ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ ವೇ ಟಿಕೆಟ್ ಪಡೆದಿದ್ದ ರೇಪಿಸ್ಟ್ ಸಿಕ್ಕಿಬಿದ್ದ

By Mahesh
|
Google Oneindia Kannada News

Indian cabbie accused of raping Oz woman bought 'one way ticket to Delhi'
ಸಿಡ್ನಿ, ಜು.19: ಆಸ್ಟ್ರೇಲಿಯಾದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸೆಗಿ ಭಾರತಕ್ಕೆ ಓಡಿ ಬಂದಿದ್ದ ಕ್ಯಾಬ್ ಡ್ರೈವರ್ ಒಬ್ಬ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಈತ ಮೆಲ್ಬೋರ್ನ್ ನಿಂದ ದೆಹಲಿಗೆ ಒನ್ ವೇ ಟಿಕೆಟ್ ಬುಕ್ ಮಾಡಿಸಿದ್ದರಿಂದ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯ ಮೇಲಿದ್ದ ಆರೋಪ ಸಾಬೀತುಪಡಿಸುವಲ್ಲಿ ಆಸೀಸ್ ಪೊಲೀಸರು ಯಶಸ್ವಿಯಾಗಿದ್ದಾರೆ.

25 ವರ್ಷದ ಟ್ಯಾಕ್ಸಿ ಡ್ರೈವರ್ ಒಬ್ಬ ಮೆಲ್ಬೋರ್ನ್ ನಲ್ಲಿ ತನ್ನ ಕಾರಿನ ಹಿಂಬದಿ ಸೀಟಿನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಎದುರಿಸುತ್ತಿದ್ದಾನೆ. ಜಸ್ವಿಂದರ್ ಸಿಂಗ್ ಮುಟ್ಟಾ ಎಂಬ ಹೆಸರಿನ ವ್ಯಕ್ತಿ ಥಾಯ್ ಏರ್ ವೇಸ್ ಮೂಲಕ ಫೆ.6. 2010ರಂದು ಸ್ಥಳೀಯ ಕಾಲಮಾನ 12.20 ಕ್ಕೆ ಹೊರಟು ದೆಹಲಿ ತಲುಪಿದ್ದ.

ಮುಟ್ಟಾನ ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದ ಮಹಿಳೆ ವಾಂತಿ ಮಾಡಿಬಿಟ್ಟಳು. ಅದನ್ನು ಸ್ವಚ್ಛಗೊಳಿಸುವಂತೆ ಹೇಳಿದ ಮುಟ್ಟಾ ಆಕೆಯ ಮನೆಗೆ ಕಾರು ಚಲಾಯಿಸಿದ. ಆಕೆ ಕ್ಲೀನ್ ಮಾಡುತ್ತಿದ್ದಂತೆ ಆಕೆ ಮೇಲೆ ಮುಗಿಬಿದ್ದು ಆಕೆಯನ್ನು ಹಾಳು ಮಾಡಿಬಿಟ್ಟ. ನನಗೆ ಏಡ್ ಇದೆ ಗೊತ್ತಾ ಎಂದು ನಗೆ ಚಟಾಕಿ ಹಾರಿಸಿ ಆಕೆಯನ್ನು ಕಂಗಾಲು ಮಾಡಿಬಿಟ್ಟಿದ್ದ ಎಂದು ಮಹಿಳೆ ಪರ ವಕೀಲರು ವಾದಿಸಿದ್ದರು.

ಡಿಸೆಂಬರ್ 2008ರಲ್ಲಿ ಸ್ಟುಡೆಂಟ್ ವೀಸಾ ಮೇಲೆ ಆಸ್ಟ್ರೇಲಿಯಾಕ್ಕೆ ಬಂದಿದ್ದ ಮುಟ್ಟಾ ಸ್ಥಳೀಯ ಸಂಸ್ಥೆಯೊಂದರ ಟ್ಯಾಕ್ಸಿ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸೆಗಿದ್ದ. ಆದರೆ, 2 ವರ್ಷಗಳ ಕಾಲ ಅತ್ಯಾಚಾರ ಆರೋಪವನ್ನು ಅಲ್ಲಗೆಳೆದು ಆಸ್ಟ್ರೇಲಿಯಾದಲ್ಲೇ ಉಳಿದಿದ್ದ. ಡಿಎನ್ ಎ ಸ್ಯಾಂಪಲ್ ನೀಡದೆ ಸತಾಯಿಸಿದ್ದ. ಸರಿಯಾದ ಸಾಕ್ಷ್ಯ ಆಧಾರ ಇಲ್ಲದ ಕಾರಣ ಮುಟ್ಟಾಗೆ ಖುಲಾಸೆಯಾಗಿತ್ತು.

ನಂತರ 975.59 ಡಾಲರ್ ನೀಡಿ ಒನ್ ವೇ ಟಿಕೆಟ್ ಖರೀದಿಸಿ ನವದೆಹಲಿಗೆ ಬ್ಯಾಂಕಾಕ್ ಮೂಲಕ ತೆರಳಿದ್ದ. ಏರ್ ಟಿಕೆಟ್ ಬುಕ್ಕಿಂಗ್ ದಾಖಲೆಗಳ ಆಧಾರದ ಮೇಲೆ ಆತನನ್ನು ಬಂಧಿಸುವಂತೆ ಭಾರತದ ಅಧಿಕಾರಿಗಳಿಗೆ ಆಸೀಸ್ ಪೊಲೀಸರು ಸೂಚಿಸಿದ್ದರು. ಅದರಂತೆ ಮುಟ್ಟಾನನ್ನು ಬಂಧಿಸಲಾಗಿದೆ. ಭಾರತ ಮೂಲದ ವ್ಯಕ್ತಿ ಈ ರೀತಿ ಕೇಸ್ ನಲ್ಲಿ ಸಿಕ್ಕಿ ಬೀಳುತ್ತಿರುವುದು ಇದೇ ಮೊದಲು ಎನ್ನಲಾಗಿದೆ.(ಎಎನ್ ಐ)

English summary
A 25-year-old Indian taxi driver, who has been accused of raping a woman in the back seat of his cab in Melbourne, had bought a one-way ticket to New Delhi after being interviewed by police at the time, according to a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X