• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Outlook ಪತ್ರಿಕೆಗೆ ಬೇಕಿತ್ತಾ ಇದೆಲ್ಲ!?

By Srinath
|
ನವದೆಹಲಿ, ಜುಲೈ 20: ನಮ್ಮ 'ಹೆಮ್ಮೆಯ' ಪ್ರಧಾನಿಯನ್ನು under achiever ಎಂದು ಅಂತಾರಾಷ್ಟ್ರೀಯಮಟ್ಟದಲ್ಲಿ ಪತ್ರಿಕೆಯೊಂದು ಜರಿದಿದೆ ಎಂದು Outlook India ಎಂಬ ಸಂಪನ್ನ ಪತ್ರಿಕೆಯು ಅಮೆರಿಕದ ಅಧ್ಯಕ್ಷ under achiever ಅಲ್ವಾ? ಎಂದು ಮುಖಪುಟ ಲೇಖನದಲ್ಲಿ ಪಾಟೀ ಸವಾಲು ಹಾಕಿದೆ. ಬೇಕಿತ್ತಾ Outlook ಪತ್ರಿಕೆಗೆ ಇದೆಲ್ಲ!?

ಏಕೆಂದರೆ ಖುದ್ದು ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿಯೇ 'ಯಾಕೋ ನಮ್ಮ ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಆಡಳಿತ ವಿರೋಧಿ ಅಲೆ ದಟ್ಟವಾಗುತ್ತಿದೆ. ಹಾಗಾಗಿ ನಾನೇ ಅಧಿಕಾರಕ್ಕೆ ಬಂದರೆ ಹೇಗೆ?' ಎಂದು ಆಲೋಚಿಸುತ್ತಿರುವಾಗ Outlook ಪತ್ರಿಕೆಗೆ ಬೇಕಿತ್ತಾ ಇದೆಲ್ಲ!?

ಈ ಮಧ್ಯೆ, ಗಾಂಧಿ ಕುಡಿ ರಾಹುಲ್ ಗಾಂಧಿ ಅವರು ಹಾಗೆ ಪ್ರಧಾನಿ ಕುರ್ಚಿ ಮೇಲೆ ಟವಲ್ ಹಾಕಲು ಹವಣಿಸುತ್ತಿರುವ ಬೆನ್ನಲ್ಲೇ ಯುಪಿಎ ಮೈತ್ರಿಕೂಟದಲ್ಲಿನ 'ಮೈತ್ರಿ' ಹೋಗಿ ದುಷ್ಮನಿ ಕಾಣುತ್ತಿದೆ.

ಪಕ್ಷದಲ್ಲಿ ಇದುವರೆಗೆ 'ನಂಬರ್ ಟು' ಆಗಿದ್ದ ಪ್ರಣಬ್ ದಾ ಅತ್ತ ನಿನ್ನೆಯಷ್ಟೇ ತಮ್ಮ ಪರ ಸಾಕಷ್ಟು ಮತ ಚಲಾಯಿಸಿಕೊಂಡು ರಾಷ್ಟ್ರಪತಿ ಭವನದತ್ತ ಮೌನವಾಗಿ ಹೆಜ್ಜೆ ಹಾಕುತ್ತಿರುವಾಗ ಸರಕಾರಿ ಮಟ್ಟದಲ್ಲಿ ಅವರಿಂದ ತೆರವಾಗಿರುವ 'ನಂಬರ್ ಟು' ಸ್ಥಾನ ತನಗೇ ಸಲ್ಲಬೇಕು ಎಂದು ಶರದ್ ಪವಾರ್ ಅವರು 'ಪವರ್' ಫುಲ್ ಬೇಡಿಕೆ ಮುಂದಿಟ್ಟಿದ್ದಾರೆ.

ಕಳೆದ ವಾರದಿಂದಲೇ ವರಾತ: ಮತ್ತು ಪವಾರ್ ಸಾಹೇಬರು ತಮ್ಮ candidature ಅನ್ನು ಸತ್ವಯುತವಾಗಿ ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದೊಂದು ವಾರದಿಂದ ಹೆಚ್ಚು ಸಕ್ರಿಯರೂ ಆಗಿದ್ದಾರೆ. ಹೇಗೆಂದರೆ, 'ತನ್ನನ್ನು ನಂಬರ್ ಟು ಮಾಡುತ್ತಿಲ್ಲ. ಬದಲಿಗೆ ಆ ಸ್ಥಾನಕ್ಕೆ ಸೋನಿಯಾ ಮೇಡಂ 'ಎಕೆ ಆಂಟನಿ' ಎಂಬುವವರನ್ನು ತರಲಿದ್ದಾರೆ' ಎಂಬುದರ ಸಣ್ಣ ಸುಳಿವರಿತು ಕಳೆದ ವಾರದಿಂದಲೇ ಪವಾರ್ ಸಾಹೇಬರು ವರಾತ ತೆಗೆದಿದ್ದಾರೆ.

