ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನೈತಿಕ ಸಂಬಂಧ : ಇಬ್ಬರು ಪೇದೆಗಳ ಅಮಾನತು

By Prasad
|
Google Oneindia Kannada News

Two police constables suspended in Bangalore
ಬೆಂಗಳೂರು, ಜು. 23 : ತನ್ನ ಹೆಂಡತಿಯೊಡನೆ ಪೊಲೀಸ್ ಪೇದೆಯೊಬ್ಬ ಅನೈತಿಕ ಸಂಬಂಧ ಹೊಂದಿದ್ದಾನೆ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ವ್ಯಕ್ತಿಯೊಬ್ಬ ದೂರು ನೀಡಿರುವ ಹಿನ್ನೆಲೆಯಲ್ಲಿ ಆ ಪೇದೆ ಮತ್ತು ಅನೈತಿಕ ಸಂಬಂಧಕ್ಕೆ ನೀರೆರೆದ ಇನ್ನೊಬ್ಬ ಪೇದೆಯನ್ನು ಅಮಾನತು ಮಾಡಲಾಗಿದೆ.

ಆ ಮಹಿಳೆಯ ಗಂಡನೇ ಪೇದೆಗಳಿಬ್ಬರ ವಿರುದ್ಧ ಉಪ ಪೋಲೀಸ್ ಆಯುಕ್ತ (ಕೇಂದ್ರ) ಬಿ.ಆರ್. ರವಿಕಾಂತೇ ಗೌಡ ಅವರಿಗೆ ದೂರು ನೀಡಿದ್ದ. ಆ ಮಹಿಳೆಯನ್ನು 2006ರಲ್ಲಿ ಹತ್ಯೆಗೀಡಾದ ಭೂಗತ ಲೋಕದ ಪಾತಕಿ ಪಳನಿ ರಾಜು ಅವನ ಮಗಳು ಎನ್ನಲಾಗಿದೆ. ಆದರೆ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪವನ್ನು ಆ ಮಹಿಳೆ ತಳ್ಳಿಹಾಕಿದ್ದಾಳೆ.

ಪೇದೆಗಳಿಬ್ಬರನ್ನು ಅಮಾನತಿನಲ್ಲಿಟ್ಟುರುವದನ್ನು ರವಿಕಾಂತೇ ಗೌಡ ಅವರು ಖಚಿತಗೊಳಿಸಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದನ್ನು ಅಲ್ಲಗಳೆದಿರುವ ಅವರು, ಮಹಿಳೆ ಮತ್ತು ಪೇದೆಯೊಬ್ಬನ ನಡುವೆ ಇರುವ ಅನೈತಿಕ ಸಂಬಂಧವೇ ಪೇದೆಯನ್ನು ಅಮಾನತಿನಲ್ಲಿಡಲು ಕಾರಣ ಎಂದು ಹೇಳಿದ್ದಾರೆ. ಅನೈತಿಕ ಸಂಬಂಧ ಹೊಂದಲು ಪೇದೆಯನ್ನು ಪುಸಲಾಯಿಸಿದ ಮತ್ತೊಬ್ಬ ಪೇದೆಯನ್ನು ಕೂಡ ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತನ್ನ ಮಗಳ ಮೇಲೆ ಮಾಡಲಾಗಿರುವ ಅತ್ಯಾಚಾರ ಮತ್ತು ಅನೈತಿಕ ಸಂಬಂಧದ ಆರೋಪಗಳನ್ನು ಮಹಿಳೆಯ ತಾಯಿ, ಪಳನಿ ರಾಜುನ ಹೆಂಡತಿ ರೇವತಿ ಪಳನಿ ರಾಜು ತಳ್ಳಿಹಾಕಿದ್ದಾರೆ. ತನ್ನ ಮಗಳು ಮತ್ತು ಆಕೆಯ ಗಂಡನ ನಡುವೆ ಮೊದಲಿನಿಂದಲೂ ಸರಿಯಿಲ್ಲ, ಇಬ್ಬರೂ ಅನ್ಯೋನ್ಯವಾಗಿ ದಾಂಪತ್ಯ ನಡೆಸುತ್ತಿಲ್ಲ. ತನ್ನ ಮಗಳ ಮೇಲೆ ದೌರ್ಜನ್ಯ ಎಸಗುತ್ತಿರುತ್ತಾನೆ. ಈ ಎಲ್ಲ ಸಲ್ಲದ ಆರೋಪಗಳು ಆತನೇ ಸೃಷ್ಟಿಸಿರುವ ಕಟ್ಟುಕತೆಗಳು ಎಂದು ರೇವತಿ ಪೊಲೀಸರಿಗೆ ತಿಳಿಸಿದ್ದಾರೆ.

English summary
Two police constables in Bangalore have been suspended by Deputy Commissioner (Centre) B.R. Ravikante Gowda, one for involving in illicit relationship with a married woman and another one for abetting it. A complaint has been filed by husband of the victim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X