ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಹಣ ರವಾನೆಗೆ ಸೇತುವೆಯಾದ HSBC

By Mahesh
|
Google Oneindia Kannada News

HSBC
ವಾಷಿಂಗ್ಟನ್, ಜು.18: ಅಕ್ರಮ ಹಣ ರವಾನೆ, ಅಕ್ರಮ ಔಷಧಿ ಸಾಗಾಟಕ್ಕೆ ಎಚ್ಎಸ್ ಬಿಸಿ ಬ್ಯಾಂಕ್ ಬಳಕೆಯಾಗಿದೆ. ಉಗ್ರರ ಮನಿ ಲಾಂಡ್ರಿಂಗ್ ಚಟುವಟಿಕೆ ಹತ್ತಿಕ್ಕುವಲ್ಲಿ ಪ್ರತಿಷ್ಠಿತ ಬ್ಯಾಂಕ್ ಎಚ್ಎಸ್ ಬಿಸಿ ಸಂಪೂರ್ಣ ವಿಫಲವಾಗಿದೆ ಎಂದು ಸೆನೆಟ್ ನ ಉಪಸಮಿತಿ ಇತ್ತೀಚೆಗೆ ವರದಿ ನೀಡಿದೆ.

ಆಮೆರಿಕ ಮತ್ತು ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಉಗ್ರರ ವ್ಯಾಪಕ ಜಾಲಕ್ಕೆ ಅಕ್ರಮ ಹಣ ವರ್ಗಾವಣೆ ಆಧಾರವಾಗಿದೆ. ಅಲ್ ಖೈದಾ ಉಗ್ರ ಸಂಘಟನೆಯ ಜಾಲದ ವ್ಯಕ್ತಿ ಸ್ಥಾಪಿತ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕ್(Al Rajhi Bank) ಜೊತೆ ಎಚ್ ಎಸ್ ಬಿಸಿ ವ್ಯವಹಾರ ಇಟ್ಟುಕೊಂಡಿದೆ. ಎರಡು ಬ್ಯಾಂಕುಗಳ ನಡುವಿನ ವ್ಯವಹಾರವನ್ನು ಒಂದು ವರ್ಷ ಕಾಲ ಅಭ್ಯಸಿಸಿ ಖಚಿತಪಡಿಸಿಕೊಂಡ ಮೇಲೆ ಈ ವರದಿಯನ್ನು ಸಲ್ಲಿಸುತ್ತಿರುವುದಾಗಿ ಸೆನೆಟ್ ಸಮಿತಿ ಹೇಳಿದೆ.

ಸೌದಿ ಅರೇಬಿಯಾ, ಬಾಂಗ್ಲಾದೇಶ, ಸಿರಿಯಾ, ಕ್ಯೂಬಾ, ಮೆಕ್ಸಿಕೋ, ಇರಾನ್, ಉತ್ತರ ಕೊರಿಯಾ, ಬರ್ಮಾ, ಕೇಮ್ಯಾನ್ ಐಲ್ಯಾಂಡ್ಸ್, ಜಪಾನ್ ಮತ್ತು ರಷ್ಯಾದ ವಿವಿಧ ಸಂಸ್ಥೆಗಳ ಜತೆ ಈ ಬ್ಯಾಂಕ್ ಹಲವಾರು ಪ್ರಶ್ನಾರ್ಹ ಹಣಕಾಸಿನ ವ್ಯವಹಾರ ನಡೆಸಿದೆ.

ಭಯೋತ್ಪಾದಕರಿಗೆ ಹಣಕಾಸು ನೀಡುತ್ತಿರುವ ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶದ ಕೆಲವು ಬ್ಯಾಂಕುಗಳಿಗೆ ಎಚ್ಎಸ್.ಬಿಸಿ ಬ್ಯಾಂಕ್ ಮೂಲಕ ಭಾರಿ ಮೊತ್ತದ ಅಮೆರಿಕನ್ ಡಾಲರ್ ಗಳನ್ನು ವರ್ಗಾಯಿಸಿರುವುದು ಕಂಡುಬಂದಿದೆ.

ಬ್ಯಾಂಕಿಂಗ್ ನಿಯಮ ಮೀರಲಾಗಿದೆ: ಅಮೆರಿಕದ ಬ್ಯಾಂಕಿಂಗ್ ನಿಯಮಗಳನ್ನು ಗಾಳಿಗೆ ತೂರಿ ಯುಎಸ್ ಡಾಲರ್ ಸೇವೆಗಳನ್ನು ಒದಗಿಸಲು ಎಚ್.ಎಸ್.ಬಿ.ಸಿ ತನ್ನ ಅಮೆರಿಕನ್ ಶಾಖೆಗಳನ್ನು ಹೆಬ್ಬಾಗಿಲಿನಿಂತೆ ಬಳಸಿಕೊಳ್ಳುತ್ತಿದೆ ಎಂದು ತನಿಖಾ ಸಮಿತಿಯ ಮುಖ್ಯಸ್ಥ ಕಾರ್ಲ್ ಲೆವಿನ್ ಹೇಳಿದ್ದಾರೆ.

