• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ,ಜೂಹಿ ಬಾಂಬ್

By Mahesh
|
Google Oneindia Kannada News
ಅಹಮದಾಬಾದ್, ಜು.22: ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ. ಕೆಲ ಮಾಧ್ಯಮಗಳಿಗೆ ನಾನು ರಾಜಕೀಯಕ್ಕೆ ಧುಮುಕುವುದನ್ನೇ ಕಾತುರದಿಂದ ಕಾದಿದ್ದಾರೆ. ಆದರೆ, ನಾನು ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷಕ್ಕೂ ಸೇರುತ್ತಿಲ್ಲ. ಮಾಧ್ಯಮಗಳ ವರದಿಗಳನ್ನು ಬಾಲಿವುಡ್ ತಾರೆ ಜೂಹಿ ಚಾವ್ಲಾ ತಳ್ಳಿ ಹಾಕಿದ್ದಾರೆ.

ಜೂಹಿ ಚಾವ್ಲಾ ಅವರು ರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದಕ್ಕೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ನನಗೆ ರಾಜಕೀಯ ಸೇರುವ ಯಾವುದೇ ಇಚ್ಛೆ ಇಲ್ಲ. ಚುನಾವಣೆ ಸ್ಪರ್ಧಿಸುವ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ ಎಂದು ಜೂಹಿ ಚಾವ್ಲಾ ಸ್ಪಷ್ಟಪಡಿಸಿದ್ದಾರೆ.

ವರ್ಷಾಂತ್ಯಕ್ಕೆ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅರ್ಜುನ್ ಮೋಧವಾಡಿಯಾ ವಿರುದ್ಧ ನಾನು ಸ್ಪರ್ಧಿಸುತ್ತಿಲ್ಲ ಎಂದು ಜೂಹಿ ಹೇಳಿದ್ದಾರೆ.

ಜೂಹಿ ಚಾವ್ಲಾ ಅವರನ್ನು ರಾಜಕೀಯಕ್ಕೆ ಎಳೆದು ತಂದು ಕಾಂಗ್ರೆಸ್ ಅಭ್ಯರ್ಥಿಯ ಎದುರು ನಿಲ್ಲಿಸಲು ಗುಜರಾತ್ ನ ಬಿಜೆಪಿ ಮನಸ್ಸು ಮಾಡಿತ್ತು. ಈ ಬಗ್ಗೆ ಪಕ್ಷದ ವಕ್ತಾರ ವಿಜಯ್ ರುಪಾನಿ ಕೂಡಾ ದೃಢಪಡಿಸಿದ್ದರು.

GPCC ಅಧ್ಯಕ್ಷ ಮಹೋದಯ್ ಅರ್ಜುನ್ ಅವರು ಮೋದಿಗೆ ಬಹಿರಂಗ ಸವಾಲು ಹಾಕಿದ್ದರು. 'ತಾಕತ್ತಿದ್ದರೆ ನನ್ನ ವಿರುದ್ಧ ಮುಖ್ಯಮಂತ್ರಿಯೇ ಸ್ಪರ್ಧಿಸಲಿ' ಎಂದು ಪಂಥಾಹ್ವಾನ ನೀಡಿದ ನಂತರ ಗುಜರಾತಿನ ಹೆಮ್ಮೆಯ ಸೊಸೆ ಜೂಹಿ ಚಾವ್ಲಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿತ್ತು.

ಹರಿಯಾಣದ ಅಂಬಾಲ ಮೂಲದ ಜೂಹಿ ಚಾವ್ಲಾ 1984 ರಲ್ಲಿ ಮಿಸ್ ಇಂಡಿಯಾ ಕಿರೀಟ ಧರಿಸಿದ್ದರು. 80 ಹಾಗೂ 90 ರ ದಶಕದ ಸುಂದರ, ಪ್ರಬುದ್ಧ ನಟಿಯಾಗಿ ಎಲ್ಲರ ಮನ ಸೆಳೆದಿದ್ದರು. ನಂತರ ಶಾರುಖ್ ಖಾನ್ ಅವರ ಸಂಸ್ಥೆ ಜೊತೆ ಕೈ ಜೋಡಿಸಿ ಸಿನಿಮಾ ನಿರ್ಮಾಣ, ಐಪಿಎಲ್ ನಲ್ಲಿ ಕೆಕೆಆರ್ ತಂಡದ ಮೇಲೆ ಹಣ ಹೂಡಿಕೆ ಮಾಡಿದ್ದರು.

ಜೂಹಿ ಚಾವ್ಲಾ ಅವರ ಪತಿ ಬ್ರಿಟನ್ ಉದ್ಯಮಿ ಜೈ ಮೆಹ್ತಾ ಅವರ ಸ್ವಂತ ಊರು ಗುಜರಾತಿನ ಐತಿಹಾಸಿಕ ನಗರ ಪೋರಬಂದರ್. ಈ ಜೈ ಮೆಹ್ತಾ ಅವರ ಅಜ್ಜ ನಾನಾಜಿ ಕಾಳಿದಾಸ ಮೆಹ್ತಾ ಅವರಿಗೆ ಈ ನಗರದಲ್ಲಿ ಬಹುದೊಡ್ಡ ಹೆಸರಿದೆ.

ಸಾಮಾಜಿಕ ಕಳಕಳಿಯನ್ನು ಮುಂದುವರೆಸಿಕೊಂಡು ಬಂದಿರುವ ಗುಜರಾತಿನ ಬಹೂ ಜೂಹಿ ಅವರು ಗುಜಾರಾತಿನಲ್ಲಿ ಶಾರುಖ್ ಖಾನ್ ಜತೆಗೂಡಿ ಸುಮಾರು 10 ಕೋಟಿ ರುಪಾಯಿ ನಿರ್ಮಾಣ ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಲ್ಲಿ ತೊಡಗಿದ್ದಾರೆ. ಮೆಹ್ತಾ ಅವರ ಸಂಸ್ಥೆ ಏಷ್ಯಾ, ಆಫ್ರಿಕಾ, ಕೆನಡಾ ಹಾಗೂ ಯುಎಸ್ಎ ನಲ್ಲಿ ಜನಪ್ರಿಯವಾಗಿದೆ.

English summary
Bollywood actor, producer Juhi Chawla refused to contest Gujarat Assembly election 2012. Juhi denied the rumour about her contesting against Gujarat Pradesh Congress Committee chief Arjun Modhwadia. BJP was planning to launch Juhi Chawla against Congress leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X