• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಸ್ಲಿಂ ಸಮಾವೇಶಕ್ಕೆ ಆನ್ ಲೈನ್ ಮೂಲಕ ಆಹ್ವಾನ

By Mahesh
|

ಬೆಂಗಳೂರು, ಜು.13: ಜೆಡಿಎಸ್ ಪಕ್ಷದ ಅಲ್ಪ ಸಂಖ್ಯಾತರ ಸಮಾವೇಶ ಜು.15 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ(ಜು.13) ಹೇಳಿದರು.

Muslim convention Bangalore

ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಸಮಾವೇಶದ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಅಲ್ಪಸಂಖ್ಯಾತರನ್ನು ಒಗ್ಗೂಡಿಸುವ ಐತಿಹಾಸಿಕ ಸಮಾವೇಶ ಇದಾಗಲಿದೆ. ಈ ಹಿಂದೆ ಈ ರೀತಿ ಸಮಾವೇಶ ಎಲ್ಲೂ ನಡೆದಿಲ್ಲ ಎಂದರು. ಕುಮಾರಸ್ವಾಮಿ ಅವರ ಜೊತೆಗೆ ಶಾಸಕ ಜಮೀರ್ ಅಹ್ಮದ್ ಖಾನ್, ಮಧು ಬಂಗಾರಪ್ಪ ಹಾಗೂ ಶ್ರೀಕಾಂತ್ ಅವರಿದ್ದರು.

ಮುಸ್ಲಿಂ ಸಮುದಾಯದ ರಕ್ಷಣೆಗೆ ಹಾಗೂ ಬೆಂಬಲಕ್ಕೆ ಜೆಡಿಎಸ್ ಪಕ್ಷ ಇದೆ ಎನ್ನುವುದನ್ನು ತೋರಿಸಲು ಈ ಸಮಾವೇಶ ನಡೆಸುತ್ತಿರುವುದಾಗಿ ಹೇಳಿದರು. ಈ ಸಮಾವೇಶದಲ್ಲಿ ಜಾತಿ ಜಾತಿಗಳ ನಡುವೆ ಹಾಗೂ ಕೋಮು ಕೋಮುಗಳ ನಡುವೆ ಸಂಘರ್ಷ ಹುಟ್ಟು ಹಾಕುತ್ತಿರುವ ಬಿಜೆಪಿ ಸರ್ಕಾರ ತೊಲಗಬೇಕು ಎಂಬ ನಿರ್ಣಯ ಕೈಗೊಳ್ಳಲಾಗುವುದು ಎಂದರು.ಉಳಿದಂತೆ..
* ಅಧಿಕಾರ, ಶಿಕ್ಷಣ ಮತ್ತು ಉದ್ಯೋಗದಲ್ಲಿ ತಕ್ಕ ಪಾಲುದಾರಿಕೆಗಾಗಿ
* ಕೋಮುವಾದ ನಿರ್ನಾಮಕ್ಕಾಗಿ
* ಕಾನೂನಿನ ರಕ್ಷಣೆ ಮತ್ತು ನ್ಯಾಯಕ್ಕಾಗಿ
* ಜಾತ್ಯಾತೀತತೆಯ ಉಳಿವಿಗಾಗಿ
* ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅದರ ಸದುಪಯೋಗಕ್ಕಾಗಿ ಮುಸ್ಲಿಂ ಸಮಾವೇಶ ಅನಿವಾರ್ಯವಾಗಿದೆ ಎಂದು ಸಮಾವೇಶ ಕುರಿತ ಜಾಹೀರಾರು ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಪಾಲ್ಗೊಳ್ಳಲಿದ್ದಾರೆ. ಬಹುದಿನಗಳ ನಂತರ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ದೇವೇಗೌಡರು ಮನಸ್ಸು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಸಮಾವೇಶದ ನಂತರ ಹುಬ್ಬಳ್ಳಿಯಲ್ಲಿ ಮಹಿಳಾ ಸಮಾವೇಶ, ತುಮಕೂರಿನಲ್ಲಿ ಪರಿಶಿಷ್ಟ ಜಾತಿ ವರ್ಗ ಸಮಾವೇಶ, ಮಂಗಳೂರು ಹಾಗೂ ಗುಲ್ಬರ್ಗಾದಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಬರ ಇರುವಾಗ ಬಿಜೆಪಿ ಶಾಸಕರು ಸಚಿವ ಗಿರಿಗಾಗಿ ಕಿತ್ತಾಡುತ್ತಿರುವುದನ್ನು ನೋಡಿದರೆ ಬಿಜೆಪಿ ಸರ್ಕಾರ ಕರ್ನಾಟಕವನ್ನು ಬಿಹಾರ ಮಾಡಲು ಹೊರಟಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಪಾದಯಾತ್ರೆ: ಮೈಸೂರು ಜೆಡಿಎಸ್ ಘಟಕ ಮೈಸೂರಿನಿಂದ ಬೆಂಗಳೂರಿನ ತನಕ ಪಾದಯಾತ್ರೆ ಹಮ್ಮಿಕೊಂಡಿದೆ. ಅರಮನೆ ಮೈದಾನದಲ್ಲಿ ನಡೆಯುವ ಮುಸ್ಲಿಂ ಸಮಾವೇಶದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಸನ್ಮಾನಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಅಜೀಜ್ ಉಲ್ಲಾ ಅಜ್ಜು ಹೇಳಿದರು.

ಪಾದಯಾತ್ರೆ ಈದ್ ಮಿಲಾದ್ ಪಾರ್ಕ್ ನಿಂದ ಆರಂಭಗೊಂಡು ಶ್ರೀರಂಗಪಟ್ಟಣ, ಮಂಡ್ಯ, ಚನ್ನಪಟ್ಟಣ, ರಾಮನಗರ, ಬಿಡದಿ, ರಾಜರಾಜೇಶ್ವರಿ ನಗರ ತಲುಪಲಿದೆ ನಂತರ ಅಲ್ಲಿಂದ ಅರಮನೆ ಮೈದಾನಕ್ಕೆ ತೆರಳುವ ವ್ಯವಸ್ಥೆ ಮಾಡಲಾಗಿದೆ ಎಂದು ಅಜ್ಜು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮುಸ್ಲಿಂ ಸುದ್ದಿಗಳುView All

English summary

 MLA Zameer Ahmed Khan would be felicitated on the occasion of Muslim Convention organisation by JDS unit due to be held on July 15 at Palace Ground Bangalore said JDS state committe member Azeez Ulla Ajju. More than one lakh Muslim brethren are likely to attend the function. Thousands of Mulims go on Padayatra from Mysore to Bangalore said HD Kumaraswamy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more