ಎಚ್.ಎಸ್.ಬಿ.ಸಿಯ ಮೆಕ್ಸಿಕನ್ ಸಹವರ್ತಿ ಬ್ಯಾಂಕು, 2007-08ರ ನಡುವೆ ಇತರ ಮೆಕ್ಸಿಕನ್ ಬ್ಯಾಂಕುಗಳನ್ನು ಹಿಂದಿಕ್ಕಿ 7 ಶತಕೋಟಿ ಯುಎಸ್ ಡಾಲರ್ ಗಳನ್ನು ಎಚ್.ಎಸ್.ಬಿ.ಯುಎಸ್ ಗೆ ಭೌತಿಕವಾಗಿ ಸಾಗಣೆ ಮಾಡಿದೆ. ಅದೇ ವೇಳೆಗೆ ಅಮೆರಿಕದಲ್ಲಿ ಅಕ್ರಮ ಔಷಧಗಳ ಮಾರಾಟ ಹೆಚ್ಚಿರುವುದು ಪತ್ತೆಯಾಗಿದೆ.

ಹಣಕಾಸು ಭಯೋತ್ಪಾದನೆ ನಡೆಸುತ್ತಿರುವ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕಿಗೆ ಭಾರತದ ರೂಪಾಯಿಯನ್ನು ಪೂರೈಸಲು 2009ರಲ್ಲಿ ಎಚ್.ಎಸ್.ಬಿ.ಸಿ ತನ್ನ ಭಾರತೀಯ ಸಹವರ್ತಿ ಬ್ಯಾಂಕಿಗೆ ಅಧಿಕಾರ ನೀಡಿತ್ತು. 2007ರಿಂದ 2010ರ ನಡುವೆ ಅಮೆರಿಕದ ಎಚ್.ಎಸ್.ಬಿ.ಸಿ ಬ್ಯಾಂಕು ತನ್ನ ಲಂಡನ್ ಶಾಖೆಯ ಮೂಲಕ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕಿಗೆ ಲಕ್ಷಾಂತರ ಡಾಲರ್ ಗಳನ್ನು ಪೂರೈಸಿದೆ.

ಅಷ್ಟೇ ಅಲ್ಲದೆ ಅಲ್ ರಝಿ ಬ್ಯಾಂಕಿನ ಕೋರಿಕೆ ಮೇರೆಗೆ, ಥಾಯ್ಲೆಂಡಿನ ಬ್ಯಾಟ್, ಭಾರತದ ರೂಪಾಯಿ ಮತ್ತು ಹಾಂಕಾಂಗ್ ಡಾಲರ್ ಸೇರಿದಂತೆ ಇತರ ದೇಶಗಳ ಕರೆನ್ಸಿಗಳನ್ನು ಅಲ್ ರಝಿ ಬ್ಯಾಂಕಿಗೆ ಪೂರೈಸಲು ಎಚ್.ಬಿಯುಎಸ್ ತನ್ನ ಹಾಂಕಾಂಗ್ ಶಾಖೆಗೆ ಅಧಿಕಾರ ನೀಡಿತ್ತು ಎಂದು ವರದಿ ಹೇಳಿದೆ.

ಭಾರತದ ರೂಪಾಯಿ ಕುರಿತ ಹೆಚ್ಚಿನ ವಿವರಗಳು ವರದಿಯಲ್ಲಿ ಲಭ್ಯವಿಲ್ಲ. ಪಾಕಿಸ್ತಾನದ ಅತಿದೊಡ್ಡ ಬ್ಯಾಂಕಾದ ಹಬೀಬ್ ಬ್ಯಾಂಕಿನ ಯಾವುದೇ ಶಾಖೆಗೆ ರಿಯಾದ್, ಸೌದಿ ಅರೇಬಿಯಾಗಳಿಂದ ತಕ್ಷಣ ಹಣ ವರ್ಗಾವಣೆಗಾಗಿ ಎಚ್.ಎಸ್.ಬಿ.ಸಿ 2010ರಲ್ಲಿ ಎಚ್.ಬಿ.ಎಲ್ ಫಾಸ್ಟ್ ಕ್ಯಾಶ್ ಯೋಜನೆಯನ್ನು ಆರಂಭಿಸಿತ್ತು.

ಎಚ್.ಎಸ್.ಬಿ.ಸಿ ಕ್ಷಮೆ ಯಾಚನೆ: ಹಣ ವರ್ಗಾವಣೆ ವಿಷಯದಲ್ಲಿ ಉಂಟಾದ ಲೋಪಗಳನ್ನು ಬ್ಯಾಂಕು ಒಪ್ಪಿಕೊಂಡಿದ್ದು, ಅಮೆರಿಕದ ಸೆನೆಟ್ ನ ಕ್ಷಮೆ ಯಾಚಿಸಿದೆ. ದೋಷಗಳನ್ನು ಸರಿಪಡಿಸಿಕೊಳ್ಳಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಅದು ಭರವಸೆ ನೀಡಿದೆ. ಸುಮಾರು 80 ದೇಶಗಳಲ್ಲಿ 7,20೦ ಕಚೇರಿಗಳನ್ನು ಹೊಂದಿದ್ದು, ಅಮೆರಿಕದ HBUS 470 ಬ್ರ್ಯಾಂಚ್ ಗಳ ಮೂಲಕ 4 ಮಿಲಿಯನ್ ಗ್ರಾಹಕರನ್ನು ಹೊಂದಿದೆ. HBUS ನಂಬಿಕೊಂಡು 1,200 ಸಣ್ಣ ಪುಟ್ಟ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುತ್ತಿದೆ.

English summary
Global banking giant HSBC failed in preventing money laundering by drug cartels and terrorists not only in the US, but also other parts of the world, possibly including India, a Senate Permanent Subcommittee on Investigations probe has found. HSBC has 7,200 offices in more than 80 countries. HBUS has 470 branches across the US with 4 million customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X