ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಣಬ್ ಮುಖರ್ಜಿಗೆ ಸಂಬಳ, ಭತ್ಯೆ ಎಷ್ಟಿದೆ?

By Mahesh
|
Google Oneindia Kannada News

Swanky Mercedes, fat pay packet - perks galore for Pranab
ನವದೆಹಲಿ, ಜು.23: ಭಾರತದ 13ನೇ ರಾಷ್ಟ್ರಪತಿಯಾಗಿ ಆಯ್ಕೆಗೊಂಡಿರುವ ಪ್ರಣಬ್ ಮುಖರ್ಜಿ ಅವರು ಜು.25ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ನೂತನ ರಾಷ್ಟ್ರಪತಿ ಪ್ರಣಬ್ ಅವರಿಗೆ ಭವ್ಯವಾದ ಬಂಗಲೆ ಜೊತೆಗೆ ಅಪಾರ ಪ್ರಮಾಣದ ಭತ್ಯೆ ಹಾಗೂ ತಿಂಗಳ ಸಂಬಳವೂ ಯಥೇಚ್ಛವಾಗಿ ದೊರೆಯಲಿದೆ.

ರಾಷ್ಟ್ರಪತಿ ಭವನದ ರೈಸಿನಾ ಹಿಲ್, ಮುಘಲ್ ಗಾರ್ಡನ್ ಬಗ್ಗೆ ಇಲ್ಲಿ ಓದಿಕೊಂಡು ಮುಂದಕ್ಕೆ ಬಂದರೆ, ಪ್ರಣಬ್ ಅವರ ಸಂಬಳದ ಲೆಕ್ಕಾಚಾರದ ಕತೆ ಓದಬಹುದು. ಪ್ರಣಬ್ ಮುಖರ್ಜಿ ಅವರಿಗೆ ತಿಂಗಳಿಗೆ ಸಂಬಳ ರೂಪವಾಗಿ 1.5 ಲಕ್ಷ ರು ಲಭಿಸಲಿದೆ. ಶಿಮ್ಲಾ ಹಾಗೂ ಹೈದರಾಬಾದ್ ನಲ್ಲಿ ಕೂಡಾ ಅಧಿಕೃತವಾಗಿ ನೆಲೆಸುವ ಅವಕಾಶ ಇರುತ್ತದೆ. ಸುಮಾರು 200ಕ್ಕೂ ಅಧಿಕ ನುರಿತ ಸಿಬ್ಬಂದಿಗಳು ರಾಷ್ಟ್ರಪತಿ ಭವನದಲ್ಲಿ ಪ್ರತಿನಿತ್ಯ ಕರ್ತವ್ಯ ನಿರತರಾಗಿರುತ್ತಾರೆ.

ಸಚಿವರಾಗಿದ್ದ ಕಾಲದಲ್ಲಿ ಅನುಭವಿಸಿದ ವೈಭೋಗಕ್ಕಿಂತ ಹೆಚ್ಚಿನ ಸೌಲಭ್ಯಗಳು ಪ್ರಣಬ್ ಕಾಲಬುಡಕ್ಕೆ ಬೀಳಲಿದೆ. ಸಾರಿಗೆ ವ್ಯವಸ್ಥೆ ಸಂಪೂರ್ಣ ಬದಲಾಗಲಿದ್ದು, ದೇಶದ ಪ್ರಥಮ ಪ್ರಜೆ ಓಡಾಟಕ್ಕೆ ಐಷಾರಾಮಿ ಮರ್ಸಿಡೆಸ್ ಬೆಂಜ್ ಕಾರು ಸದಾ ಸಿದ್ಧವಿರುತ್ತದೆ. ಇದು ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರು ಎಂದು ಗುರುತಿಸಲ್ಪಟ್ಟಿದೆ.

ಪ್ರತಿಭಾ ಪಾಟೀಲ್ ಅವರ ಕಾಲದಲ್ಲಿ ಹೆಚ್ಚಾಗಿ ಬಳಸಲ್ಪಟ್ಟ ಈ ಕಪ್ಪು ಬಣ್ಣದ S600L ಕಾರು ಈಗ ಪ್ರಣಬ್ ಅವರಿಗೆ ಸೇವೆ ಸಲ್ಲಿಸಲಿದೆ. ಪ್ರಣಬ್ ಅವರ ಅಧಿಕಾರ ಅವಧಿ ಮುಕ್ತಾಯವಾಗಿ ನಿವೃತ್ತಿ ಹೊಂದಿದ ಮೇಲೂ ಕೆಲ ಸೌಲಭ್ಯಗಳು ಮುಂದುವರೆಯಲಿದೆ, ಪ್ರಮುಖವಾಗಿ ತಿಂಗಳಿಗೆ 75,000 ರು ಪಿಂಚಣಿ ಹಣ ದೊರೆಯಲಿದೆ. ಸುಸಜ್ಜಿತವಾದ ಬಾಡಿಗೆ ಇಲ್ಲದ ಬಂಗಲೆ (Type VIII) ಸಿಗಲಿದೆ.

