ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ನಾಗಲಕ್ಷ್ಮಿ ಅವರಿಂದ 'ಹರಿಯ ಕಾಣಿಕೆ'

By Prasad
|
Google Oneindia Kannada News

ಮೈಸೂರು, ಜು. 17 : ತಾವು ಸ್ವತಃ ಲೇಖಕರಾಗಿದ್ದುದಲ್ಲದೆ ವಿಶ್ವದಾದ್ಯಂತ ಅಸಂಖ್ಯ ಉದಯೋನ್ಮುಖ ಲೇಖಕರನ್ನು ಹುರಿದುಂಬಿಸಿ ಬೆಳೆಸಿದ ಖ್ಯಾತ ಲೇಖಕ, ಕವಿ, ವಿಮರ್ಶಕ ದಿ. ಶಿಕಾರಿಪುರ ಹರಿಹರೇಶ್ವರ (1936 - July 22, 2010) ಅವರು ಅಗಲಿ ಜುಲೈ 22ನೇ ತಾರೀಖಿಗೆ ಎರಡು ವರ್ಷಗಳಾಗುತ್ತವೆ.

Shikaripura Harihareshwara (1936 - 2010)

ಈ ಸಂದರ್ಭದಲ್ಲಿ ಅವರ ಎರಡನೇ ವರ್ಷದ ಸವಿನೆನಪಿನಲ್ಲಿ ಹರಿಯವರು ಬರೆದಿರುವ ಸಮಗ್ರ ಪ್ರಬಂಧಗಳನ್ನು ಅವರ ಪತ್ನಿ ನಾಗಲಕ್ಷ್ಮಿ ಹರಿಹರೇಶ್ವರ ಅವರು ಸಂಪಾದಿಸಿ 'ಹರಿಯ ಕಾಣಿಕೆ' ಎಂಬ ಶೀರ್ಷಿಕೆಯಡಿಯಲ್ಲಿ ಸುಮಾರು ಒಂದು ಸಾವಿರದ ಐದುನೂರು ಪುಟಗಳ ಎರಡು ಬೃಹತ್ ಸಂಪುಟಗಳನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೃತಿಗಳನ್ನು ಲೋಕಾರ್ಪಣೆಯನ್ನು ಪ್ರೊ| ಎನ್.ಎಸ್. ತಾರಾನಾಥ್, ಕನ್ನಡ ಅಧ್ಯಯನ ಕೇಂದ್ರ, ಮೈಸೂರು ಹಾಗೂ ಗ್ರಂಥಾವಲೋಕನವನ್ನು ಪ್ರೊ| ಕೆ. ಅನಂತರಾಮು ನಿವೃತ್ತ ಕನ್ನಡ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾನಿಲಯ ಇವರು ನಡೆಸಿಕೊಡಲಿದ್ದಾರೆ. ಹಾಗೇನೆ ಹರಿಯವರಿಗೆ ಯಕ್ಷಗಾನ ಎಂದರೆ ತುಂಬಾ ಪ್ರೀತಿ. ಅವರ ಆಸೆ ನೆರವೇರಿಸುವ ನಿಟ್ಟಿನಲ್ಲಿ ಕೇಂದ್ರದ ಯಕ್ಷಗುರು ಮಲ್ಪೆ ಪ್ರದೀಪ ವಿ. ಸಾಮಗ ರವರ ನಿರ್ದೇಶನದಲ್ಲಿ ಕರಾವಳಿ ಕಲಾವಿದರಿಂದ 'ಪಾಶುಪತಾಸ್ತ್ರ' ಯಕ್ಷಗಾನವನ್ನು ಏರ್ಪಡಿಸಲಾಗಿದೆ.

ಜುಲೈ 22ನೇ ತಾರೀಖು ಭಾನುವಾರ, ಬೆಳಿಗ್ಗೆ 10.30ಕ್ಕೆ ಶಾರದಾವಿಲಾಸ ಕಾಲೇಜು ಶತಮಾನೋತ್ಸವ ಭವನ, ಕೃಷ್ಣಮೂರ್ತಿ ಪುರಂ, ಬಲ್ಲಾಳ್ ವೃತ್ತದ ಬಳಿ, ಮೈಸೂರು ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾವುಗಳು ದಯವಿಟ್ಟು ಬರಬೇಕಾಗಿ ತಮ್ಮಲ್ಲಿ ಕೋರುತ್ತೇನೆ ಎಂದು ನಾಗಲಕ್ಷ್ಮಿ ಹರಿಹರೇಶ್ವರ ಅವರು ಆಹ್ವಾನ ನೀಡಿದ್ದಾರೆ.

ಅಧ್ಯಕ್ಷತೆ ಮತ್ತು ಕೃತಿಗಳ ಲೋಕಾರ್ಪಣೆ : ಪ್ರೊ. ಎನ್.ಎಸ್. ತಾರಾನಾಥ್, ಕನ್ನಡ ಅಧ್ಯಯನ ಕೇಂದ್ರ, ಮೈಸೂರು

ಗ್ರಂಥಾವಲೋಕನ : ಪ್ರೊ. ಕೆ. ಅನಂತರಾಮು, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ.

ದಿನಾಂಕ, ಸಮಯ : ಜು.22, ಭಾನುವಾರ, ಬೆಳಿಗ್ಗೆ 10.30ಕ್ಕೆ.

English summary
Nagalakshmi Harihareshwara has edited 2 volumes of essay collections of Shikaripura Harihareshwara in Mysore on July 22, 2012, on the occasion of 2nd death anniversary of Harihareshwara. Prof NS Taranath will be releasing the book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X