ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ 224 ಸ್ಥಾನಕ್ಕೂ ಏಕಾಂಗಿಯಾಗಿ ಸ್ಪರ್ಧಿಸುವೆ

By Srinath
|
Google Oneindia Kannada News

bsr-congress-224-seats-vidhan-sabha-polls-sriramulu
ಬೆಂಗಳೂರು, ಜುಲೈ 14: BSR Congress ಸಂಸ್ಥಾಪಕ ಬಿ ಶ್ರೀರಾಮುಲು ಅವರು 'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 224 ಸ್ಥಾನಕ್ಕೂ ಏಕಾಂಗಿಯಾಗಿ ಸ್ಪರ್ಧಿಸುವೆ' ಎಂದು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ. ಮಾಜಿ ಕಂದಾಯ ಸಚಿವ ಗಿ ಕುರುಣಾಕರ ರೆಡ್ಡಿ ಮತ್ತು ಯಡಿಯೂರಪ್ಪ ವಿರುದ್ಧವೂ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವೆ. ಏಕೆಂದರೆ ಅವರಿಬ್ಬರೂ ನನ್ನ ಸಮಾನ ವಿರೋಧಿಗಳು' ಎಂದು ಅವರು ಘೋಷಿಸಿದ್ದಾರೆ.

'ಯಾವುದೇ ಪಕ್ಷದೊಂದಿಗೂ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ' ಎಂದು ಸ್ಪಷ್ಟಪಡಿಸಿದ ಶ್ರೀರಾಮುಲು ಅವರು ಸೋಮಶೇಖರ ರೆಡ್ಡಿ ಮತ್ತು ಕಂಪ್ಲಿ ಬಾಬು ಮುಂದಿನ ಚುನಾವಣೆಯಲ್ಲಿ ತಮ್ಮ ಹೊಸ ಪಕ್ಷದ ವತಿಯಿಂದ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದರು. ಇವರಿಬ್ಬರೂ ಪ್ರಸ್ತುತ ಬಿಜೆಪಿಯಲ್ಲಿದ್ದರೂ ಬಂಡಾಯವೆದ್ದು BSR Congressನ ಶ್ರೀರಾಮುಲು ಜತೆ ದೃಢವಾಗಿ ಗುರುತಿಸಿಕೊಂಡಿದ್ದಾರೆ.

'ಮೊದಲಿನಿಂದಲೂ ನಾನು ಜನಾರ್ದನ ರೆಡ್ಡಿ ಅವರ ನಿಷ್ಠ. ಕರುಣಾಕರ ರೆಡ್ಡಿ ಅವರದು ನಿರ್ಬಂಧಿತ ವ್ಯಕ್ತಿ. ಅವರಿನ್ನೂ ಬಿಜೆಪಿಯಲ್ಲಿ ತಮಗೆ ಭವಿಷ್ಯವಿದೆ. ತಾನು ಮತ್ತೊಮ್ಮೆ ಸಚಿವನಾಗುತ್ತೇನೆ ಅಂದುಕೊಂಡಿದ್ದರು. ಆದರೆ ಮೊನ್ನೆ ಅವರಿಗೆ ಭ್ರಮನಿರಸನವಾಗಿರಬೇಕು' ಎಂದು ರಾಮುಲು ಮಾರ್ಮಿಕವಾಗಿ ನುಡಿದರು.

ಜನಾರ್ದನ ರೆಡ್ಡಿ ಸೆಪ್ಟೆಂಬರ್ 5ರಂದು ಸಿಬಿಐ ಪಾಲು ಆಗುತ್ತಿದ್ದಂತೆ KMF ಸೋಮಶೇಖರ ರೆಡ್ಡಿ ಮತ್ತು ಕಂಪ್ಲಿ ಬಾಬು ರೆಡ್ಡಿಯನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಹರಸಾಹಸಪಡುತ್ತಿದ್ದಾರೆ. ಮತ್ತು ಶ್ರೀರಾಮುಲು ತಮ್ಮ ಸಂಪೂರ್ಣ ನಿಷ್ಠೆಯನ್ನು ಜನಾ ರೆಡ್ಡಿಗೇ ಮೀಸಲಿಟ್ಟಿದ್ದಾರೆ. ಆದರೆ ಇದೇ ಕರುಣಾಕರ ರೆಡ್ಡಿ ಅವರತ್ತ ತಲೆ ಹಾಕಿಲ್ಲ.

ಈ ಮಧ್ಯೆ, ಕರುಣಾಕರ ರೆಡ್ಡಿ ಅವರು ಯಡಿಯೂರಪ್ಪ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಶೆಟ್ಟರ್ ನೂತನ ಸಂಪುಟ ರಚನೆ ಬಗ್ಗೆ ತೀವ್ರ ಅತೃಪ್ತಿ ವ್ತಕ್ತಪಡಿಸಿರುವ ಕರುಣಾಕರ ತಮ್ಮ ಬೆಂಬಲಿಗರೊಂದಿಗೆ ಸತತ ಮಾತುಕತೆಯಲ್ಲಿ ತೊಡಗಿದ್ದಾರೆ. ಅವರ ಜತೆಗೆ ಲಕ್ಷ್ಮಣ ಸವದಿ, ಸಿಸಿ ಪಾಟೀಲ್, ಬೇಳೂರು ಗೋಪಾಳ ಕೃಷ್ಣ, ಕರಡಿ ಸಂಗಣ್ಣ, ಸುರೇಶ್ ಗೌಡ ಮತ್ತಿತರ ಶಾಸಕರು ಗುರುತಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕ ಕರುಣಾಕರ ರೆಡ್ಡಿ ಅವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಶಿನವಾರ ಬೆಳಗ್ಗೆಯೂ ಅತೃಪ್ತರ ಜತೆಗೂಡಿ ಉಪಹಾರ ಸಭೆ ನಡೆಸಿದ್ದಾರೆ.

English summary
BSR Congress to feild all 224 seats in Vidhan Sabha polls declares Sriramulu. Also he clarified that he would not seek a seat-sharing arrangement with any party in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X