• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಳೆಗಾಗಿ ಪೂಜೆ ಸರ್ಕಾರದ ನಯಾ ಪೈಸೆ ಖರ್ಚಿಲ್ಲ

By Mahesh
|

ಮಣಿಪಾಲ, ಜು.22: ಮಳೆಗಾಗಿ ದೇವರನ್ನು ಪ್ರಾರ್ಥಿಸುವುದರಲ್ಲೂ ನೇಮ ನಿಷ್ಠೆ ಇರುತ್ತದೆ. ಅದರಂತೆ ನಡೆಯಬೇಕಾಗುತ್ತದೆ. ದೇವರನ್ನು ಪೂಜಿಸುವುದೇ ತಪ್ಪು ಎಂದರೇ ಹೇಗೆ? ರಾಜ್ಯದ ಮುಜರಾಯಿ ದೇವಳಗಳಲ್ಲಿ ಪೂಜೆ ಮಾಡಲು ಸರ್ಕಾರದ ನಯಾ ಪೈಸೆಯೂ ಖರ್ಚು ಮಾಡುವುದಿಲ್ಲ. ಆಯಾ ದೇಗುಲಗಳ ಟ್ರಸ್ಟ್ ಹಣವನ್ನೇ ಇದಕ್ಕೆ ವ್ಯಯಿಸಲಾಗುವುದು ಎಂದು ರಾಜ್ಯ ಮುಜರಾಯಿ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಭಾನುವಾರ(ಜು.22) ಮಣಿಪಾಲದ ಜಿಲ್ಲಾ ಕಚೇರಿಗಳ ಸಂಕೀರ್ಣ ರಜತಾದ್ರಿಯಲ್ಲಿ ಸಚಿವರ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀನಿವಾಸ ಪೂಜಾರಿ, 'ಮಳೆ ಪೂಜೆಗಾಗಿ ಸರಕಾರ 17 ಕೋಟಿ ರೂ. ಬಿಡುಗಡೆ ಮಾಡುತ್ತಿವೆ ಎಂಬ ವಿಚಾರ ಸುಳ್ಳು. ಇಲ್ಲಿ ಯಾವುದೇ ಆಡಂಬರದ ರಾಜಕಾರಣ ಮಾಡುತ್ತಿಲ್ಲ.ವಿಪಕ್ಷ ನಾಯಕರು ಈ ಬಗ್ಗೆ ವೃಥಾ ಆರೋಪಿಸುವುದನ್ನು ನಿಲ್ಲಿಸಲಿ ಎಂದರು.

ರಾಜ್ಯದಲ್ಲಿ ಒಟ್ಟು 34,266 ದೇವಳಗಳಿದ್ದು, ಅವುಗಳಲ್ಲಿ ವಾರ್ಷಿಕ 25 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವ 155 ಹಾಗೂ 5 ರಿಂದ 25 ಲಕ್ಷ ರೂ. ಆದಾಯ ಇರುವ 185 ದೇವಳಗಳಿವೆ. ಉಳಿದ 33,900 ದೇವಸ್ಥಾನಗಳು 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವಂತಾಗಿದೆ. ಒಟ್ಟಾರೆ 25,000 ದೇಗುಲಗಳು ಉತ್ತಮ ಆದಾಯ ಹೊಂದಿದೆ.

ಆದ್ದರಿಂದ ಆಯಾ ದೇವಸ್ಥಾನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ 5 ಸಾವಿರ ರೂ. ಮೀರದಂತೆ ವ್ಯಯಿಸಿ ಮಳೆಗಾಗಿ ವಿಶೇಷ ಪೂಜೆ ಮಾಡಲು ಸೂಚಿಸಲಾಗಿದೆ. ಆದರೆ, ಇದರಲ್ಲಿ ಯಾವುದೇ ಒತ್ತಡವಿಲ್ಲ. ಒಲ್ಲದ ಮನಸ್ಸಿನಿಂದ ಒತ್ತಾಯಕ್ಕೆ ಪೂಜೆ ಸಲ್ಲಿಸುವುದು ಬೇಕಿಲ್ಲ ಎಂದು ಪೂಜಾರಿ ಹೇಳಿದರು.

ಕಡಲ್ಕೊರೆತಕ್ಕೆ ಹಣ: ಬೆಂಗಳೂರಿನಲ್ಲಿ ಮಂಗಳವಾರ ಬಂದರು ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಕಡಲ್ಕೊರೆತಕ್ಕೆ ಎಡಿಬಿ ಅನುದಾನದಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಪ್ರಸ್ತಾವ ಇರುವುದರಿಂದ ಸದ್ಯ ತಾತ್ಕಾಲಿಕ ಪರಿಹಾರಕ್ಕೆ ಹಣ ಬಿಡುಗಡೆ ಯಾಗುತ್ತಿಲ್ಲ. ಸದ್ಯಕ್ಕೆ ತಾತ್ಕಾಲಿಕ ಪರಿಹಾರಕ್ಕೆ ಅನುದಾನ ಬಿಡುಗಡೆ ಗೊಳಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಟ್ಟಿಗೆ ಚರ್ಚಿಸುವೆ ಎಂದು ಸಚಿವ ಪೂಜಾರಿ ತಿಳಿಸಿದರು.

ವಾರದಲ್ಲಿ ಎರಡು ಅರ್ಧ ದಿನ ಅಥವಾ ಒಂದು ದಿನ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು. ಆ.4ರಂದು ಜಿಲ್ಲಾ ಪ್ರಗತಿ ಪರಿಶೀಲನ ಸಭೆಯನ್ನು ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಸಹಿತ ಜನ ಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು, ಜಿಪಂ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭಾಕರ ಶರ್ಮ, ತಾಪಂ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸೋಮಶೇಖರ್ ಭಟ್ ಮೊದಲಾ ದವರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Muzrai minister K Srinivas Poojary defends Government of Karnataka order of special prayers in all temples in the State to invoke rain gods. The State has over 34,000 temples across 30 Districts. Karnataka is hit by severe drought as monsoon has failed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more