ಸೋನಿಯಾ ಮೇಡಂಗೆ ಬಿಸಿ ಮುಟ್ಟಿಸಲು ಕಳೆದ ವಾರ ಸಚಿವ ಸಂಪುಟದ ಮುಖ್ಯ ಸಭೆಗೆ ಗೈರು ಹಾಜರಾದರು. ಅದಾದನಂತರ ತಮ್ಮ 'ನಂಬರ್ ಟು' ಪ್ರಯತ್ನವನ್ನು ಜಾರಿಯಲ್ಲಿಟ್ಟಿರುವ ಪವಾರ್ ಸಾಹೇಬರು, ಈಗ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯೊಡ್ಡಿದ್ದಾರೆ. ಇದು ಅವರ ಒಳಾಂತರ್ಯವಾಗಿದ್ದರೆ ಬಾಹ್ಯದಲ್ಲಿ...

'ನಾವೆಲ್ಲ ಯುಪಿಎ ಗೆಳೆಯರು. ಆದರೆ ತಮ್ಮ ಪಕ್ಷವಾದ ಎನ್ ಸಿಪಿಯನ್ನು ಮೇಡಂ ಸೋನಿಯಾ ಅವಗಣನೆ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ any moment ತಾವು ರಾಜೀನಾಮ ಒಗಾಯಿಸುವುದು ಶತಸಿದ್ಧ' ಎಂಬ ಸಂದೇಶವನ್ನು ಸಂಬಂಧಪಟ್ಟವರಿಗೇ ನೇರವಾಗಿ ತಲುಪುವಂತೆ ನೋಡಿಕೊಂಡಿದ್ದಾರೆ.

ಜತೆಗೆ, ಮತ್ತೊಬ್ಬ ಗೆಳೆಯ ಪ್ರಫುಲ್ ಪಟೇಲ್ ಎಂಬ ಪ್ರಭಾವಿ ಮಂತ್ರಿಯನ್ನು ತಮ್ಮೊಂದಿಗೆ ವಾಪಸ್ ಕರೆದುಕೊಂಡು ಹೋಗುವುದಾಗಿ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಿಕೊಳ್ಳುವ ಮಹತ್ವದ ಘಟ್ಟದಲ್ಲಿ ಶರದ್ ಪವಾರ್ ಅಂಡ್ ಟೀಂ ಹೀಗೆ ಬಲ ಪ್ರದರ್ಶಿಸಲು ಸಜ್ಜಾಗಿದೆ ಎನ್ನಲಾಗಿದೆ.

ನಿನ್ನೆ ಪ್ರಧಾನಿ ಮನಮೋಹನ್ ಸಿಂಗ್ ಸಚಿವ ಸಂಪುಟ ಸಭೆ ನಡೆಸುತ್ತಿರುವಾಗ ಸಭೆಗೆ ಗೈರು ಹಾಜರಾದ ಶರದ್ ಪವಾರ್ ಇತ್ತ ಪಟೇಲ್ ಮತ್ತು ಎನ್ಸಿಪಿಯ ಮತ್ತೊಬ್ಬ ಧುರೀಣ ಡಿಪಿ ತ್ರಿಪಾಠಿ ಜತೆಗೂಡಿ ತಮ್ಮ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದ್ದಾರೆ. ಕಾಂಗ್ರೆಸ್ ಜತೆಗಿನ ಕಳೆದೆಂಟು ವರ್ಷಗಳ ಬಾಂಧವ್ಯದಲ್ಲಿ ಪವಾರ್ ಸಾಹೇಬರು ಇತ್ತೀಚೆಗಷ್ಟೇ ಬಂಕ್ಮಾಡುತ್ತಿದ್ದಾರೆ.

ಈ ವಿದ್ಯಾಮಾನಗಳನ್ನು ದೃಢಪಡಿಸುವಂತೆ 'ಏನ್ಸಾರ್ ರಾಜೀನಾಮೆ ನೀಡ್ತೀರಂತೆ' ಎಂದು ಪತ್ರಕರ್ತರು ಶರದ್ ಅವಾರ್ ಅವರನ್ನು ಕೇಳಿದಾಗ ಅದನ್ನು ಅಲ್ಲಗೆಳೆಯುವ ಗೋಜಿಗೆ ಹೋಗದ ಪವಾರ್, 'ಸದ್ಯಕ್ಕೆ ನೋ ಕಾಮೆಂಟ್ಸ್' ಎಂದು ಕದನ ಕುತೂಹಲವನ್ನು ಜಾರಿಯಲ್ಲಿಟ್ಟಿದ್ದಾರೆ. ಹಾಗಾಗಿ, 'Congress +/- NCP' ಮೈತ್ರಿಯ ಮುಂದಿನ ಬೆಳವಣಿಗೆಗಳಿಗಾಗಿ ದಟ್ಸ್ ಕನ್ನಡ ನೋಡುತ್ತಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Disheartened by knowing that he is not considered for Number 2 slot in UPS govt. Minister Sharad Pawar along with Praful Patel threaten to quit central Cabinet. In the meanwhile Outlook magazine describes Barack Obama as 'underachiever'

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more