ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಳೆಯರ ಖುಷಿಗಾಗಿ ಕ್ರೆಡಿಟ್ ಕಾರ್ಡ್ ವಂಚನೆಗಿಳಿದಳು

By Srinath
|
Google Oneindia Kannada News

to-keep-bfs-happy-girl-commit-credit-card-fraud
ಗುರಗಾಂವ್‌, ಜುಲೈ17: American Express ಕಂಪನಿಯ ಹೊರಗುತ್ತಿಗೆ ವಿಭಾಗದ ಮಹಿಳಾ ಉದ್ಯೋಗಿ ಅಕ್ಷಿತಾ ಅತ್ರಿ ಅಮೆರಿಕದ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ, 11 ಲಕ್ಷ ರುಪಾಯಿ ಹಣವನ್ನು ಡ್ರಾ ಮಾಡಿದ್ದಾಳೆ. ಯಾಕಮ್ಮಾ ಹೀಗೆ ಮಾಡಿದೆ ಎಂದು ಪೊಲೀಸರು ಕೇಳಿದ್ದೇ ತಡ. ತನ್ನ ರಂಗೀಲಾ ಬದುಕನ್ನು ಪೊಲೀಸರಿಗೆ ಸವಿವರವಾಗಿ ಪರಿಚಯಿಸಿದ್ದಾಳೆ. ಅದಕ್ಕೆ ಪೊಲೀಸರು ಈಗ ವಂಚಕಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

boyfriendಗಳನ್ನು ಖುಷಿಯಾಗಿಡಲು ಅಕ್ಷಿತಾ ಅತ್ರಿ ಇಂತಹ ಕಂತ್ರಿ ಕೆಲಸಕ್ಕೆ ಕೈಹಾಕಿದ್ದಳು. ಒಬ್ಬಬ್ಬರೇ boyfriendಗಳ ಸಂಗ ಮಾಡುವುದು, ಆ ಪುರುಷ ಪುಂಗವರು ಕೈಕೊಡುತ್ತಿದ್ದಂತೆ ಮತ್ತೊಬ್ಬನ ಸಂಗ ಮಾಡುವುದು. ಈ ಮಧ್ಯೆ ಮೋಜು ಮಾಡಲು ದುಡ್ಡು ಹೊಂದಿಸುವುದಕ್ಕೆ ಇದ್ದೇ ಇತ್ತು ಕಲಿತ ವಿದ್ಯೆ. ಅದುವೇ ಕ್ರೆಡಿಟ್ ಕಾರ್ಡ್ ವಂಚನೆ.

ಕೆನಡಾದಲ್ಲಿರುವ ಅನಿವಾಸಿ ಭಾರತೀಯರೊಬ್ಬರ ಪುತ್ರಿ ಅಕ್ಷಿತಾ ಅತ್ರಿ ಮೊದಲು ಗಗನಸಖಿಯಾಗಿದ್ದಳು. ಆ ವೇಳೆ ಡೆಹ್ರಾಡೂನ್ ನಿವಾಸಿ ಅಕ್ಷಯ್ ಜತೆ ಸ್ನೇಹಕ್ಕಿಳಿದಳು. ಮುಂದೆ ಯಾಕೋ boyfriend ಅಕ್ಷಯ್ ಗಗನಸಖಿ ಕೆಲಸ ಬಿಡು ಅಂದಿದ್ದೇ ತಡ. ಈ ಪುಣ್ಯಾತ್ತಗಿತ್ತಿ ಅತ್ರಿ ಗಗನಸಖಿಗೆ ಗುಡ್ ಬೈ ಹೇಳಿದಳು.

ಮುಂದೆ ಉದ್ಯೋಗ ನಿಮಿತ್ತ ನಕಲಿ ಮಾರ್ಕ್ಸ್ ಕಾರ್ಡ್, ಪದವಿ ಸರ್ಟಿಫಿಕೇಟುಗಳನ್ನು ಸೃಷ್ಟಿಸಿ, American Express ಕಂಪನಿಯ ಹೊರಗುತ್ತಿಗೆ ವಿಭಾಗದಲ್ಲಿ ಕೆಲಸ ಗಿಟ್ಟಿಸುವಲ್ಲಿ ಅಕ್ಷಿತಾ -ಅಕ್ಷಯ್ ಜೋಡಿ ಯಶಸ್ವಿಯಾಗಿತ್ತು. ಹೀಗೆ ಉದ್ಯೋಗ ಮತ್ತು boyfriend ಸಿಗುತ್ತಿದ್ದಂತೆ live in relationshipಗೆ ಜೋತುಬಿದ್ದ ಅಕ್ಷಿತಾ ಅತ್ರಿ ಅಶೋಕ್ ವಿಹಾರದಲ್ಲಿ ವಾಸವಾಗಿದ್ದಳು.

2011ರ ಅಕ್ಟೋಬರಿನಲ್ಲಿ ಅಮೆರಿಕದಿಂದ ಮಹಿಳೆಯೊಬ್ಬರು ಅಕ್ಷಿತಾಗೆ ದೂರವಾಣಿ ಕರೆ ಮಾಡಿದರು. ನೆರವಿನ ಹಸ್ತ ಚಾಚಿದ ಅಕ್ಷಿತಾ, ಆ ಮಹಿಳೆಯ ಕ್ರೆಡಿಟ್ ಕಾರ್ಡ್ ಮತ್ತಿತರೆ ದಾಖಲೆಗಳ ವಿವರ ಪಡೆದಳು. ಅಷ್ಟೇ... ಮುಂದೆ ಅದೇ ದಾಖಲೆಗಳನ್ನು ಮುಂದಿಟ್ಟುಕೊಂಡು ಐಷಾರಾಮಿ ಬದುಕಿಗೆ ಅರ್ಪಿತಳಾದಳು.