ನಿವೃತ್ತಿ ನಂತರ ಒಬ್ಬ ಖಾಸಗಿ ಕಾರ್ಯದರ್ಶಿ(PS), ಒಬ್ಬ ಅಟೆಂಡ್ ರ ನೀಡಲಾಗುತ್ತದೆ ಹಾಗೂ 12 ಸಾವಿರ ರು ಕಚೇರಿ ವೆಚ್ಚ ನೀಡಲಾಗುತ್ತದೆ. ತಿಂಗಳೊಮ್ಮೆ, ವರ್ಷದಲ್ಲಿ 12 ಬಾರಿ ಒಬ್ಬ ಸಹಾಯಕನೊಂದಿಗೆ ಪ್ರಥಮ ದರ್ಜೆ ವಿಮಾನ, ರೈಲಿನಲ್ಲಿ ಪ್ರಯಾಣಿಸುವ ಸೌಲಭ್ಯವೂ ಸಿಗಲಿದೆ.

ಇದರ ಜೊತೆಗೆ ಎರಡು ಉಚಿತ ಸ್ಥಿರ ದೂರವಾಣಿ ಹಾಗೂ ಮೊಬೈಲ್ ಫೋನ್ ಸಂಪರ್ಕ ಅವರ ಹೆಸರಿಗೆ ನೀಡಲಾಗುತ್ತದೆ. ಸೆಕ್ಯುರಿಟಿ ಗಾರ್ಡ್ ಸೇರಿದಂತೆ 5 ಜನ ಸಿಬ್ಬಂದಿ ಸದಾ ಅವರ ಬೆಂಗಾವಲಾಗಿರುತ್ತಾರೆ. ಅಧಿಕೃತ ಕಾರು ಹಾಗೂ ಸಿಬ್ಬಂದಿಗಳಿಗೆ 60,000 ಪ್ರತಿ ತಿಂಗಳು ಸಂಬಳ ದೊರೆಯಲಿದೆ. ಸಿಬ್ಬಂದಿಗಳು ಕೂಡಾ ರೈಲು ಅಥವಾ ವಿಮಾನದಲ್ಲಿ ಉಚಿತವಾಗಿ ದೇಶದೆಲ್ಲೆಡೆ ಪ್ರಯಾಣಿಸಬಹುದಾಗಿದೆ.

ಕುತೂಹಲದ ಸಂಗತಿ: ರಾಷ್ಟ್ರಪತಿಗಳಿಗೆ ನೀಡಬೇಕಾದ ಸಂಬಳ, ಭತ್ಯೆ ಸರ್ಕಾರ ರೂಪಿಸಿದ ನಿಯಮಗಳಿಗೆ ಸ್ವತಃ ರಾಷ್ಟ್ರಪತಿಗಳೇ ಒಪ್ಪಿಗೆ ನೀಡಬೇಕಾಗಿರುತ್ತದೆ. President's Emoluments and Pensions Act, 1951 ಪ್ರಕಾರ ರಾಷ್ಟ್ರಪತಿಗಳ ಸಂಬಳ, ಸಾರಿಗೆ ಭತ್ಯೆ ಬಗ್ಗೆ ರೂಪಿಸಲಾದ ತಿದ್ದುಪಡಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ಮೇಲೆ ಭಾರತ ಸರ್ಕಾರದ ಗೆಜೆಟ್ ನಲ್ಲಿ ಪ್ರಕಟಿಸಲಾಯಿತು.

ಈ ಕಾಯಿದೆಗೆ 26/12/85, 1998, 2006 ಹಾಗೂ 2008ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈಗಿನ ರಾಷ್ಟ್ರಪತಿಗಳಿಗೆ ಈ ಕಾಯಿದೆ ಅನ್ವಯ ಸಂಬಳ ನೀಡಲಾಗುತ್ತದೆ. ಹಾಗೂ ನಿವೃತ್ತಿ ನಂತರ ಸೌಲಭುಯ ರಾಷ್ಟ್ರಪತಿ ಭವನದ ಖರ್ಚು ವೆಚ್ಚಗಳಿಗಾಗಿ ಪ್ರತಿ ವರ್ಷ ಬಜೆಟ್ ನಲ್ಲಿ 22.5 ಕೋಟಿ ರು ಮೀಸಲಿಡಲಾಗುತ್ತದೆ.

English summary
For most Indians the President's post symbolizes a life of luxury and extravaganza with official perks and incentives worthy of envy. When Congress veteran and former UPA Minister of Finance swears-in as the 13th President of India, he will receive many more goodies compared to his stint as Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X