ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವಿಗೆ ಹಾಲು ಎರೆಯುತ್ತೀರಾ? ಪ್ಲೀಸ್ ಗಮನಿಸಿ

By Mahesh
|
Google Oneindia Kannada News

PETA urges use of artificial snakes
ಪುಣೆ, ಜು.22: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಚೌತಿ-ಪಂಚಮಿ ದಿನದಂದು ನಾಗರ ಹಾವುಗಳಿಗ ತನಿ(ಹಾವಿಗೆ ಹಾಲು ಎರೆಯುವುದು) ನೀಡುವ ಮೂಲಕ ಹಿಂಸೆ ಮಾಡಬೇಡಿ. ಹಬ್ಬದ ಆಚರಣೆಗೆ ಸಾಂಕೇತಿಕವಾಗಿ ಕೃತಕ ಹಾವು ಅಥವಾ ಬೆಳ್ಳಿ ಪ್ರತಿಮೆಗಳನ್ನು ಬಳಸಿಕೊಳ್ಳಿ. ಜೀವಂತ ಹಾವನ್ನು ಹಿಂಸಿಸಬೇಡಿ ಎಂದು ಪ್ರಾಣಿ ದಯಾ ಸಂಘಟನೆ ಪೆಟಾ ಆಗ್ರಹಿಸಿದೆ. ಈ ಬಗ್ಗೆ ಹಾವಾಡಿಗರ ಸಂಘಟನೆಗೆ ಪತ್ರ ಬರೆದಿದೆ. ಪೆಟಾ ತನ್ನ ಪತ್ರದ ಜತೆಗೆ ಕೆಲವು ಕೃತಕ ಹಾವುಗಳ ಮಾದರಿಗಳನ್ನು ಕಳುಹಿಸಿದೆ.

ನಾಗರಪಂಚಮಿಯಂದು ನಾಗದೇವತೆಯನ್ನು ಪೂಜಿಸಬೇಕು. ಆದರೆ ಜೀವಂತ ಹಾವುಗಳನ್ನು ಹಿಡಿದು ಪೂಜೆಯ ನೆಪದಲ್ಲಿ ಅವುಗಳಿಗೆ ಹಾಲು ಮತ್ತು ಇತರ ವಸ್ತುಗಳನ್ನು ಎರೆದು ಹಿಂಸಿಸಲಾಗುತ್ತಿದೆ. ಈ ಬಗ್ಗೆ ಪುರಾಣದಲ್ಲೂ ಉಲ್ಲೇಖವಿಲ್ಲ. ನಿಮ್ಮ ಶಕ್ತ್ಯಾನುಸಾರ ಪೂಜೆ ಮಾಡಿ ಎಂದಿದೆ. ಜೀವಂತ ಹಾವನ್ನು ಬಳಸಿ ಪೂಜೆ ಸಲ್ಲಿಸುವ ಬಗ್ಗೆ ಸಾರ್ವಜನಿಕರು ಯೋಚಿಸುವುದು ಒಳ್ಳೆಯದು.

ಈ ಕೃತ್ಯ 1972 ರ ವನ್ಯಜೀವಿ ರಕ್ಷಣಾ ಕಾಯ್ದೆ ಅನ್ವಯ ಕೂಡಾ ಹಾವುಗಳನ್ನು ಬೇಟೆಯಾಡುವುದು, ಹಿಂಸಿಸುವುದು ಮತ್ತು ದುರ್ಬಳಕೆ ಮಾಡಿಕೊಳ್ಳುವುದಕ್ಕೆ. ಸಮನಾಗಿರುತ್ತದೆ. ಹಾಗಿದ್ದರೂ ಹಾವುಗಳನ್ನು ಉಸಿರುಗಟ್ಟಿಸುವ ಚೀಲಗಳಲ್ಲಿ ತುರುಕಿಸಿ ಚಿಕ್ಕ ಪೆಟ್ಟಿಗೆಗಳಲ್ಲಿ ಇಡಲಾಗುತ್ತದೆ. ಅಲ್ಲದೆ ಅವುಗಳನ್ನು ಉಪವಾಸ ಕೆಡವಲಾಗುತ್ತಿದೆ. ಅವುಗಳ ಹಲ್ಲುಗಳನ್ನು ಹಿಂಸಾತ್ಮಕವಾಗಿ ಕೀಳಲಾಗುತ್ತಿದೆ. ಹಾವಾಡಿಗರು ಅನೇಕ ಹಾವುಗಳ ಬಾಯಿಯನ್ನೇ ಹೊಲಿದುಹಾಕುತ್ತಾರೆ ಎಂದು ಪೆಟಾ ದೂರಿದೆ.

ಹಾವಾಡಿಗರು ಹಾವುಗಳನ್ನು ಆಡಿಸುವುದರಿಂದ ನಾಗರಪಂಚಮಿ ಹಬ್ಬವನ್ನು ಅಣಕಿಸಿದಂತಾಗುತ್ತದೆ ಎಂದು ಪೆಟಾ ಇಂಡಿಯಾದ ಸಂಚಾಲಕ ಚಾನಿ ಸಿಂಗ್ ಹೇಳಿದ್ದಾರೆ. ಹಾವಿನ ಹಣೆಗೆ ತಿಲಕ ಇಡುವುದರಿಂದ ಅದು ಕುರುಡಾಗುತ್ತದೆ. ಹಾವಿನ ಗಂಟಲಿಗೆ ಹಾಲು ಎರೆಯಲು ಹೋಗಿ ಅದರ ಪ್ರಾಣಕ್ಕೆ ಕುತ್ತು ತರಲಾಗುತ್ತದೆ. ಜು.23 ರ ಸೋಮವಾರದಂದು ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.

English summary
People for the Ethical Treatment of Animals (PETA) India has urged Bedia Federation of India, Organization of World Bedia and Snake Charmers to encourage the use of fake snakes in place of real ones during Shravan Month's fest Naagpanchami .The Naagpanchami will be celebrated on July 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X