ಹೇಗೂ ಗಗನಸಖಿಯಾಗಿದ್ದವಳು. ಈಗ ಬೇರೆ ಹೆಣ್ಣುಮಕ್ಕಳು ಹೇಗೆ ಗಗನಸಖಿ ಸೇವೆ ಮಾಡುತ್ತಾರೋ ತೋರಿಸ್ತೀನಿ ಬಾ ಎಂದು boyfriendನನ್ನು ಜತೆಗಾಕಿಕೊಂಡು ಮುಂಬೈ ಅಲ್ಲಿ ಇಲ್ಲಿ ಅಂತ ಬಿಂದಾಸ್ ಆಗಿ ವಿಮಾನಗಳಲ್ಲಿ ಹಾರಾಡತೊಡಗಿದಳು.

ಆದರೆ ಅಷ್ಟೆಲ್ಲಾ ದುಡ್ ಇರೋವಾಗ ಒಬ್ನೇ boyfriend ಜತೆ ಎಷ್ಟು ಕಾಲ ಅಂತ ಕಾಲ ಕಳೇಯೋದು. ಅದಕ್ಕೇ ಮೊನ್ನೆ ಫೆಬ್ರವರಿಯಲ್ಲಿ ಅಕ್ಷಯನಿಗೆ ಟಾಟಾ ಹೇಳಿದಳು. ಅಕ್ಷಯನನ್ನು ಬಿಟ್ಟ ಕೆಲವೇ ದಿನಗಳಲ್ಲಿ ಮಗದೊಬ್ಬ ನೋಯ್ಡಾದಲ್ಲಿ ಸಿಕ್ಕಿಬಿಟ್ಟ. ಅವನ ಹೆಸರು ರುಹಿಲ್ ಅಂತ. ಇಲ್ಲೂ live in relationshipಗೆ ಅಂಟಿಕೊಂಡಳು. ಹಣಕ್ಕಾಗಿ ಮತ್ತೆ ಅದೇ ಅಮೆರಿಕ ಮಹಿಳೆಯ ಕ್ರೆಡಿಟ್ ಕಾರ್ಡನ್ನು ಸಿಕ್ಕಸಿಕ್ಕ ಕಡೆಯಲ್ಲೆಲ್ಲ ಉಜ್ಜಾಡತೊಡಗಿದಳು.

ಆದರೆ ಎಷ್ಟು ದಿನಾ ಅಂತ ಈ ಮೋಜು ಮಸ್ತಿ ವಂಚನೆ !? One fine day ಸಿಕ್ಹಾಕ್ಕೊಂಡುಬಿಟ್ಟಳು. ಸಂತ್ರಸ್ತ ಅಮೆರಿಕದ ಮಹಿಳೆ ಎಲ್ಲೋ ಯಡವಟ್ಟಾಗುತ್ತಿದೆ ಎಂದು ಮೊದಲು ಕ್ರೆಡಿಟ್ ಕಾರ್ಡ್ ಸೇವೆಯನ್ನು ಸ್ಥಗಿತಗೊಳಿಸಿದಳು. ಅದು American Express ಕಂಪನಿ ಕಿವಿಗೂ ಬಿತ್ತು. ಕಳೆದ ಗುರುವಾರ ಕಂಪನಿ ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ಆಗ ಬಯಲಾಯಿತು ಅಕ್ಷಿತಾ ಅತ್ರಿಯ ಬಂಡವಾಳ.

ಪೊಲೀಸರು ಸ್ವಲ್ಪವೇ ತನಿಖೆಗೆ ಇಳಿಯುತ್ತಿದ್ದಂತೆ ಅಕ್ಷಿತಾ ಅತ್ರಿ ಬಟಾಬಯಲಾದಳು. ಪೊಲೀಸರು ಅವಳನ್ನು ಮತ್ತು boyfriend ಅಕ್ಷಯನನ್ನು ಬಂಧಿಸಿದರು. ಜತೆಗೆ, ಅವರ live in ಅಪಾರ್ಟ್ ಮೆಂಟಿನಿಂದ ಎರಡು LCD TVಗಳು, ಕ್ಯಾಮರಾಗಳು, ಲ್ಯಾಪ್ ಟಾಪುಗಳು, 4 Blackberry ಫೋನುಗಳು, ಟ್ಯಾಬ್ಲೆಟ್ PCಗಳು ವಗೈರೆಗಳನ್ನು ವಶಪಡಿಸಿಕೊಂಡರು. ಇದನ್ನೆಲ್ಲ ಆ ಅಮೆರಿಕ ಮಹಿಳೆಯ credit cardನಿಂದ ಖರೀದಿಸಿದ್ದು ಎಂಬು ಬಿಡಿಸಿಹೇಳಬೇಕಿಲ್ಲ. ಈ ಮಧ್ಯೆ, ಅಕ್ಷಿತಾ ಅತ್ರಿಯ ಬಂಧನ ಕೇಳಿ ಮೊದಲ ಗೆಳೆಯ ಅಕ್ಷಯ್ ಕಿಸಕ್ಕನೆ ನಕ್ಕನಂತೆ!

English summary
An American Express BPO's employee in Gurgaon, Akshita Attri, has admitted to withdrawing Rs 11 lakh from an American lady's credit card so she could enjoy shopping and pamper her boyfriends. On Saturday police rounded up Akshita Attri and her boyfriend Ruhil Arora from Ashok Vihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X