• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಪಿಎ2: ಕಾಂಗ್ರೆಸ್ ಮೈತ್ರಿ ಧರ್ಮವ ಪಾಲಿಸುತ್ತಿಲ್ಲವೇ?

By Srinath
|
ನವದೆಹಲಿ, ಜುಲೈ 20: ಎರಡನೆಯ ಬಾರಿಗೂ ಯುಪಿಎ ಮೈತ್ರಿಕೂಟದ ಸಾರಥ್ಯವಹಿಸಿರುವ ಕಾಂಗ್ರೆಸ್ ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲವೇ?

ತಾಜಾ ಆಗಿ, NCP ಸಚಿವರಾದ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಅವರ ದಿಢೀರ್ ಬಂಡಾಯ ಮತ್ತು ತದನಂತರವೂ ಮುಂದುವರಿದ ಬಹಿರಂಗ ದಾಳಿಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷವು ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲವೇ ಎಂಬ ಬಲವಾದ ಅನುಮಾನ ಕಾಡುತ್ತಿದೆ.

ಇಷ್ಟಕ್ಕೂ ಶರದ್ ಪವಾರ್ ಬಂಡಾಯವೆದ್ದಿದ್ದು ಸಕಾರಣವಾಗಿಯೇ ಇದೆ. ಏಕೆಂದರೆ ಪ್ರಣಬ್ ದಾ ನಿರ್ಗಮನದ ಪ್ರಧಾನಿಯ ಪಕ್ಕ ಕುಳಿತುಕೊಳ್ಳುವ ಆರ್ಹತೆಯಿದ್ದುದು ಮತ್ತು ಆ ಸ್ಥಾನವನ್ನು ತುಂಬ ಬೇಕಾದ ಅರ್ಹತೆಯಿರುವುದು ಶರದ್ ಪವಾರ್ ಗೆ ಎಂಬುದು ನಿರ್ವಿವಾದ ಎನ್ನುತ್ತಾರೆ NCP ನಾಯಕರು.

ಆದರೆ ಕಾಂಗ್ರೆಸ್ ನಾಯಕರು ಹೇಳುವುದೇ ಬೇರೆ. NCP ಪಕ್ಷದಲ್ಲಿ ಕೇವಲ 9 ಸಂದರು ಇದ್ದಾರೆ. ಅದೇ ಕಾಂಗ್ರೆಸ್ UPAದಲ್ಲಿ ಅಗ್ರ ಸ್ಥಾನದಲ್ಲಿದೆ. ಹಾಗಾಗಿ, ಸರಕಾರದಲ್ಲಿ ಎರಡನೆಯ ಸ್ಥಾನವೂ ನಮಗೇ ದಕ್ಕಬೇಕು. ಅದರಂತೆ ಎಕೆ ಆಂಟನಿ ಪ್ರಧಾನಿ ಪಕ್ಕ ಕುಳಿತಿದ್ದಾರೆ ಎಂಬ ವಾದವನ್ನು ಮಂಡಿಸುತ್ತಾರೆ ಕಾಂಗ್ರೆಸ್ಸಿನವರು.

ಹಾಗೆ ನೋಡಿದರೆ UPAದಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂಬುದು ಪುರಾತನ ದೂರು-ದುಮ್ಮಾನ. ಅದರಲ್ಲೂ 'ಅಲ್ಪ' ಮೈತ್ರಿಗಳನ್ನು ಕಂಡರೆ ಕಾಂಗ್ರೆಸ್ಸಿಗೆ ಅಷ್ಟಕ್ಕಷ್ಟೇ ಎಂಬ ಮಾತಿದೆ. ತಾಜಾ ಆಗಿ ಶರದ್ ಪವಾರ್ ಬಂಡಾಯದ ಬಾವುಟ ಹಾರಿಸಿದ್ದು, ಯುಪಿಎದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ.

ಗಮನಿಸಿ: ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ತ್ಯಜಿಸಿ, NCP ರಚಿಸಿಕೊಂಡಿದ್ದರು.

ಯುಪಿಎ ಪ್ರಧಾನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಣ್ಣ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇತರೆ ಸಚಿವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದರೆ ತಮಗೆ ಆ ಭಾಗ್ಯವಿಲ್ಲ ಎಂಬುದು NCP ಅಧಿನಾಯಕ ಪವಾರರ ಕೂಗು, ಕೊರಗು. ಅಂದಹಾಗೆ, ತೃಣಮೂಲ ಕಾಂಗ್ರೆಸ್ ವಿಷಯದಲ್ಲೂ ಕಾಂಗ್ರೆಸ್ ಪಕ್ಷದ್ದು ಇದೇ ರಗಳೆಯಾಗಿದೆ ಅಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With the central Ministers Sharad Pawar and Praful Patel threatening to quit the central Cabinet it is evident that in UPA 2 the Congress is not following coalition dharma say smaller coalition parteners.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more