ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗದೀಶ್ ಶೆಟ್ಟರ್ ಪ್ರಮಾಣ ಸ್ವೀಕಾರ; ಹೊಸಬರ ವಿವರ

By Srinath
|
Google Oneindia Kannada News

ಬೆಂಗಳೂರು, ಜುಲೈ 12: ರಾಜ್ಯದ 21ನೆಯ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅವರು ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ದೇವರ ಹೆಸರಿನಲ್ಲಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಭಾರದ್ವಾಜ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಇಬ್ಬರು ಡೆಪ್ಯುಟಿಗಳು: ಇದೇ ವೇಳೆ, ಕೌಡಿಕಿ ಶರಣಪ್ಪ ಈಶ್ವರಪ್ಪ ಮತ್ತು ರಾಮಯ್ಯ ಅಶೋಕ್ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಬ್ಬರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಉಳಿದಂತೆ 31 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹೊಸದಾಗಿ ಸೇರ್ಪಡೆಯಾದ 11 ಮಂದಿ:
ಸುನಿಲ್ ವಲ್ಯಾಪುರೆ
ಅಪ್ಪಚ್ಚು ರಂಜನ್
ಬಿಜೆ ಪುಟ್ಟಸ್ವಾಮಿ
ಕೋಟಾ ಶ್ರೀನಿವಾಸ ಪೂಜಾರಿ
ಕಳಕಪ್ಪ ಬಂಡಿ
ಆನಂದ ಸಿಂಗ್
ಅರವಿಂದ ಲಿಂಬಾವಳಿ
ಎಸ್ ಕೆ ಬೆಳ್ಳುಬ್ಬಿ
ಸಿಟಿ ರವಿ
ಜೀವರಾಜ್
ಸೊಗಡು ಶಿವಣ್ಣ

20 ಮಂದಿ ಹಳಬರು:

ಉಮೇಶ್ ಕತ್ತಿ, ಗೋವಿಂದ ಕಾರಜೋಳ, ಸುರೇಶ್ ಕುಮಾರ್, ಬೊಮ್ಮಾಯಿ, ಉದಾಸಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ರೇಣುಕಾಚಾರ್ಯ, ಸಿ.ಪಿ. ಯೋಗೀಶ್ವರ್, ಬಿ.ಎನ್. ಬಚ್ಚೇಗೌಡ, ಮುರುಗೇಶ್ ನಿರಾಣಿ, ರೇವೂನಾಯಕ ಬೆಳಮಗಿ, ಆನಂದ ಆಸ್ನೋಟಿಕರ್, ಎಸ್.ಎ. ರಾಮದಾಸ್, ಎ.ನಾರಾಯಣ ಸ್ವಾಮಿ, ರವೀಂದ್ರನಾಥ್, ಬಾಲಚಂದ್ರ ಜಾರಕಿಹೊಳಿ, ರಾಜೂಗೌಡ, ವರ್ತೂರು ಪ್ರಕಾಶ್.

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ ಕುಮಾರ್, ಜಗದೀಶ್ ಶೆಟ್ಟರ್ ಅವರ ಕುಟುಂಬ ವರ್ಗ, ಹಿರಿಯ ರಾಜಕೀಯ ನಾಯಕರು, ಅಧಿಕಾರಿಗಳು, ಮತ್ತು ಅಪಾರ ಬೆಂಬಲಿಗರು ರಾಜಭವನದಲ್ಲಿ ಹಾಜರಿದ್ದರು. ನಿಕಟಪೂರ್ವ ಮುಖ್ಯಮಂತ್ರಿ ಸದಾನಂದ ಗೌಡ, ಬಿಜೆಪಿಯ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿ ಸೇರಿದಂತೆ ನೂತನ ಸಚಿವರ ಅಭಿಮಾನಿಗಳು ರಾಜಭವನದ ಹೊರಗೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ತಮ್ಮ ನೆಚ್ಚಿನ ಸಚಿವರಿಗೆ ಜಯಘೋಷ ಹಾಕುತ್ತಿದ್ದ ಅಭಿಮಾನಿಗಳನ್ನು ತಹಬಂದಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಗೆ ಮಾನ್ಯತೆ ಸಿಕ್ಕಿಲ್ಲವೆಂದು ಕರಡಿ ಸಂಗಣ್ಣ ಮತ್ತು ಗಂಗಾವತಿ ಶಾಸಕ ಪರಣ್ಣ ಮನನವಳ್ಳಿ ಅವರು ಶೆಟ್ಟರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Jagadish Shettar sworn-in as 21st Chief Minister of Karnataka by Governor Bhardwaj a short while ago (July 12) in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X