ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ! ಹಣ್ಣು ತರಕಾರಿ ಬೆಲೆ ಏರಿಕೆಯಾಗಲಿದೆ

By Mahesh
|
Google Oneindia Kannada News

Vegetables
ಬೆಂಗಳೂರು, ಜು.20: 'ವಾಹ್ ! ಬೆಂಗಳೂರಿನ ಹವಾಮಾನ ಏನು ಕೂಲ್ ಆಗಿದೆ' ಎಂದು ಸಂಭ್ರಮ ಪಡುವ ಮುನ್ನವೇ ಸಂಜೆ ಮನೆಯಲ್ಲಿ ಅಥವಾ ರೋಡ್ ಸೈಡ್ ನಲ್ಲಿ ಬೋಂಡಾ ಬಜ್ಜಿ ಮಾಡಿಸಿಕೊಂಡು ತಿಂದು ತೇಗಲು ಬಯಸುವವರ ಕಿಸೆಗೆ ಕತ್ತರಿ ಗ್ಯಾರಂಟಿ. ತರಕಾರಿ ಹಾಗೂ ಹಣ್ಣು ಹಂಪಲು ಬೆಲೆ ಗಗನಕ್ಕೇರುವ ದಿನಗಳನ್ನು ಬೆಂಗಳೂರಿಗರು ಎದುರಿಸಬೇಕಾಗುತ್ತದೆ ಎಂಬ ಕಹಿ ಸುದ್ದಿ ಶುಕ್ರವಾರ(ಜು.20) ಬೆಳಗ್ಗೆಯೇ ಸಿಕ್ಕಿದೆ.

ಈ ಋತುವಿನಲ್ಲಿ ಬೆಲೆ ಏರಿಕೆಗೆ ಕಾರಣಗಳ ಮೇಲೆ ಕಾರಣಗಳನ್ನು ಕೊಡಬಹುದು. ಮೊದಲಿಗೆ ಮುಂಗಾರು ಮಳೆ ಕ್ಷೀಣ, ಹವಾಮಾನ ವೈಪರೀತ್ಯ ಒಂದೆಡೆಯಾದರೆ, ಮತ್ತೊಂದೆಡೆ ಬೆಳೆ ನಿರ್ವಹಣೆ ಹಾಗೂ ಶೇಖರಣೆಯಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ರೈತರು ಕೊಂಚ ಮೈಮರೆತ್ತಿದ್ದು ಕೃಷಿ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ ಸರಿಯಾದ ಸರಕು ಸಾಗಣೆ, ಸರಬರಾಜು ಇಲ್ಲದೆ ಶ್ರಾವಣ ಮಾಸದ ಹಬ್ಬ ಹರಿದಿನಗಳಲ್ಲಿ ವಿಧ ವಿಧ ಭಕ್ಷ್ಯ ಭೋಜ್ಯಗಳನ್ನು ಮಾಡಲು ಆಗದೆ ಒದ್ದಾಡುವ ದೃಶ್ಯಗಳು ನಿರೀಕ್ಷಿತ.

ಎಲ್ಲಾ ಮೆಟ್ರೋಗಳಲ್ಲೂ ಅದೇ ಕಥೆ: ಮುಂಬೈನಲ್ಲಿ ಕಿಲೋ ಟೊಮ್ಯಾಟೋ 25 ರು ನಷ್ಟಿದ್ದರೆ, ದೆಹಲಿಯಲ್ಲಿ 60 ರು ಇದೆ. ಬೆಂಗಳೂರಿನಲ್ಲಿ 20 ರು ಇದ್ದ ಬೆಲೆ ಈಗ 30-35 ರು. ರ ಹತ್ತಿರವಿದೆ. ದಪ್ಪ ಮೆಣಸಿನಕಾಯಿ 80 ರು ಪ್ರತಿ ಕೆಜಿಗೆ ಜಿಗಿದಿದೆ. ಕಳೆದ ತಿಂಗಳು 40 ರ ಆಸುಪಾಸಿನಲ್ಲಿತ್ತು. ಇದರ ಜೊತೆಗೆ ಧಾನ್ಯಗಳು, ಅಕ್ಕಿ, ಸಕ್ಕರೆ ಬೆಲೆ ಏರಿಕೆ ಬಿಸಿ ಕೂಡಾ ಗ್ರಾಹಕರಿಗೆ ಕಾಟ ಕೊಡಲಿದೆ.ಕೃಷಿ ಮಾರುಕಟ್ಟೆಯಲ್ಲಿ ರಾಗಿ, ಹೆಸರು, ಉದ್ದಿನಬೇಳೆ, ರವೆ ಬೆಲೆ ಏರಿಕೆ ಕಾಣುವ ಸೂಚನೆ ಸಿಕ್ಕಿದೆ.

ಸಗಟು ಮಾರುಕಟ್ಟೆ ದರಗಳ ಪ್ರಕಾರ (ಅಸಲಿ ದರಕ್ಕಿಂತ 3-5 ರು ವ್ಯತ್ಯಾಸ ಕಂಡು ಬರುತ್ತದೆ. ಇಲ್ಲಿ ಕನಿಷ್ಠ ಹಾಗೂ ಗರಿಷ್ಠ ಪೇಟೆ ಧಾರಣೆ ನೀಡಲಾಗಿದೆ)
* ಅಕ್ಕಿ (25 ಕೆಜಿ) 600-975 ರು
* ರಾಗಿ (ಕ್ವಿಂಟಾಲ್) 1500-1700 ರು
* ಮೆಣಸಿನಕಾಯಿ (ಕ್ವಿಂಟಾಲ್) -ಬ್ಯಾಡಗಿ 10,000-12000; ಗುಂಟೂರು 5000-9000
* ಸಕ್ಕರೆ (ಕ್ವಿಂಟಾಲ್) -3340-3500
* ತೊಗರಿಬೇಳೆ (50 ಕೆಜಿ) 3250-3565
* ಗೋಧಿ (50 ಕೆ.ಜಿ) - 1050-1250

ಧಾನ್ಯಗಳು (ಪ್ರತಿ 50 ಕೆಜಿ)
* ಕಡಲೆಕಾಳು - 3000-3050
* ಅಲಸಂದೆ- 3000-3200
* ಹುರುಳಿ ಕಾಳು- 1400-1500
* ಕಾಬೂಲ್ ಕಡ್ಲೆ(30 ಕೆಜಿ) 2650-2800
* ಹುರುಳಿಕಾಳು -1400-1500

ಸದ್ಯಕ್ಕೆ ಪ್ರಮುಖ ತರಕಾರಿ, ಹಣ್ಣುಗಳ ಬೆಲೆ ಇಂತಿದೆ:
* ಅಲೂಗೆಡ್ಡೆ (50 ಕೆಜಿ) 700-1000
* ಕೋಸು (1 ಕೆಜಿ) - 16-40 ರು
* ಕ್ಯಾರೇಟ್ ( 1 ಕೆಜಿ) - 47-62 ರು

* ಕಲ್ಲಂಗಡಿ 14-16
* ಕಿತ್ತಲೆ 67-120
* ಮಾವು(ವಿವಿಧ ತಳಿ) 22-70
* ದ್ರಾಕ್ಷಿ 80 ರು
* ಸಫೋಟ 38 ರು

English summary
Dry Monsoon from past few months in Southern India especially Bangalore rural areas and climate change causes vegetables and fruits price hike
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X