17 ವರ್ಷದ ಯುವತಿ ಮೇಲೆ 20 ಜನ ದಾಳಿ

Posted By:
Subscribe to Oneindia Kannada
Guwahati: Mob molest minor, only 11 arrested so far
ಗುವಾಹಟಿ, ಜು.13: ಜನನಿಬಿಡ ಕ್ರಿಶ್ಚಿಯನ್ ಬಸ್ತಿ ಪ್ರದೇಶದಲ್ಲಿ 17 ವರ್ಷದ ಯುವತಿ ಮೇಲೆ 20 ಜನರ ತಂಡ ಏಕಾಏಕಿ ದಾಳಿ ನಡೆಸಿದೆ. ಆಕೆಯನ್ನು ನಡು ರಸ್ತೆಯಲ್ಲಿ ವಿವಸ್ತ್ರಗೊಳಿಸಿ ಅತ್ಯಾಚಾರಗೊಳಿಸಿದ ಭಯಾನಕ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಗುವಾಹಟಿಯ ಬಾರ್ ಒ೦ದರ ಹೊರಗೆ 20 ಮ೦ದಿ ಯುವಕರ ಗು೦ಪೊ೦ದು ಹನ್ನೊ೦ದನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಕಳೆದ ಸೋಮವಾರ ರಾತ್ರಿ ಸತತ ಅರ್ಧ ಗಂಟೆಗೂ ಅಧಿಕ ಕಾಲ ಲೈಂಗಿಕ ಕಿರುಕುಳ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ವೀಡಿಯೊ ಕ್ಲಿಪಿ೦ಗ್ ಗಳು ಟಿವಿ ಚಾನೆಲ್ ಗಳು ಮತ್ತು ಯೂ ಟ್ಯೂಬ್ ನಲ್ಲಿ ಪ್ರಸಾರವಾದ ಬಳಿಕವಷ್ಟೇ ಪೊಲೀಸರು ಎಚ್ಚತ್ತುಕೊ೦ಡು ನಾಲ್ವರನ್ನು ಬ೦ಧಿಸಿದ್ದರು. ಆದರೆ ಉಳಿದ ಆರೋಪಿಗಳು ಇನ್ನೂ ಮುಕ್ತವಾಗಿ ಓಡಾಡಿಕೊ೦ಡಿದ್ದಾರೆ. ಬಂಧಿತರಲ್ಲಿ ಸರ್ಕಾರಿ ಅಧಿಕಾರಿ ಇದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರ ನಿಷ್ಕ್ರಿಯತೆ ಬಗ್ಗೆ ದೇಶಾದ್ಯ೦ತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣವನ್ನು ನಾವು ಇಷ್ಟಕ್ಕೇ ಬಿಡುವುದಿಲ್ಲ ಎ೦ದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಪಕ್ಷದ ಗುವಾಹಟಿ ಸ೦ಸದೆ ಬಿಜೊಯ್ ಚಕ್ರವರ್ತಿ ಅವರು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ದುಷ್ಕರ್ಮಿಗಳನ್ನು ಕೂಡಲೇ ಬ೦ಧಿಸುವ೦ತೆ ಆಗ್ರಹಿಸಿದ್ದಾರೆ.

ಪ್ರಕರಣದ 11 ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಪತ್ತೆಗೆ ಕನಿಷ್ಠ ಒ೦ದು ವಾರವಾದರೂ ಕಾಲಾವಕಾಶ ಬೇಕೆ೦ದು ಪೊಲೀಸರು ತಿಳಿಸಿದ್ದಾರೆ. ನಾವು 11 ಆರೋಪಿಗಳನ್ನು ಗುರುತಿಸಿದ್ದೇವೆ. ಅವರನ್ನು ತಕ್ಷಣ ಬ೦ಧಿಸುವ ಯೋಚನೆಯಿಲ್ಲ. ಆದರೆ ಅವರ ವಿರುದ್ಧ ಚಾರ್ಜ್ ಶೀಟ್ ದಾಖಲಿಸುತ್ತೇವೆ. ಒಟ್ಟಾರೆಯಾಗಿ ಸಿಕ್ಕವರನ್ನೆಲ್ಲ ಬ೦ಧಿಸುವುದರಿ೦ದ ಕೇಸು ಬಿದ್ದುಹೋಗುವ ಅಪಾಯವಿರುತ್ತದೆ.

ಯುವತಿಯನ್ನು ಥಳಿಸುತ್ತಿರುವ ವಿಡಿಯೋ ಕ್ಲಿಪ್ಪಿಂಗ್ ಗಳು ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಎಲ್ಲಾ ವಿಡಿಯೋ ಸಾಕ್ಷ್ಯ ಹಾಗೂ ಲಭ್ಯ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಜಯಂತೋ ಎನ್ ಚೌಧುರಿ ಹೇಳಿದ್ದಾರೆ.

ಸ್ಥಳೀಯ ಪಬ್ ವೊಂದರಲ್ಲಿ ಸ್ನೇಹಿತರ ಹುಟ್ಟುಹಬ್ಬದ ಸಂಭ್ರಮ ಆಚರಿಸಲು ಈ ಯುವತಿ ಹೋಗಿದ್ದಳು. ಪಾರ್ಟಿ ಮುಗಿಸಿಕೊಂಡು ಹಿಂತಿರುಗುವಾಗ ಈ ಘಟನೆ ನಡೆದಿದೆ. ಆದರೆ, ಅತ್ಯಾಚಾರ ಎಸೆಗಿದ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಗತ್ಯಬಿದ್ದರೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಗುವಾಹಟಿ ಮಹಿಳೆಯರಿಗೆ ಸುರಕ್ಷಿತ ತಾಣವಾಗಿದೆ. ಈ ರೀತಿ ಘಟನೆ ಈ ಹಿಂದೆ ನಡೆದಿಲ್ಲ. ವಿಡಿಯೋ ಕ್ಲಿಪ್ಪಿಂಗ್ ಹರಿದಾಟದ ಬಗ್ಗೆ ನಿಗಾವಹಿಸಲಾಗುವುದು. ವಿಡಿಯೋ ಚಿತ್ರೀಕರಿಸಿದವರ ಮೇಲೂ ಕ್ರಮ ಕೈಗೊಳ್ಳಲಾಗುವುದು, ಪಬ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a horrific incident that took place in Guwahati, Assam, a minor girl was molested, thrashed, beaten up and stripped in full public view for at-least 30 minutes on Monday near the Christian Basti area by a group of 20 men.
Please Wait while comments are loading...