ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿ ಹೊಟ್ಟೆಯಲ್ಲಿ ಬೆಕ್ಕು? ಕಲಿಗಾಲವಯ್ಯ ಕಲಿಗಾಲ

By Prasad
|
Google Oneindia Kannada News

Dog gives birth to cat
ಬೀಜಿಂಗ್, ಜು. 21 : ಮಹಿಳೆಯ ಹೊಟ್ಟೆಯಲ್ಲಿ ಮತ್ಸಕನ್ಯೆ ಹುಟ್ಟಿರುವ, ಮಗುವಿನ ಹೊಟ್ಟೆಯಲ್ಲಿ ಮಗು ಇರುವ, ಸಿಂಹ ಹುಲಿ ಎರಡನ್ನೂ ಮಿಲಾಕತ್ ಮಾಡಿ ಹುಸಿಂಹಕ್ಕೆ ಜನ್ಮ ನೀಡಿಸಿದ ವಿಚಿತ್ರ ಸಂಗತಿಗಳನ್ನು ನಾವು ಕೇಳಿದ್ದೇವೆ. ನಮ್ಮ ಜಗತ್ತಿನಲ್ಲಿ ವಿಸ್ಮಯಗಳಿಗೇನು ಕೊರತೆಯಿಲ್ಲ. ಇವಕ್ಕೆಲ್ಲ ಸಾಕ್ಷ್ಯಗಳು ಇವೆಯೋ ಇಲ್ಲವೋ ನಂಬಿಸುವ ಜನರಂತೂ ಇದ್ದೇ ಇರುತ್ತಾರೆ.

ಕೊರಿಯಾ ಮನುಜನೊಬ್ಬ ಇಂತಹುದೇ ಒಂದು ವಿಸ್ಮಯಕ್ಕೆ ಜನ್ಮ ನೀಡಿದ್ದಾನೆ. ಅದೇನೆಂದರೆ, ತನ್ನ ಮುದ್ದಿನ ನಾಯಿಯ ಹೊಟ್ಟೆಯಲ್ಲಿ ಬೆಕ್ಕು ಹುಟ್ಟಿದೆ ಎಂಬ ಸುದ್ದಿಯನ್ನು ಗಾಳಿಗೆ ತೂರಿದ್ದಾನೆ. ಆ ಸುದ್ದಿ ಗಾಳಿಯಲ್ಲಿ ತೇಲಾಡುತ್ತ ವಿಶ್ವದ ಎಲ್ಲೆಡೆಯೂ ಪಸರಿಸುತ್ತಿದೆ. 63 ವರ್ಷದ ಜಿಯಾಂಗ್ ಪಿಯಾಂಗ್ ಎಂಬಾತ ಈ ವಿಸ್ಮಯವನ್ನು ತೋರಿಸಿರುವುದಾಗಿ ಕೊರಿಯಾ ಹೆರಾಲ್ಡ್ ವರದಿ ಮಾಡಿದೆ.

ಅರವತ್ತರ ಅರಳು ಮರಳು ಎಂದು ಅಂದುಕೊಳ್ಳುವವರು ಅಂದುಕೊಳ್ಳಬಹುದು. ಆದರೆ, ಜಿಯಾಂಗ್ ಪಿಯಾಂಗ್ ಎಂಬಾತ ಮಾತ್ರ, "ಇದು ಪವಾಡ. ನಾಯಿ ಮರಿ ಹಾಕಿದ ಮೇಲೆ ದಿಟ್ಟಿಸಿ ನೋಡಿದೆ. ನಾಯಿಮರಿಯ ಹಾಗೆ ಇರಲಿಲ್ಲ. ಅದು ಬೆಕ್ಕಿನ ಹಾಗೆ ಇತ್ತು. ಅಲ್ಲದೆ, ಮಿಯಾಂವ್ ಎಂದಿತು. ಹೀಗಿರುವಾಗ ಅದನ್ನು ನಾಯಿಮರಿ ಎಂತ ಹೇಗಾದರು ನಂಬಲಿ" ಎಂದು ಟಾಂಟಾಂ ಹೊಡೆಯುತ್ತಿದ್ದಾನೆ.

ಆದರೆ, ಪ್ರಾಣಿತಜ್ಞರು ಮಾತ್ರ ಈ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಪ್ರೊ. ಸಾನ್ ಚಾಂಗ್-ಹೋ ಎಂಬುವವರು, ನಾಯಿಯ ಹೊಟ್ಟೆಯಲ್ಲಿ ಬೆಕ್ಕು ಹುಟ್ಟುವುದು ಸಾಧ್ಯವೇ ಇಲ್ಲ ಎಂದು ನುಡಿದಿದ್ದಾರೆ. ನಾಯಿ ಮತ್ತು ಬೆಕ್ಕಿನಲ್ಲಿರುವ ಜೀವತಂತುಗಳ ವಿನ್ಯಾಸ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಹಾಗಾಗಿ ನಾಯಿಮರಿ ಬೆಕ್ಕಿನಮರಿಯಂತೆ ಕಾಣುವುದು ಅಸಾಧ್ಯ ಎಂದು ಅವರು ವಿಶ್ಲೇಷಿಸಿದ್ದಾರೆ.

ನಾಯಿ ಮತ್ತು ಬೆಕ್ಕಿ ಆಜನ್ಮ ವೈರಿಗಳು ಎಂಬುದು ಅನೇಕರಿಗೆ ತಿಳಿದ ಸಂಗತಿ. ಆದರೆ, ಕೆಲವೆಡೆ ನಾಯಿ ಮತ್ತು ಬೆಕ್ಕು ಅನ್ಯೋನ್ಯತೆಯಿಂದ ಇದ್ದದ್ದು ಕೂಡ ಸಾಬೀತಾಗಿದೆ. ಆದರೆ, ನಾಯಿಯ ಪ್ರಸವ ಸಂಭಿಸುವಾಗ ಜಿಯಾಂಗ್ ಪಿಯಾಂಗ್ ವಿಡಿಯೋ ಮಾಡಿದ್ದರೆ ಈ ಸಂಗತಿಯನ್ನು ನಂಬಬಹುದಿತ್ತು. ಹಾಗಾಗಿ, ನಾಯಿ ಬೆಕ್ಕಿನ ಹುಟ್ಟಿಗೆ ಕಾರಣವಾದ ಸಂಗತಿ ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ಕಲಿಗಾಲವಯ್ಯ ಕಲಿಗಾಲ.

English summary
A 63 year old many has claimed that his pet dog has given birth to cat. He says it is a miracle. But veterinary experts have said that is highly impossible for dog to give birth to cat. What do you say? Do you believe it?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X