ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಕ್ಕೆ ಹೋಗಲು ಲೈಂಗಿಕ ಅಲ್ಪಸಂಖ್ಯಾತರಿಗೆ ನಿರ್ಬಂಧ

By Prasad
|
Google Oneindia Kannada News

International AIDS Conference in Washington
ಕೋಲ್ಕತಾ, ಜು. 21 : ಜುಲೈ 22 ಭಾನುವಾರದಿಂದ 27ರವರೆಗೆ ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಏಡ್ಸ್ ಸಮ್ಮೇಳನ(IAC)ದಲ್ಲಿ ಭಾಗವಹಿಸುವುದಕ್ಕೆ ವಿದೇಶಿ ಲೈಂಗಿಕ ಅಲ್ಪಸಂಖ್ಯಾತರಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಕೋಲ್ಕತಾದಿಂದಲೇ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಸಮ್ಮೇಳನದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ.

ಮಾರಕ ರೋಗ ಏಡ್ಸ್ ಅನ್ನು ನಿಯಂತ್ರಿಸುವ ಉದ್ದೇಶದಿಂದ ಎರಡು ವರ್ಷಗಳಿಗೊಮ್ಮೆ ಹಮ್ಮಿಕೊಳ್ಳಲಾಗುವ ಈ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಜಾಗತಿಕ ಸಂಸ್ಥೆಗಳು, ಏಜೆನ್ಸಿಗಳು ಭಾಗವಹಿಸುತ್ತಿವೆ. ಕಳೆದ 25 ವರ್ಷಗಳಿಂದ ನಡೆಯುತ್ತಿರುವ ಸಮಾವೇಶದಲ್ಲಿ ವಿಜ್ಞಾನಿಗಳು/ವಿಚಾರವಾದಿಗಳು, ಎಚ್ಐವಿ ರೋಗ ಸೋಂಕಿತರು, ಮತ್ತು ಲೈಂಗಿಕ ಅಲ್ಪಸಂಖ್ಯಾತರು ಭಾಗವಹಿಸುತ್ತ ಬಂದಿದ್ದಾರೆ.

ಈ ಏಡ್ಸ್ ಜಾಗೃತಾ ಸಮ್ಮೇಳನದಲ್ಲಿ ಭಾಗವಹಿಸಲು ಭಾರತದ ಲೈಂಗಿಕ ಅಲ್ಪಸಂಖ್ಯಾತರಿಗೆ, ಅಮೆರಿಕದ ಪ್ರವಾಸ ನಿರ್ಬಂಧದಿಂದ, ಸಾಧ್ಯವಾಗುತ್ತಿಲ್ಲವಾದ್ದರಿಂದ ಸ್ವಭೂಮಿ ಎಂಬ ಜಾಗದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಲಾಗುತ್ತಿದೆ. ಇದರಲ್ಲಿ ಬೆಂಗಳೂರು ಸೇರಿದಂತೆ ಭಾರತದ ಅನೇಕ ನಗರಗಳಿಂದ ಸುಮಾರು 550ಕ್ಕೂ ಹೆಚ್ಚು ಲೈಂಗಿಕ ಅಲ್ಪಸಂಖ್ಯಾತರು ಭಾಗವಹಿಸುತ್ತಿದ್ದಾರೆ.

ವಿಶಿಷ್ಟ ಜೀವನಶೈಲಿಯಿಂದಾಗಿ ಲೈಂಗಿಕ ಅಲ್ಪಸಂಖ್ಯಾತರ ಅನೇಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಅವರು ಏಳು ಸ್ವಾತಂತ್ರ್ಯಗಳಿಗೆ ಬೇಡಿಕೆ ಇಟ್ಟು ಹೋರಾಟ ನಡೆಸುತ್ತಿದ್ದಾರೆ. ಅವೆಂದರೆ, ವಲಸೆ ಹೋಗುವ ಸ್ವಾತಂತ್ರ್ಯ, ಗುಣಮಟ್ಟದ ಆರೋಗ್ಯ ಸೇವೆ, ವೃತ್ತಿ ಸ್ವಾತಂತ್ರ್ಯ, ಸಂಘಟನಾ ಸ್ವಾತಂತ್ರ್ಯ, ಕಾನೂನಿನ ರಕ್ಷಣೆ, ಹಿಂಸೆ ದೌರ್ಜನ್ಯದಿಂದ ಮುಕ್ತಿ, ಮತ್ತು ತಾರತಮ್ಯ ಹಾಗು ಕಳಂಕದಿಂದ ಬಿಡುಗಡೆ.

ಲೆಸ್ಬಿಯನ್, ಗೇ ಮತ್ತು ದ್ವಿಲಿಂಗಿಗಳ ಪರ ಹೋರಾಟ ನಡೆಸುತ್ತಿರುವ ಅಮೆರಿಕಾದಲ್ಲಿಯೇ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕಾನೇ ನಿರ್ಬಂಧ ಹೇರಿರುವುದು ತುಂಬಾ ನೋವು ತಂದಿದೆ ಮತ್ತು ಮಾನವೀಯತೆ ತೋರಿಸದಿದ್ದಕ್ಕೆ ನಿರಾಶೆ ಆಗಿದೆ ಎಂದು ಜಾಗತಿಕ ಲೈಂಗಿಕ ಅಲ್ಪಸಂಖ್ಯಾತರ ಜಾಲದ ಅಧ್ಯಕ್ಷರಾಗಿರುವ ಆಂಡ್ರ್ಯೂ ಹಂಟರ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಕೋಲ್ಕತಾದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ತಮ್ಮ ದುಃಖ ದುಮ್ಮಾನಗಳನ್ನು, ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

English summary
Indians have been restricted by US to participate in International AIDS Conference to be held in Washington to create awareness about AIDS. Kolkata will be hosting video conference from July 22-27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X