• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದೋ ಅಥವಾ ನಾಳೆ KMF ರೆಡ್ಡಿ ಬಂಧನ

By Srinath
|
ಬಳ್ಳಾರಿ, ಜುಲೈ 16: ಸೋದರ ಜನಾರ್ದನ ರೆಡ್ಡಿಗೆ ಸೆರೆವಾಸದಿಂದ ಮುಕ್ತಿ ದೊರಕಿಸಲು ಕೋಟ್ಯಂತರ ರು. ಲಂಚ ನೀಡಿ ಜಾಮೀನು ಪಡೆದ ಆಪಾದನೆ ಮೇಲೆ ಕೆಎಂಎಫ್ ಗೋಪಾಲಕ ಸೋಮಶೇಖರ ರೆಡ್ಡಿಯ ಮೇಲೆ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳದ (ACB) ಮುಷ್ಟಿ ಬಿಗಿಯಾಗಿದ್ದು, ಇಂದೋ ಅಥವಾ ನಾಳೆ ಅವರ ಬಂಧನವಾಗುವುದು ಖಚಿತವಾಗಿದೆ. ಶಾಸಕ ಕಂಪ್ಲಿ ಬಾಬು ಸಹ ಸೋಮಶೇಖರ ರೆಡ್ಡಿಯ ಜತೆ ಹೆಜ್ಜೆ ಹಾಕಲಿದ್ದಾರೆ.

ನಿಖರವಾಗಿ ಒಂದೊಂದೇ ಸಾಕಕ್ಷ್ಯಗಳನ್ನು ಸಂಗ್ರಹಿಸಿಕೊಂಡು ಬಳ್ಳಾರಿವರೆಗೂ ಬಂದಿರುವ ACB ತಂಡದ ಪಕಡ್ ಬಂಧಿ ಬಲವಾಗಿದ್ದು, ಜಡ್ಜ್ ಪಟ್ಟಾಭಿ ಲಂಚ ಪ್ರಕರಣದಲ್ಲಿ ಪ್ರಧಾನ ಪಾತ್ರಧಾರಿಗಳಾದ KMF ರೆಡ್ಡಿ ಮತ್ತು ಕಂಪ್ಲಿ ಬಾಬು 6 ಮತ್ತು 7ನೆಯವರಾಗಿ ACB ಪಾಲಾಗಲಿದ್ದಾರೆ. ಈ ಮಧ್ಯೆ ಲಂಚ ಪ್ರಕರಣ ಸಿಬಿಐ ತನಿಖೆಗೆ ಮರಳಲಿದೆ.

ವಾಸ್ತವವಾಗಿ ಜಡ್ಜ್ ಪಟ್ಟಾಭಿ ಲಂಚ ಪ್ರಕರಣವನ್ನು ತಾನೇ ನಡೆಸಬೇಕೋ ಅಥವಾ ಸಿಬಿಐ ರಾಜ್ಯ ಸರಕಾರವನ್ನು ಕೋರಿರುವಂತೆ ಮರಳಿ ಸಿಬಿಐಗೇ ತನಿಖೆಗೆ ಒಪ್ಪಿಸಬೇಕೋ ಎಂಬುದು ಇತ್ಯರ್ಥವಾಗದ ಕಾರಣ KMF ರೆಡ್ಡಿ ಮತ್ತು ಕಂಪ್ಲಿ ಬಾಬು ವಿಚಾರಣೆ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜಡ್ಜುಗಳಾದ ಪಟ್ಟಾಭಿ, ಚಲಪತಿರಾವ್, ಪ್ರಭಾಕರ ರಾವ್, ಲಕ್ಷ್ಮಿನರಸಿಂಹ ರಾವ್, ಪಟ್ಟಾಭಿ ಪುತ್ರ ರವಿಚಂದ್ರ, ರೌಡಿಶೀಟರ್ ಯಾದಗಿರಿ ರಾವ್ ಈಗಾಗಲೇ ACB ಆತಿಥ್ಯದಲ್ಲಿದ್ದಾರೆ.

ಜನಾರ್ದನ ರೆಡ್ಡಿಯ ಜಾಮೀನಿಗಾಗಿ KMF ಸೋಮಶೇಖರ ರೆಡ್ಡಿ, ಆತನ ಮತ್ತೊಬ್ಬ ಸಂಬಂಧಿ ದಶರಥ ರೆಡ್ಡಿ ಮತ್ತು ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ತನಗೆ 20 ಕೋಟಿ ರುಪಾಯಿ ಹಣ ನೀಡಿದರು ಎಂದು ಯಾದಗಿರಿ ರಾವ್ ಹೇಳಿಕೆ ನೀಡಿರುವುದು ಇವರುಗೆಲ್ಲ ಮುಳುಗುನೀರು ತಂದಿದೆ. ಯಾದಗಿರಿಯ mobile call details ಮತ್ತು ಸಂದರ್ಭ ಸಾಕ್ಷ್ಯಗಳನ್ನು ಸಂಗ್ರಹಿಸಿರುವ CBI ಮತ್ತು ACB ಪ್ರಕರಣದ ಆಳ-ಅಗಲಗಳನ್ನು ಸಮಸ್ತವಾಗಿ ಜಾಲಾಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to ACB sources history sheeter P. Yadagiri Rao an accused in the cash-for- bail case, has confessed that the deal struck between him and jailed mining baron Gali Janardhan Reddy’s brother Somashekara Reddy was for Rs 20 crore. As an after effect to this Somashekara Reddy may be arrested by ACB any moment. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more