; ಸರ್ಕಾರಕ್ಕೆ ಹೈಕೋರ್ಟ್ ಡೆಡ್ ಲೈನ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಬೆಂಗಳೂರು, ಜು.23: ಬಿಜೆಪಿ ಸರ್ಕಾರದ ಲೋಕಾಯುಕ್ತ ನೇಮಕಾತಿ ವಿಳಂಬ ನೀತಿಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇನ್ನೆರಡು ದಿನಗಳಲ್ಲಿ ಲೋಕಾಯುಕ್ತ ನೇಮಕ ಪ್ರಕ್ರಿಯೆ ಆರಂಭಿಸುವಂತೆ ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ(ಜು.23) ಡೆಡ್ ಲೈನ್ ನೀಡಿದೆ.

    ಲೋಕಾಯುಕ್ತರ ನೇಮಕಾತಿಯಲ್ಲಿ ಸರ್ಕಾರದ ವಿಳಂಬ ಪ್ರಶ್ನಿಸಿ ಎಚ್ ಎಸ್ ನೀಲಕಂಠಪ್ಪ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಾಧೀಶ ವಿಕ್ರಮ್ ಜಿತ್ ಸೇನ್ ಹಾಗೂ ನ್ಯಾ. ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ ಸರ್ಕಾರಕ್ಕೆ ಈ ರೀತಿ ಆದೇಶ ನೀಡಿದೆ.

    ಈ ವೇಳೆ ನ್ಯಾಯಾಲಯಕ್ಕೆ ಸರ್ಕಾರ ಪರ ಹೇಳಿಕೆ ನೀಡಿದ ಅಡ್ವೊಕೇಟ್ ಜನರಲ್ ವಿಜಯ್ ಶಂಕರ್, ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಸಿಜೆ ಅವರಿಗೆ ಪ್ರಾಮುಖ್ಯತೆ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ. ಈ ತೀರ್ಪನ್ನು ಪ್ರಶ್ನಿಸಿ ಸರ್ಕಾರ, ಸುಪ್ರೀಂಕೋರ್ಟ್ ಮೊರೆಹೋಗಿದೆ.

    ಅಲ್ಲದೆ ಮಾಜಿ ಉಪಲೋಕಾಯುಕ್ತ ಚಂದ್ರಶೇಖರಯ್ಯ ಅವರ ನೇಮಕ ಪ್ರಕರಣ ಸುಪ್ರೀಂಕೋರ್ಟಿನಲ್ಲಿದೆ. ಆ ತೀರ್ಪು ಹೊರಬಿದ್ದ ನಂತರ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

    ಆದರೆ ವಿಜಯ್ ಶಂಕರ್ ಹೇಳಿಕೆ ಒಪ್ಪದ ನ್ಯಾಯಪೀಠ ಲೋಕಾಯುಕ್ತ ನೇಮಕಾತಿ ವಿಳಂಬಕ್ಕೆ ಸೂಕ್ತ ಕಾರಣ ನೀಡುವಂತೆ ಸೂಚಿಸಿತು. ಇದಕ್ಕೆ ಮತ್ತೆ ಹೇಳಿಕೆ ನೀಡಿದ ಎಜೆ ಅವರು, ಈ ಬಗ್ಗೆ ಸರ್ಕಾರದ ಮಾಹಿತಿ ಪಡೆದು ಸೂಕ್ತ ಕಾರಣ ತಿಳಿಸುವುದಾಗಿ ಹೇಳಿದರು. ಜು.25ರ ವರೆಗೆ ಲೋಕಾಯುಕ್ತ ನೇಮಕಾತಿ ಪ್ರಕ್ರಿಯೆ ಆರಂಭಕ್ಕೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

    ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಶಿವರಾಜ್ ಪಾಟೀಲ್ ಅವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕಳೆದ ಸೆಪ್ಟೆಂಬರ್ 9 ರಿಂದ ಲೋಕಾಯುಕ್ತ ಹುದ್ದೆ ಖಾಲಿ ಇದೆ. ಬಿಜೆಪಿ ಸರ್ಕಾರ ಉದ್ದೇಶ ಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ನೀಲಕಂಠಪ್ಪ ಅವರು ದೂರು ಸಲ್ಲಿಸಿದ್ದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka high court has given two working days deadline to Jagadish shettar's government to appoint Lokayukta. Vikramjit Sen and Judge Aravind Kumar of HC heared a complaint by HS Neelakantappa and directed government to start the apoointment process by Jul.25

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more